ದಳಪತಿ ವಿಜಯ್‌ ಸೋತಿದ್ದಾರೆಂದು ಸುಳ್ಳು ಸುದ್ದಿ ಕೇಳಿ ಕತ್ತು ಕುಯ್ದುಕೊಂಡ ಅಭಿಮಾನಿ! – ಆಮೇಲೆ ಏನಾಯ್ತು?

ದಳಪತಿ ವಿಜಯ್‌ ಸೋತಿದ್ದಾರೆಂದು ಸುಳ್ಳು ಸುದ್ದಿ ಕೇಳಿ ಕತ್ತು ಕುಯ್ದುಕೊಂಡ ಅಭಿಮಾನಿ! – ಆಮೇಲೆ ಏನಾಯ್ತು?

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ಯಾರು ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಖಾಡಕ್ಕೆ ಇಳಿದಿರುವ ದಳಪತಿ ವಿಜಯ್ ಅವರ ಟಿವಿಕೆ ಪಾರ್ಟಿ, ಭರ್ಜರಿ ಗೆಲುವಿನತ್ತ ಸಾಗುತ್ತಿದೆ. ಆದ್ರೀಗ ಚುನಾವಣಾ ಫಲಿತಾಂಶ ಹೊರ ಬೀಳುವ ಮುನ್ನವೇ ದಳಪತಿ ವಿಜಯ್‌ ಅಭಿಮಾನಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಜಯ್‌ ಸೋತಿದ್ದಾರೆ ಎಂಬ ಸುಳ್ಳು ಸುದ್ದಿ ಕೇಳಿ ಆತ್ಮಹತ್ಯಗೆ ಯತ್ನಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿ! – ತಾತ್ಕಾಲಿಕವಾಗಿ ಬಂದ್ ಆಗಿದ್ದ ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ ಓಪನ್‌!

ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗುವ ಮುನ್ನವೇ, ನಟ ವಿಜಯ್ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ ಎಂಬ ವದಂತಿ ಕೇಳಿ ಮನನೊಂದ ಯುವಕ ಆತ್ಮಹತ್ಯೆ ಯತ್ನಿಸಿದ್ದಾನೆ. ಕೃಷ್ಣಗಿರಿಯ ನಿವಾಸಿ ಕೆ. ಮಹೇಂದ್ರನ್ (28) ಆ*ತ್ಮಹ*ತ್ಯೆಗೆ ಯತ್ನಿಸಿದ ವ್ಯಕ್ತಿ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮಹೇಂದ್ರನ್ ಅವರು ನಟ ವಿಜಯ್ ಮತ್ತು ಅವರ ಟಿವಿಕೆ ಪಕ್ಷದ ಪರಮ ಅಭಿಮಾನಿಯಾಗಿದ್ದರು. ಮತ ಎಣಿಕೆ ಪ್ರಕ್ರಿಯೆ ಆರಂಭವಾಗುವ ಮುನ್ನವೇ ವಿಜಯ್ ಚುನಾವಣೆಯಲ್ಲಿ ಸೋಲಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಇದನ್ನು ಕೇಳಿ ತೀವ್ರವಾಗಿ ಆತಂಕಗೊಂಡ ಮಹೇಂದ್ರನ್, ತನ್ನ ಮನೆಯ ಸಮೀಪವೇ ಬ್ಲೇಡ್ ಅಥವಾ ಚೂಪಾದ ವಸ್ತುವಿನಿಂದ ಕುತ್ತಿಗೆ ಕುಯ್ದುಕೊಂಡಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹೇಂದ್ರನ್ ಅವರನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ರಕ್ಷಿಸಿ, ಕೃಷ್ಣಗಿರಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಕುತ್ತಿಗೆಗೆ ತೀವ್ರ ಗಾಯವಾಗಿದ್ದು, ಪ್ರಸ್ತುತ ಅವರಿಗೆ ತುರ್ತು ನಿಗಾ ಘಟಕದಲ್ಲಿ  ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೃಷ್ಣಗಿರಿ ಟೌನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Shwetha M