ಮತ ಎಣಿಕೆ ಕೇಂದ್ರದಲ್ಲಿ ಗಲಾಟೆ – ಕೋಲ್ಕತ್ತಾ ಕೂಚ್ ಬೆಹಾರ್‌ನಲ್ಲಿ ಹೊಡೆದಾಡಿಕೊಂಡ ಬಿಜೆಪಿ-ಟಿಎಂಸಿ ಕಾರ್ಯಕರ್ತರು

ಪಶ್ಚಿಮ ಬಂಗಾಳ ಸೇರಿದಂತೆ 5 ರಾಜ್ಯಗಳ ಚುನಾವಣೆಯ ಎಣಿಕೆ ಪ್ರಕ್ರಿಯೆ ತೀವ್ರ ಕುತೂಹಲ ಹುಟ್ಟಿಸಿದೆ. ಕೆಲ ಕ್ಷಣಗಳಲ್ಲಿ ಬಿಜೆಪಿ ಕೇಸರಿ ಅಲೆ ಬಹುಮತದ ಗಡಿಯನ್ನು ದಾಟುವಂತೆ ಕಾಣುತ್ತಿದ್ದು, ಮತ್ತೊಂದೆಡೆ ಮಮತಾ ಬ್ಯಾನರ್ಜಿಯವರ ಆಟ’ ಇಳಿಮುಖವಾದಂತೆ ಕಾಣುತ್ತಿದೆ. ಇದೀಗ ಮತಎಣಿಕೆ ಕೇಂದ್ರದಲ್ಲಿ ಗಲಾಟೆಯಾಗಿದೆ. ಕೂಚ್ ಬೆಹಾರ್‌ನಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರೀತ್ಸೆ ಅಂತ ಅಪ್ರಾಪ್ತೆಯ ಹಿಂದೆ ಬಿದ್ದ ಯುವಕ! – ಮಗಳ ತಂಟೆಗೆ ಬಂದವನ ಕತೆಯೇ ಮುಗಿಸಿದ ಅಪ್ಪ!
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿದೆ. ಬಿಜೆಪಿ 190, ಟಿಎಂಸಿ 98, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ. ರಾಜ್ಯದಲ್ಲಿ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪಶ್ಚಿಮ ಬಂಗಾಳದಲ್ಲಿ ಸಂಭ್ರಮಾಚರಣೆ ಬ್ಯಾನ್ ಮಾಡಲಾಗಿದೆ. ಈ ಮಧ್ಯೆಯೇ ಕೂಚ್ ಬೆಹಾರ್‌ನಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಅಸನ್ಸೋಲ್ ಎಂಜಿನಿಯರಿಂಗ್ ಕಾಲೇಜಿನ ಎಣಿಕೆ ಕೇಂದ್ರದ ಬಳಿ ನಡೆದ ಘರ್ಷಣೆಯಲ್ಲಿ ಕುರ್ಚಿಗಳು ಮತ್ತು ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಘರ್ಷಣೆಯಲ್ಲಿ ತೊಡಗಿದ್ದ ಜನರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿದರು. ಪಶ್ಚಿಮ ಬಂಗಾಳದ ರಾಷ್ಟ್ರಗುರು ಸುರೇಂದ್ರನಾಥ ಮತ ಎಣಿಕೆ ಕೇಂದ್ರದ ಉತ್ತರ 24 ಪರಗಣದ ಬರಾಕ್‌ಪೋರ್‌ನಲ್ಲಿ ಮತ್ತೊಂದು ಗಲಾಟೆ ನಡೆದಿದೆ.

ನೋಡಿರಿ

