ದಾವಣಗೆರೆ ಕ್ಷೇತ್ರಕ್ಕೆ ಶಾಮನೂರು ಮೊಮ್ಮಗನೇ ದೊರೆ – ಗೆದ್ದು ಬೀಗಿದ ಸಮರ್ಥ್ ಶಾಮನೂರು

ದಾವಣಗೆರೆ ಕ್ಷೇತ್ರಕ್ಕೆ ಶಾಮನೂರು ಮೊಮ್ಮಗನೇ ದೊರೆ – ಗೆದ್ದು ಬೀಗಿದ ಸಮರ್ಥ್ ಶಾಮನೂರು

ದಾವಣಗೆರೆ ಕ್ಷೇತ್ರ ಕಾಂಗ್ರೆಸ್ ಮತ್ತೆ ತನ್ನ ವಶಮಾಡಿಕೊಂಡಿದೆ. ಜಿದ್ದಾಜಿದ್ದಿನ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್​ ಶಾಮನೂರು ಗೆದ್ದು ಬೀಗಿದ್ದಾರೆ. ಮತಎಣಿಕೆ ಆರಂಭವಾದ ಕ್ಷಣದಿಂದಲೂ ಬಿಜೆಪಿ ಅಭ್ಯರ್ಥಿಯೇ ಮುನ್ನಡೆಯಲ್ಲಿದ್ದರು. ವಿಜಯಲಕ್ಷ್ಮೀ ಆ ಕಡೆ ಈ ಕಡೆ ಒಲಿಯುತ್ತಿದ್ದಾಳೆ ಅನ್ನೋವಷ್ಟರಲ್ಲಿ ಗೆಲುವು ಸಮರ್ಥ್ ಪಾಲಾಗಿದೆ.

ಇದನ್ನೂ ಓದಿ:ಮರಳಿ ಕಾಂಗ್ರೆಸ್ ತೆಕ್ಕೆ ಸೇರಿದ ಬಾಗಲಕೋಟೆ ಕ್ಷೇತ್ರ- ಮೇಟಿ ಪುತ್ರ ಉಮೇಶ್ ಮೇಟಿಗೆ ಗೆಲುವು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್​ ಶಾಮನೂರು ಗೆದ್ದು ಬೀಗಿದ್ದಾರೆ. ಮತದಾನ ಆರಂಭಗೊಂಡ ಮೊದಲ 6 ಸುತ್ತಿನಲ್ಲಿಯೂ ಸಮರ್ಥ್ ಶಾಮನೂರು ಹಿನ್ನಡೆ ಸಾಧಿಸಿದರು. 7ನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮುನ್ನಡೆಯಲ್ಲಿದ್ದರು. ಆದ್ರೆ 8 ಹಾಗೂ 9 ನೇ ಸುತ್ತಿನಲ್ಲಿ ಅಂಕಿ-ಸಂಖ್ಯೆ ಉಲ್ಟಾ ಆಗಿದೆ. ಕೊನೆಗೆ ಈ ರಣಕಣದಲ್ಲಿ ಗೆಲುವು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್​ ಶಾಮನೂರು ಪಾಲಾಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬದ ಸಮರ್ಥ್ ಶಾಮನೂರು, ಬಿಜೆಪಿಯಿಂದ ಶ್ರೀನಿವಾಸ ದಾಸ ಕರಿಯಪ್ಪ ಸ್ಪರ್ಧೆ ಮಾಡಿದ್ದರು. ಉಳಿದಂತೆ ಇತರೆ 23 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ ಶೇ. 70 ರಷ್ಟು ಮತದಾನವಾಗಿತ್ತು.

.

Sulekha