ಲೈವ್ ಪಂದ್ಯದಲ್ಲೇ ಜಡ್ಡು, ಕುಲ್ದೀಪ್ ಫೈಟ್.. ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಗೆ ಕೋಕ್? – ವೈಭವ್ ಕೆಣಕಿದ ಕೈಲ್ ಗೆ BCCI ಶಿಕ್ಷೆ!

2026ರ ಐಪಿಎಲ್ ಟೂರ್ನಿ ಅದ್ದೂರಿಯಾಗಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ CSK ಆಟಗಾರ ಎಂ ಎಸ್ ಧೋನಿ ಹಾಗೂ ಮುಂಬೈ ಆಟಗಾರ ರೋಹಿತ್ ಶರ್ಮಾ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಈ ದಿಗ್ಗಜರು ಮತ್ತೆ ಯಾವಾಗ ಕಣಕ್ಕೆ ಇಳಿಯಲಿದ್ದಾರೆ? ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿಯಿಂದ ಪಾಂಡ್ಯಗೆ ಕೋಕ್ ಸಿಗಲಿದ್ಯಾ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪ್ರಿಯಕರನ ಜೊತೆ ಇರುವ ಫೋಟೋ ಸ್ಟೇಟಸ್ ಹಾಕಿದ ಪತ್ನಿ! – ಹೆಂಡತಿಯ ಅಕ್ರಮ ಸಂಬಂಧದಿಂದ ಬೇಸತ್ತ ಗಂಡ ನೇಣಿಗೆ ಶರಣು!
RR ಮತ್ತು DC ನಡುವಿನ ಪಂದ್ಯದ ವೇಳೆ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಫೈಟ್ ಮಾಡಿಕೊಂಡಿದ್ದಾರೆ. ಅದ್ರೆ ಈ ಫೈಟ್ ತಮಾಷೆಗಾಗಿ ಮಾಡಿದ್ದು. RR ಬ್ಯಾಟಿಂಗ್ ಇನಿಂಗ್ಸ್ನಲ್ಲಿ ಧ್ರುವ್ ಔಟ್ ಆಗ್ತಿದ್ದಂತೆ ಜಡೇಜಾ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬರುತ್ತಿದ್ದರು. ವೇಳೆ ಕುಲದೀಪ್ ತನ್ನ ಕಡೆಗೆ ಬರುತ್ತಿರುವುದನ್ನು ಗಮನಿಸಿದ ಜಡೇಜಾ, ಹೆದರಿಸುವ ರೀತಿಯಲ್ಲಿ ಬ್ಯಾಟ್ ಬೀಸಿದ್ರು. ಆಗ ಕುಲದೀಪ್ ಜಡೆಜಾರನ್ನ ತಳ್ಳಿದ್ದಾರೆ. ಜಡೇಜಾ ಅಂಪೈರ್ ಬಳಿ ತನ್ನ ಬ್ಯಾಟ್ ಪರಿಶೀಲಿಸುತ್ತಿದ್ದಾಗಲೂ ಕುಲದೀಪ್ ಅವರನ್ನು ಹಿಡಿದು ಮತ್ತೆ ತಳ್ಳಿದರು. ಈ ಆತ್ಮೀಯತೆಯ ಕ್ಷಣದ ವಿಡಿಯೋ ವೈರಲ್ ಆಗಿದೆ.
ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅಬ್ಬರಿಸಿದ್ದಾರೆ. 40 ಎಸೆತಗಳಲ್ಲಿ ರಾಹುಲ್ 75 ರನ್ ಗಳಿಸಿದ್ದು, ಈ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಅಂದ್ಹಾಗೆ ಕೆ ಎಲ್ ರಾಹುಲ್ IPL 2026 ರಲ್ಲಿ 433ರನ್ ಗಳಿಸಿ ಮೊದಲ ಸ್ಥಾನವನ್ನ ತನ್ನದಾಗಿಸಿಕೊಂಡಿದ್ದಾರೆ. ಇನ್ನು ಅಭಿಷೇಕ್ ಶರ್ಮಾ 425 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ ಹೆನ್ರಿಚ್ ಕ್ಲಾಸೆನ್, 4ನೇ ಸ್ಥಾನದಲ್ಲಿ ವೈಭವ್ ಸೂರ್ಯವಂಶಿ 5ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಡಿಸಿ ವೇಗಿ ಕೈಲ್ ಜೇಮಿಸನ್ ವೈಭವ್ ಸೂರ್ಯವಂಶಿ ವಿಕೆಟ್ ಕಿತ್ತು ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ಮಾಡಿದ್ರು. ಇದೀಗ ಬಿಸಿಸಿಐ ಜೇಮಿಸನ್ಗೆ ಎಚ್ಚರಿಕೆ ಜೊತೆಗೆ ಶಿಕ್ಷೆ ವಿಧಿಸಿದೆ. ಸೂರ್ಯವಂಶಿ ಎದುರು ಅತಿಯಾಗಿ ಸಂಭ್ರಮಿಸಿದ್ದಕ್ಕೆ ಒಂದು ಡಿಮೆರಿಟ್ ಪಾಯಿಂಟ್ ಜೊತೆಗೆ ಜೇಮಿಸನ್ಗೆ BCCI ಎಚ್ಚರಿಕೆ ನೀಡಿದೆ. ಜೇಮಿಸನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ರಾಜೀವ್ ಸೇಠ್ ನೀಡಿದ ಪೆನಾಲ್ಟಿ ಸ್ವೀಕರಿಸಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ IPLನಲ್ಲಿ ಅಬ್ಬರಿಸುತ್ತಿದ್ದಾರೆ. ಈ ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಅವರ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾಗುತ್ತಿದೆ. 2026ರಲ್ಲಿ ಕೊಹ್ಲಿ ಪ್ರತಿಯೊಂದು ಪ್ರಾಯೋಜಿತ ಇನ್ಸ್ಟಾಗ್ರಾಮ್ ಪೋಸ್ಟ್ಗೆ 12 ಕೋಟಿ ರೂಪಾಯಿ ಗಳಿಸುತ್ತಿದ್ದಾರೆಂದು ಮಾರ್ಕೆಟಿಂಗ್ ಹಬ್ ವರದಿ ಮಾಡಿದೆ. ಜಾಗತಿಕವಾಗಿ ಈ ಪಟ್ಟಿಯಲ್ಲಿ ಕೊಹ್ಲಿ 3ನೇ ಸ್ಥಾನದಲ್ಲಿದ್ದು, ಕ್ರಿಸ್ಟಿಯಾನೊ ರೊನಾಲ್ಲೊ ಮತ್ತು ಲಿಯೋನೆಲ್ ಮೆಸ್ಸಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇಂದು ಮುಖಾಮುಖಿಯಾಗಲಿದೆ. ಈ ಹೈವೋಲ್ಟೇಜ್ ಮ್ಯಾಚ್ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ಪಂದ್ಯ 2 ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಗೆದ್ದರೆ ಮಾತ್ರ ಮುಂಬೈ ಪ್ಲೇಆಫ್ ರೇಸ್ನಲ್ಲಿ ಉಳಿಯಬಹುದು. ಹೀಗಾಗಿ ಈ ಮ್ಯಾಚ್ನಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಲೇಬೇಕು. 3 ಪಂದ್ಯ ಗೆದ್ದಿರೋ CSK ಪಾಲಿಗೂ ಈ ಪಂದ್ಯ ಮಹತ್ವದ್ದಾಗಿದೆ.
CSK & MI ತಂಡಗಳ ಸ್ಟಾರ್ ಆಟಗಾರರಾದ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಲಭ್ಯತೆ ಬಗ್ಗೆ 2 ತಂಡಗಳ ಕೋಚ್ಗಳು ಮಹತ್ವದ ಅಪ್ಡೇಟ್ ನೀಡಿದ್ದಾರೆ. MI ಆಟಗಾರ ರೋಹಿತ್ ಶರ್ಮಾ ಸ್ನಾಯು ಸೆಳೆತದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಅವರ ಸೇರ್ಪಡೆ ಬಗ್ಗೆ ಫ್ರಾಂಚೈಸಿಯ ವೈದ್ಯಕೀಯ ತಂಡ ನಿರ್ಧರಿಸಲಿದೆ ಎಂದು ಮುಖ್ಯ ಕೋಚ್ ಮಹೇಲ ಜಯವರ್ಧನೆ ಹೇಳಿದ್ದಾರೆ. ಇನ್ನು CSK ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ, ಎಂಎಸ್ ಧೋನಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಅವರು ಮತ್ತೆ ತಂಡಕ್ಕೆ ಮರಳಲಿದ್ದಾರೆ ಎಂದಿದ್ದಾರೆ.
2026ರ IPLನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ. ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಇನ್ನುಳಿದಂತೆ 6 ಪಂದ್ಯಗಳಲ್ಲಿ ಸೋತಿದೆ. ಇದರ ಪರಿಣಾಮ MI ಪ್ಲೇಆಫ್ಸ್ಗೆ ಹಾದಿ ಕಠಿಣವಾಗಿದೆ. ಇದ್ರಿಂದ ಬೇಸರಗೊಂಡಿರುವ MI ಫ್ರಾಂಚೈಸಿ ಹಾರ್ದಿಕ್ನ ನಾಯಕತ್ವದಿಂದ ಕೈ ಬಿಡುವ ಬಗ್ಗೆ ಚಿಂತಿಸುತ್ತಿದೆ ಎನ್ನಲಾಗ್ತಿದೆ. ಇನ್ನು ಕ್ಯಾಪ್ಟನ್ಸಿ ರೇಸ್ನಲ್ಲಿ ರೋಹಿತ್ ಶರ್ಮಾ, ಜಸ್ಪ್ರಿತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಇದ್ದಾರೆ ಎನ್ನಲಾಗ್ತಿದೆ.
SRH ಯುವ ಬೌಲರ್ ಶಿವಂ ಮಾವಿ ತೊಡೆಸಂದು ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದೀಗ ಸಂಕಷ್ಟದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಯುವ ಆಟಗಾರನೊಬ್ಬ ಸೇರ್ಪಡೆಗೊಂಡಿದ್ದಾರೆ. ಅಂಡರ್-19 ವಿಶ್ವಕಪ್ ಹೀರೋ R.S ಅಂಬ್ರೀಶ್ ಆರೆಂಜ್ ಆರ್ಮಿ ಗೆ ಸೇರ್ಪಡೆಗೊಂಡಿದ್ದಾರೆ. ಬಲಗೈ ವೇಗದ ಬೌಲರ್ ಮತ್ತು ಎಡಗೈ ಬ್ಯಾಟರ್ ಆಗಿರುವ ಅಂಬ್ರೀಶ್ನ SRH ಫ್ರಾಂಚೈಸಿ 30 ಲಕ್ಷ ರೂ.ಗಳಿಗೆ ಖರೀದಿಸಿದೆ.
SRH ತಂಡದ ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸೆನ್, ಅಭಿಮಾನಿಯೊಬ್ಬರ ಮೇಲೆ ಗರಂ ಆಗಿದ್ದಾರೆ. ಹೈದರಾಬಾದ್ ತಂಡ ಹೋಟೆಲ್ನಿಂದ ವಿಮಾನ ನಿಲ್ದಾಣಕ್ಕೆ ಹೊರಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕ್ಲಾಸೆನ್ ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ನಡೆದು ಬರುತ್ತಿದ್ದಾಗ, ಅಭಿಮಾನಿಯೊಬ್ಬರು ಅತೀ ಸಮೀಪಕ್ಕೆ ಬಂದು ವಿಡಿಯೋ ಚಿತ್ರೀಕರಿಸಲು ಆರಂಭಿಸಿದ್ದಾರೆ. ವಿಡಿಯೋ ಮಾಡಬೇಡಿ ಕ್ಲಾಸೆನ್ ಹೇಳಿದ್ರೂ ಆ ವ್ಯಕ್ತಿ ಕೇಳಲಿಲ್ಲ. ಈ ವೇಳೆ ಕ್ಲಾಸೆನ್ ಕುಟುಂಬದ ತಂಟೆಗೆ ಬಂದರೆ, ಹೊಡೆದುರುಳಿಸ್ತೀನಿ ಎಂದು ಅಭಿಮಾನಿಗೆ ಧಮ್ಕಿ ಹಾಕಿದ್ದಾರೆ.
ಐಎಪಿಲ್ಗೆ ಟ್ಕಕರ್ ಕೊಡುತ್ತೇವೆ ಅಂತ ಹೇಳೋ ಪಿಎಸ್ಎಲ್ ಈಗ ಫೈನಲ್ ಹಂತ ತಲುಪಿದೆ. ಫೈನಲ್ ಪಂದ್ಯವು ನಾಳೆ ನಡೆಯಲಿದೆ. ಫೈನಲ್ ಫೈಟ್ನಲ್ಲಿ ಬಾಬರ್ ಆಝಂ ನೇತೃತ್ವದ ಪೇಶಾವರ್ ಝಲ್ಮಿ ಹಾಗೂ ಮಾರ್ನಸ್ ಲಾಬುಶೇನ್ ಮುಂದಾಳತ್ವದ ಹೈದರಾಬಾದ್ ಕಿಂಗ್ಸ್ಮೆನ್ ತಂಡಗಳು ಮುಖಾಮುಖಿಯಾಗಲಿದೆ. ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ಕಿಂಗ್ಸ್ಮೆನ್ ಕೇವಲ ಎರಡು ರನ್ನಿಂದ ಗೆಲ್ಲೋ ಮೂಲಕ ಫೈನಲ್ಗೇರಿದೆ.

ನೋಡಿರಿ

