ಮುಂಬೈ ಮತ್ತು ಲಕ್ನೋ ಮಧ್ಯೆ ಮಾಡು ಇಲ್ಲವೆ ಮಡಿ ಪಂದ್ಯ – ಸೋತವರು ಟೂರ್ನಿಯಿಂದಲೇ ಔಟ್

ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಮುಖಾಮುಖಿಗೆ ಕೌಂಟ್‌ಡೌನ್ ಶುರುವಾಗಲಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಈ ಎರಡು ತಂಡಗಳು ಜೊತೆ ಜೊತೆಯಲ್ಲಿಯೇ ಸಾಗುತ್ತಿವೆ. ಇದೀಗ ಸೋಮವಾರದ ಪಂದ್ಯದಲ್ಲಿ ಸೋತವರು ಸೀದಾ ಟೂರ್ನಿಯಿಂದಲೇ ಔಟ್ ಆಗಲಿದ್ದಾರೆ. ಅಂಕಪಟ್ಟಿಯಲ್ಲಿ ಕೊನೇ ಎರಡು ಸ್ಥಾನದಲ್ಲಿರುವ ತಂಡಗಳ ನಡುವಿನ ಪಂದ್ಯ ರೋಚಕತೆ ಸೃಷ್ಟಿಸಲಿದೆ.
ಇದನ್ನೂ ಓದಿ:ಹ್ಯಾಟ್ರಿಕ್ ಗೆಲುವಿನ ಸಂಭ್ರಮದಲ್ಲಿ ಗುಜರಾತ್ – GT ಮ್ಯಾಜಿಕ್‌ಗೆ ಪಂಜಾಬ್ ಪಲ್ಟಿ
ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಲಿದೆ. ಸೋಮವಾರ (ಮೇ 4) ಈ ಪಂದ್ಯ ನಡೆಯಲಿದ್ದು, ಕ್ಷಣಗಣನೆ ಶುರುವಾಗಿದೆ. ಎರಡೂ ತಂಡಗಳಿಗೆ ಈ ಪಂದ್ಯವೇ ಮರ್ಯಾದೆ ಕಾಪಾಡುವಂತಾ ಪಂದ್ಯ. ಪ್ಲೇಆಫ್ ಕನಸು ನನಸು ಮಾಡಿಕೊಳ್ಳಲು ಇರುವ ಕೊನೇ ಅವಕಾಶ. ಈ ಪಂದ್ಯವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ತಂಡಗಳ ನಡುವೆ ನಡೆಯುತ್ತಿರುವುದು ಮತ್ತೊಂದು ವಿಶೇಷ. ಲಕ್ನೋ ಸೂಪರ್ ಜೈಂಟ್ಸ್ ಗೆಲುವಿನ ಹುಡುಕಾಟದಲ್ಲಿ ಇದ್ದಾರೆಯೇ ಹೊರತು ಗೆಲ್ಲಲು ಆಗುತ್ತಿಲ್ಲ. ಈ ಬಾರಿ ಲಕ್ನೋ ಸತತ ಐದು ಸೋಲುಗಳಿಂದ ಸೋತು ಬಸವಳಿದಿದೆ. 8 ಪಂದ್ಯಗಳಲ್ಲಿ 6 ರಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ರಿಷಭ್ ಪಂತ್ ನೇತೃತ್ವದ ಎಲ್ಎಸ್ಜಿ ತಂಡವು ಬ್ಯಾಟಿಂಗ್ ವೈಫಲ್ಯಗಳಿಂದಾಗಿ ಸಂಕಷ್ಟದಲ್ಲಿದೆ, ಆದರೆ ಅವರ ಬೌಲರ್‌ಗಳು ತಂಡದ ಗೆಲುವಿಗೆ ಹೋರಾಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ, ಮೊಹ್ಸಿನ್ ಖಾನ್ ಅವರ ಅದ್ಭುತ ಬೌಲಿಂಗ್ ವ್ಯರ್ಥವಾಯಿತು, ಆದರೆ ನಿಕೋಲಸ್ ಪೂರನ್ ಒಳಗೊಂಡ ವಿವಾದಾತ್ಮಕ ಸೂಪರ್ ಓವರ್ ನಿರ್ಧಾರವು ತಂಡಕ್ಕೆ ಭಾರಿ ನಷ್ಟವನ್ನುಂಟು ಮಾಡಿತು.
ಇನ್ನು ಮುಂಬೈ ಸ್ಥಿತಿ ಕೂಡ ತೀರಾ ಕಳಪೆಯಲ್ಲಿದೆ. ಮುಂಬೈ 7 ಪಂದ್ಯಗಳಲ್ಲಿ ಸೋತಿದೆ ಮುಂಬೈ ಇಂಡಿಯನ್ಸ್ ತಂಡ ಆಡಿದ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಸೋತು ಒಂಬತ್ತನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಹೀನಾಯ ಸೋಲು ಸೇರಿದಂತೆ ಸತತ ಮೂರು ಸೋಲುಗಳ ನಂತರ ಮುಂಬೈಯ ಇಂದಿನ ಪಂದ್ಯ ಕುತೂಹಲ ಮೂಡಿಸಿದೆ. ಇಂದಿನ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬಿದ್ದಂತೆ ಲೆಕ್ಕ. ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರಂತಹ ಪ್ರಮುಖ ಸ್ಟಾರ್ ಆಟಗಾರರ ಕಳಪೆಯಾಟ ಮುಂಬೈ ತಂಡದ ಗೆಲುವಿಗೆ ಅಡ್ಡಿಯಾಗಿದೆ. ಹಾರ್ದಿಕ್ ಅವರಿಗೂ ಈ ಪಂದ್ಯ ಮಹತ್ವದ್ದಾಗಿದೆ.

ನೋಡಿರಿ

