ಮಹಿಳಾ ಟಿ20 ವಿಶ್ವಕಪ್​ಗೆ  ಟೀಂ ಇಂಡಿಯಾ ಪ್ರಕಟ – ಯಾರಿಗೆಲ್ಲಾ ಸಿಕ್ಕಿದೇ ಗೊತ್ತಾ ಚಾನ್ಸ್

ಮಹಿಳಾ ಟಿ20 ವಿಶ್ವಕಪ್​ಗೆ  ಟೀಂ ಇಂಡಿಯಾ ಪ್ರಕಟ – ಯಾರಿಗೆಲ್ಲಾ ಸಿಕ್ಕಿದೇ ಗೊತ್ತಾ ಚಾನ್ಸ್

ಜೂನ್ 12 ರಿಂದ ಆರಂಭವಾಗಲಿರುವ ಮಹಿಳಾ ಟಿ20 ವಿಶ್ವಕಪ್​ಗೆ   15 ಸದಸ್ಯರ ಭಾರತ ಮಹಿಳಾ ತಂಡವನ್ನು ಇಂದು ಬಿಸಿಸಿಐ ಪ್ರಕಟಿಸಿದೆ. ಎಂದಿನಂತೆ ಹರ್ಮನ್​ಪ್ರೀತ್ ಕೌರ್  ತಂಡದ ನಾಯಕತ್ವವಹಿಸಿದ್ದು, ಸ್ಮೃತಿ ಮಂಧಾನಗೆ ಉಪನಾಯಕತ್ವದ ಜವಾಬ್ದಾರಿ ಸಿಕ್ಕಿದೆ. ಉಳಿದಂತೆ ಈ ತಂಡದಲ್ಲಿ ಈ ಮೊದಲೇ ನಿರೀಕ್ಷಿಸಿದ್ದ ಹೆಸರುಗಳೇ ಸೇರಿವೆ.

2026 ರ ಮಹಿಳಾ ಟಿ20 ವಿಶ್ವಕಪ್​ಗೆ ಇಂಗ್ಲೆಂಡ್ ಆತಿಥ್ಯವಹಿಸುತ್ತಿದ್ದು, ಈ ಪಂದ್ಯಾವಳಿ ಜೂನ್ 12 ರಂದು ಪ್ರಾರಂಭವಾಗಲಿದ್ದು, ಜುಲೈ 5 ರಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಅಂತ್ಯವಾಗಲಿದೆ. ಈ ಮಹಿಳಾ ವಿಶ್ವಕಪ್‌ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿದ್ದು, ತಲಾ 6 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ.

ಭಾರತ ಟಿ20 ವಿಶ್ವಕಪ್ ತಂಡ:

ಹರ್ಮನ್​ಪ್ರೀತ್ ಕೌರ್

ಸ್ಮೃತಿ ಮಂಧಾನ,

ಜೆಮಿಮಾ ರೊಡ್ರಿಗ್ಸ್

ಶಫಾಲಿ ವರ್ಮಾ

ಭಾರತಿ ಪುಲ್ಮಾಲಿ

ದೀಪ್ತಿ ಶರ್ಮಾ

ರಿಚಾ ಘೋಷ್

ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ

ನಂದಿನಿ ಶರ್ಮಾ

ಅರುಂಧತಿ ರೆಡ್ಡಿ

ರೇಣುಕಾ ಸಿಂಗ್ ಠಾಕೂರ್

ಕ್ರಾಂತಿ ಕೌಡ್

ಶ್ರೇಯಾಂಕ ಪಾಟೀಲ್

ರಾಧಾ ಯಾದವ್.

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಭಾರತವನ್ನು ಹೊರತುಪಡಿಸಿ ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ಆಸ್ಟ್ರೇಲಿಯಾ ತಂಡಗಳು ಸೇರಿವೆ. ಭಾರತೀಯ ಮಹಿಳಾ ತಂಡ ಜೂನ್ 14 ರಂದು ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಜೂನ್ 17 ರಂದು ನೆದರ್ಲ್ಯಾಂಡ್ಸ್, ಜೂನ್ 21 ರಂದು ದಕ್ಷಿಣ ಆಫ್ರಿಕಾ, ಜೂನ್ 25 ರಂದು ಬಾಂಗ್ಲಾದೇಶ ಹಾಗೂ ಜೂನ್ 28 ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

Kishor KV