ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! – ಮುಂದಿನ ತಿಂಗಳಲ್ಲೇ ಪಿಂಕ್ ಲೈನ್ ಓಪನ್!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! – ಮುಂದಿನ ತಿಂಗಳಲ್ಲೇ ಪಿಂಕ್ ಲೈನ್ ಓಪನ್!

ನಮ್ಮ ಮೆಟ್ರೋ ಪಿಂಕ್‌ ಲೈನ್‌ ಯಾವಾಗಿನಿಂದ ಆರಂಭ ಎಂದು ಕೇಳ್ತಿದ್ದವರಿಗೆ ಕಡೆಗೂ ಗುಡ್‌ನ್ಯೂಸ್‌ ಸಿಕ್ಕಿದೆ. ಇದೀಗ ಪಿಂಕ್‌ ಲೈನ್‌ ಸಂಚಾರಕ್ಕೆ ಮುಕ್ತವಾಗಿದ್ದು, ಮಾರ್ಗದ ಮೊದಲ ಹಂತದ ಉದ್ಘಾಟನೆಗೆ ಸಿದ್ಧತೆ ನಡೆಯುತ್ತಿದೆ.

ಇದನ್ನೂ ಓದಿ: ನಿಂಬೆ ಹಣ್ಣು ಅಡುಗೆಗೆ ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಸೂಪರ್!‌ – ಒಂದು ಹಣ್ಣಿನಿಂದ ಎಷ್ಟೊಂದು ಲಾಭ!

ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಈ ಮಾರ್ಗದ ಮೊದಲ ಹಂತದ ಉದ್ಘಾಟನೆಗೆ ಸಿದ್ಧತೆಗಳು ವೇಗ ಪಡೆದುಕೊಂಡಿದ್ದು, ಜೂನ್ ತಿಂಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವುದು ಬಹುತೇಕ ಖಚಿತವಾಗಿದೆ. ಕೇಂದ್ರ ರೈಲ್ವೆ ಇಲಾಖೆಯ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (RDSO) ಇಂದಿನಿಂದ ಪಿಂಕ್ ಲೈನ್ ಮಾರ್ಗದಲ್ಲಿ ಕಟ್ಟುನಿಟ್ಟಿನ ತಪಾಸಣೆ ಆರಂಭಿಸಿದೆ. ಮುಂದಿನ 15 ದಿನಗಳ ಕಾಲ ಈ ಪ್ರಕ್ರಿಯೆ ನಡೆಯಲಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ಕೆಳಗಿನ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ರೈಲಿನ ಗರಿಷ್ಠ ವೇಗ ಮತ್ತು ಅತಿ ಹೆಚ್ಚು ಪ್ರಯಾಣಿಕರಿದ್ದಾಗ ರೈಲಿನ ಸಮತೋಲನ ಹೇಗಿರುತ್ತದೆ ಎನ್ನುವ ಕುರಿತು ಸ್ಪೀಡ್ ಮತ್ತು ಲೋಡ್ ಟೆಸ್ಟ್. ಮೆಟ್ರೋ ಹಳಿಗಳ ಗುಣಮಟ್ಟ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆಯ ಸ್ಥಿತಿಗತಿ ನೋಡಲು ಟ್ರ್ಯಾಕ್ ಮತ್ತು ಪವರ್ ಚೆಕ್ಕಿಂಗ್, ನಿಲ್ದಾಣಗಳಲ್ಲಿನ ಸೌಲಭ್ಯಗಳು ಮತ್ತು ತಾಂತ್ರಿಕ ಸುರಕ್ಷತಾ ಕ್ರಮಗಳ ಅವಲೋಕನ ಮಾಡಲಿದೆ.

ಮೇ ತಿಂಗಳಲ್ಲೇ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 6 ಎಲಿವೇಟೆಡ್ ನಿಲ್ದಾಣಗಳನ್ನು ಓಪನ್ ಮಾಡಲು ಬಿಎಂಆರ್‌ಸಿಎಲ್ ಯೋಜಿಸಿತ್ತು. ಆದರೆ, ಅಂತಿಮ ಹಂತದ ತಾಂತ್ರಿಕ ಪರೀಕ್ಷೆಗಳು ವಿಳಂಬವಾದ ಕಾರಣ, ಈಗ ಜೂನ್ ತಿಂಗಳಲ್ಲಿ ವಾಣಿಜ್ಯ ಸಂಚಾರಕ್ಕೆ ಚಾಲನೆ ಸಿಗಲಿದೆ. ಪಿಂಕ್ ಲೈನ್‌ಗಾಗಿ ಬಿಇಎಂಎಲ್ ನಿಂದ ಒಟ್ಟು 6 ಚಾಲಕರಹಿತ ರೈಲುಗಳು ಬರಬೇಕಿದೆ. ಈಗಾಗಲೇ 5 ರೈಲುಗಳು ಬೆಂಗಳೂರಿಗೆ ಆಗಮಿಸಿದ್ದು, ಮೇ ಮೊದಲ ವಾರದಲ್ಲಿ ಆರನೇ ರೈಲು ಕೂಡ ಲಗ್ಗೆ ಇಡಲಿದೆ. ಈ 6 ರೈಲುಗಳ ಪರೀಕ್ಷೆ ಮುಗಿಯುತ್ತಿದ್ದಂತೆ ಸಂಚಾರ ಆರಂಭವಾಗಲಿದೆ.

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.25 ಕಿ.ಮೀ ಉದ್ದದ ಲೈನ್‌ ಇದಾಗಿದೆ. 12 ಭೂಗತ ಮತ್ತು 6 ಎಲೆವೇಟೆಡ್‌ ನಿಲ್ದಾಣಗಳು ಸೇರಿದಂತೆ ಒಟ್ಟು 18 ಸ್ಟೇಷನ್‌ಗಳನ್ನು ಹೊಂದಿದೆ. ಮೊದಲ ಹಂತದ 6 ಎಲಿವೇಟೆಡ್ ನಿಲ್ದಾಣಗಳು ಜೂನ್‌ನಲ್ಲಿ ಆರಂಭ. ಉಳಿದ 13.76 ಕಿ.ಮೀ ಭೂಗತ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ವರ್ಷಾಂತ್ಯಕ್ಕೆ ಪೂರ್ಣ ಮಾರ್ಗ ಓಪನ್ ಆಗುವ ಸಾಧ್ಯತೆ ಇದೆ.

Shwetha M