ಪ್ಲೇ ಆಫ್ ರೇಸ್.. RCB ಸೇಫ್ – TOP & MIDನಲ್ಲಿ ಪ್ಲಸ್ ಏನು?
MIRACLE ಝೋನ್ ನಲ್ಲಿ ಯಾರೆಲ್ಲಾ?

ಪ್ಲೇ ಆಫ್ ರೇಸ್.. RCB ಸೇಫ್ – TOP & MIDನಲ್ಲಿ ಪ್ಲಸ್ ಏನು?MIRACLE ಝೋನ್ ನಲ್ಲಿ ಯಾರೆಲ್ಲಾ?

ಐಪಿಎಲ್​ ಅಖಾಡದಲ್ಲಿ ಇನ್ಮುಂದೆ ದಿನಕ್ಕೊಂದು ಟ್ವಿಸ್ಟ್ ಇರುತ್ತೆ. ಒಬ್ಬರ ಸೋಲು ಮತ್ತೊಬ್ಬರಿಗೆ ಪ್ಲಸ್ ಆದ್ರೆ ಇನ್ನೊಬ್ಬರ ಗೆಲುವು ಮತ್ಯಾರಿಗೋ ಶಾಪವಾಗುತ್ತೆ. ಯಾಕಂದ್ರೆ ಪ್ಲೇ ಆಫ್ ಲೆಕ್ಕಾಚಾರಗಳೇ ಹಾಗೆ. ಆಲ್ರೆಡಿ ಐದು ತಂಡಗಳು ಟಾಪ್ 4ನಲ್ಲಿ ಚಾನ್ಸ್ ಪಡೆಯೋಕೆ ಇನ್ನೆರಡು ಹೆಜ್ಜೆಗಳಷ್ಟೇ ಬಾಕಿ ಎನ್ನುವಂತಿದೆ. ಐಪಿಎಲ್​ನಲ್ಲಿ ಸೆಕೆಂಡ್ ಆಫ್ ಸ್ಟಾರ್ಟ್ ಆದಾಗ್ಲೇ ಪ್ಲೇ ಆಫ್ ಬಾಗಿಲು ಕೂಡ ಓಪನ್ ಆಗುತ್ತೆ. ಟಾಪ್ ಪ್ಲೇಸ್​ನಲ್ಲಿರೋ ಟೀಮ್ಸ್ ಪ್ರೆಶರ್ ಫ್ರೀಯಾಗಿ ಇರ್ತಾರೆ. ಮಿಡಲ್ ಪ್ಲೇಸ್​ನಲ್ಲಿರೋರಿಗೆ ಟೆನ್ಷನ್ ಇರುತ್ತೆ. ಬಟ್ ಬಾಟಮ್​ನಲ್ಲಿ ಇರೋರಿಗೆ ಡೇಂಜರ್ ಜೋನ್. ಒಂದೆರಡು ಸೋಲುಗಳು ಬಂದ್ರೂ ಪ್ಲೇ ಆಫ್ ರೇಸ್​ನಿಂದ ಹೊರಬೀಳ್ತಾರೆ.

ಇದನ್ನೂ ಓದಿ : ಇನ್ಮುಂದೆ BMTC ಬಸ್‌, ನಮ್ಮ ಮೆಟ್ರೋಗೆ ಒಂದೇ ಕಾರ್ಡ್‌! – ಸ್ಮಾರ್ಟ್‌ ಕಾರ್ಡ್ ವಿತರಣೆ ಯಾವಾಗಿನಿಂದ?

ಎಷ್ಟು ಅಂಕ ಇದ್ರೆ ಸೇಫ್?

18 ಅಂಕಗಳು ಬಂದ್ರೆ ಪ್ಲೇ ಆಫ್ 100% ಪಕ್ಕಾ

16 ಅಂಕಗಳು ಬಂದ್ರೆ ಟಾಪ್ 4ನಲ್ಲಿ ಸ್ಥಾನ ನಿರೀಕ್ಷಿತ

14 ಅಂಕಗಳು ಇದ್ರೆ 4ನೇ ಸ್ಥಾನದಲ್ಲಿ ನೆಟ್ ರನ್ ರೇಟ್ ಮುಖ್ಯ

ಇದನ್ನ ನೋಡಿದಾಗ ಒಂದಂತೂ ಕ್ಲಿಯರ್ ಆಗ್ತಿದೆ. 16+ ಅಂಕ ಬಂದ್ರೆ ಟಾಪ್ 4 ಗ್ಯಾರಂಟಿ ಅನ್ನೋದು. ಐಪಿಎಲ್ ಇತಿಹಾಸದಲ್ಲಿ 16 ಅಂಕ ಬಂದ ಯಾವುದೇ ತಂಡ ಪ್ಲೇಆಫ್​ನಲ್ಲಿ ಅವಕಾಶದಿಂದ ವಂಚಿತವಾಗಿಲ್ಲ. ಪಾಯಿಂಟ್ಸ್ ಪಟ್ಟಿಯಲ್ಲಿ 10 ತಂಡಗಳನ್ನ 3 ಗುಂಪುಗಳಾಗಿ ಡಿವೈಡ್ ಮಾಡಿದ್ದಾರೆ.

12+ ಅಂಕ.. ಪ್ಲೇಆಫ್ ಗೆ ಮುಂಚೂಣಿ!

ತಂಡ                                ಅಂಕ                         ಬೇಕಾಗಿರುವ ಗೆಲುವು

ಪಂಜಾಬ್                            13                            5ರಲ್ಲಿ 2 ಗೆಲುವು

ಬೆಂಗಳೂರು                          12                            5ರಲ್ಲಿ 2 ಗೆಲುವು

ಹೈದ್ರಾಬಾದ್                        12                             4ರಲ್ಲಿ 2 ಗೆಲುವು

ರಾಜಸ್ಥಾನ                           12                             4ರಲ್ಲಿ 2 ಗೆಲುವು

ಗುಜರಾತ್                           12                             4ರಲ್ಲಿ 2 ಗೆಲುವು

ಇಲ್ಲಿ ಟಾಪ್ 5 ನಲ್ಲಿರೋ ತಂಡಗಳಿಗೆ ಪ್ಲೇಆಫ್​ಗೆ ಹೋಗೋಕೆ ಇನ್ನೆರಡು ಗೆಲುವುಗಳು ಸಾಕಾಗುತ್ತೆ. ಹಾಗಂತ 16 ಅಂಕ ಬಂದವ್ರೆಲ್ಲಾ ಪ್ಲೇಆಫ್​ಗೆ ಪಕ್ಕಾ ಅಂತಲ್ಲ. ಟಾಪ್​ 4ನಲ್ಲಿ ಚಾನ್ಸ್ ಪಡೆಯೋಕೆ ನೆಟ್ ರನ್​ರೇಟ್ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಸೋ ಸದ್ಯಕ್ಕಂತೂ ಇವ್ರೆಲ್ಲಾ ಸೇಫ್ ಜೋನ್​ನಲ್ಲಿ ಇರೋವ್ರು. ನೆಕ್ಸ್​ಟ್ ಮಿಡ್ ಟೇಬಲ್​ ಫೈಟ್​ನಲ್ಲಿ ಯಾರೆಲ್ಲಾ ಇದ್ದಾರೆ.

8 ಅಂಕ.. ಪ್ಲೇಆಫ್ ಸಂಕಷ್ಟ!

ತಂಡ                                ಅಂಕ                         ಬೇಕಾಗಿರುವ ಗೆಲುವು

ಡೆಲ್ಲಿ                                  8                            5ರಲ್ಲಿ 4 ಗೆಲುವು

ಚೆನ್ನೈ                                8                            5ರಲ್ಲಿ 4 ಗೆಲುವು

ಹೀಗೆ ಡೆಲ್ಲಿ ಮತ್ತು ಚೆನ್ನೈ ತಂಡಕ್ಕೆ ಪ್ಲೇಆಫ್ ಹಾದಿ ಇದೆ. ಬಟ್ ಅದು ಈಸಿ ಇಲ್ಲ. ಕೊನೆಯ ಐದು ಪಂದ್ಯಗಳಲ್ಲಿ ಮಸ್ಟ್ ಌಂಡ್ ಶುಡ್ 4 ಪಂದ್ಯಗಳನ್ನ ಗೆಲ್ಬೇಕು. ಅಸಾಧ್ಯ ಅಂತೇನಿಲ್ಲ. 16 ಅಂಕಗಳನ್ನ ತಲುಪೋಕೆ ಎಲ್ಲಾ ಅವಕಾಶಗಳೂ ಇದೆ. ಬಟ್ ಈಗಿರೋ ಸಿಚುಯೇಷನ್​ನಲ್ಲಿ ಮಿರಾಕಲ್ ನೀಡೆಡ್ ಝೋನ್ ಅಂದ್ರೆ ಮ್ಯಾಜಿಕ್ ನಡೀಬೇಕು ಅನ್ನೋ ಥರದಲ್ಲಿ ಮೂರು ತಂಡಗಳಿವೆ. ಮಸ್ಟ್ ಌಂಡ್ ಶುಡ್ ಪ್ರತೀ ಮ್ಯಾಚ್​ನೂ ಗೆಲ್ಲಲೇಬೇಕು ಅನ್ನೋರು.

4-7 ಅಂಕ.. ಪ್ಲೇಆಫ್ ಕಷ್ಟ ಕಷ್ಟ!

ತಂಡ                                ಅಂಕ                         ಬೇಕಾಗಿರುವ ಗೆಲುವು

ಕೊಲ್ಕತ್ತಾ                              7                            5ರಲ್ಲಿ 5 ಗೆಲುವು

ಮುಂಬೈ                               4                            5ರಲ್ಲಿ 5 ಗೆಲುವು

ಲಕ್ನೋ                                4                             6ರಲ್ಲಿ 6 ಗೆಲುವು

ಈ ಬಾಟಮ್ 3ನಲ್ಲಿರೋ ತಂಡಗಳಲ್ಲಿ ಕೆಕೆಆರ್ ಮಾತ್ರವೇ ಎಲ್ಲಾ ಪಂದ್ಯಗಳನ್ನ ಗೆದ್ರೆ ಸೀದಾ ಪ್ಲೇಆಫ್​ ಸ್ಥಾನಕ್ಕೇರುತ್ತೆ. ಆದ್ರೆ ಮುಂಬೈಗೆ ಎಲ್ಲಾ ಪಂದ್ಯಗಳನ್ನ ಗೆದ್ರೂ ಟೋಟಲ್ ಆಗೋದೇ 14 ಅಂಕ. ಸೋ ನಾಲ್ಕನೇ ಸ್ಥಾನಕ್ಕೆ ರೇಸ್ ಕೊಡ್ಬೋದು ಅಷ್ಟೇ. ಕೊಟ್ರೂ ನೆಟ್ ರನ್​ ರೇಟ್ ಮೈನಸ್ ಇರೋದ್ರಿಂದ ಆಲ್ಮೋಸ್ಟ್ ಪ್ಲೇಆಫ್ ಕನಸು ಬಿಟ್ಟಾಗಿದೆ. ಇನ್ನು ಲಕ್ನೋಗೆ ಇನ್ನೂ 6 ಪಂದ್ಯ ಇರೋದ್ರಿಂದ ಎಲ್ಲವನ್ನೂ ಗೆಲ್ಬೇಕು. ಅದು ಕೂಡ ಕಷ್ಟನೆ. ಸದ್ಯಕ್ಕೇನೋ ಮೋಸ್ಟ್ ಆಫ್ ದಿ ಟೀಮ್ಸ್ ಪ್ಲೇಆಫ್ ರೇಸ್​ನಲ್ಲೇ ಇದ್ದಾರೆ. ಌಂಡ್ ಒಬ್ರು ಮೇಲೆ ಏರ್ತಾ ಇದ್ರೆ ಇನ್ನೊಬ್ರು ಕೆಳಗೆ ಇಳಿತಾನೇ ಇರ್ತಾರೆ. ಟಾಪ್ ಪೊಸಿಷನ್ ನಲ್ಲಿ ಇರೋರಿಗೆ ಒಂದೆರಡು ಪಂದ್ಯ ಸೋತ್ರೂ ದೊಡ್ಡ ಎಫೆಕ್ಟ್ ಆಗಲ್ಲ. ಬಟ್ ಬಾಟಮ್​ನಲ್ಲಿ ಇರೋರಿಗೆ ಒಂದೊಂದು ಪಂದ್ಯವೂ ಮಾಡು ಇಲ್ಲವೇ ಮಡಿ ಅನ್ನೋ ಥರ ಇರುತ್ತೆ.

Shantha Kumari