ಕೊಹ್ಲಿ ಪತ್ನಿ ದುಬಾರಿ ದುನಿಯಾ.. ಬಟ್ಟೆ ₹65,875.. ವಾಚ್‌ ₹24 ಲಕ್ಷ! – RCB ಟಿಕೆಟ್‌ ಗಿಂತ ಅನುಷ್ಕಾ ಡ್ರೆಸ್ ಕಾಸ್ಟ್ಲಿ!

ಕೊಹ್ಲಿ ಪತ್ನಿ ದುಬಾರಿ ದುನಿಯಾ.. ಬಟ್ಟೆ ₹65,875.. ವಾಚ್‌ ₹24 ಲಕ್ಷ! – RCB ಟಿಕೆಟ್‌ ಗಿಂತ ಅನುಷ್ಕಾ ಡ್ರೆಸ್ ಕಾಸ್ಟ್ಲಿ!

ನಟಿ ಅನುಷ್ಕಾ ಶರ್ಮಾ.. ವಿರಾಟ್‌ ಕೊಹ್ಲಿ ಅವರ ಮುದ್ದಿನ ಮಡದಿ. ಪಂದ್ಯ ಯಾವುದೇ ಇರಲಿ ಕಿಂಗ್‌ ಕೊಹ್ಲಿ ಆಡ್ತಾರೆ ಅಂದ್ರೆ ಅಲ್ಲಿ ಅನುಷ್ಕಾ ಇದ್ದೇ ಇರ್ತಾರೆ. ಪಂದ್ಯ ಸೋಲಲಿ.. ಗೆಲ್ಲಲಿ.. ಅನುಷ್ಕಾ ಸದಾ ಗಂಡನಿಗೆ ಸಪೋರ್ಟ್‌ ಮಾಡ್ತಿರ್ತಾರೆ. ಸದ್ಯ IPL ಟೂರ್ನಿ ನಡಿತಾ ಇದ್ದು, ಅನುಷ್ಕಾ ಶರ್ಮಾ ಮೈದಾನದಲ್ಲಿ ಹಾಜರಿ ಹಾಕ್ತಿದ್ದಾರೆ. ಮೈದಾನದಲ್ಲಿ ಸಿಂಪಲ್‌ ಆಗಿ ಕಾಣಿಸಿಕೊಳ್ಳುವ ಅನುಷ್ಕಾ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಆದ್ರೀಗ ಅನುಷ್ಕಾ ಶರ್ಮಾ ಧರಿಸಿರುವ ಬಟ್ಟೆ, ವಾಚ್‌ ಭಾರಿ ಚರ್ಚೆಯಲ್ಲಿದೆ. ಅನುಷ್ಕಾ ಅವರದ್ದು ಕಾಸ್ಟ್ಲಿ ದುನಿಯಾ.. ಇದೀಗ ಅನುಷ್ಕಾ ಶರ್ಮಾ ಧರಿಸೋ ಬಟ್ಟೆ ಬೆಲೆ RCB VIP ಟಿಕೆಟ್‌ಗಳಿಗಿಂತಲೂ ದುಬಾರಿ ಅಂತ ಫ್ಯಾನ್ಸ್‌ ಹೇಳ್ತಿದ್ದಾರೆ.

ಇದನ್ನೂ ಓದಿ: ಡ್ಯಾಡಿ ಆದ ಖುಷಿಯಲ್ಲಿ ಡಾಲಿ ಧನಂಜಯ್!‌ – ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ!

ಐಪಿಎಲ್‌ನಲ್ಲಿ ಆಟಗಾರರ ಜೊತೆಗೆ ಅವರ ಗರ್ಲ್‌ಫ್ರೆಂಡ್‌, ಪತ್ನಿಯರು, ಮಕ್ಕಳು ಸುದ್ದಿಯಲ್ಲಿರುತ್ತಾರೆ. ಅದ್ರಲ್ಲೂ ಕಿಂಗ್‌ ಕೊಹ್ಲಿ ಮುದ್ದಿನ ಮಡದಿ ಅನುಷ್ಕಾ ಶರ್ಮಾ ಐಪಿಎಲ್‌ನ ಪ್ರತಿ ಸೀಸನ್‌ನಲ್ಲೂ ಹೈಲೈಟ್‌. ಪಂದ್ಯ ಯಾವುದೇ ಇರಲಿ ವಿರಾಟ್‌ ಹೇಗೆ ಆಡಲಿ ಅನುಷ್ಕಾ ಶರ್ಮಾ ತಮ್ಮ ವಿರಾಟ್‌ಗೆ ಹುರಿದುಂಬಿಸಲು ಬಹುತೇಕ ಎಲ್ಲಾ ಪಂದ್ಯಗಳಿಗೆ ಹಾಜರಾಗುತ್ತಾರೆ. ವಿರಾಟ್‌ ಗೆಲುವನ್ನು ಸಂಭ್ರಮಿಸುತ್ತಾರೆ. ಸೋತಾಗ ಅವರ ಜೊತೆ ನಿಲ್ಲುತ್ತಾರೆ. ಹೀಗಾಗಿ ಅನುಷ್ಕಾ ಶರ್ಮಾ ಎಂದರೆ ಕ್ರಿಕೆಟ್‌ ಅಭಿಮಾನಿಗಳಿಗೂ ಕೂಡ ಹೆಚ್ಚು ಪ್ರೀತಿ. ಅನುಷ್ಕಾ ಮೈದಾನದಲ್ಲಿ ಹಾಜರಿ ಹಾಕಿದ್ರು ಅಂದ್ರೆ ಕ್ಯಾಮೆರಾಗಳು ಕೂಡ ಅವರತ್ತ ಫೋಕಸ್‌ ಆಗಿರೋದು ಮಾತ್ರವಲ್ಲ ಫ್ಯಾಷನ್‌ ಪ್ರಿಯರ ಕಣ್ಣು ಕೂಡ ಅನುಷ್ಕಾ ಮೇಲಿರುತ್ತೆ. ಇದೀಗ ಕಿಂಗ್‌ ಕೊಹ್ಲಿ ಪತ್ನಿಯ ಡ್ರೆಸ್‌ ಹಾಗೇ ವಾಚ್‌ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಅನುಷ್ಕಾ ಧರಿಸಿರುವ ಡ್ರೆಸ್‌, ವಾಚ್‌ಗಳ ಬೆಲೆ ಕೇಳಿ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ. ಅತ್ತಿಗೆ ಅನುಷ್ಕಾ ಧರಿಸೋ ಬಟ್ಟೆ RCB VIP ಟಿಕೆಟ್‌ಗಳಿಗಿಂತಲೂ ದುಬಾರಿ ಅಂತ ಹೇಳ್ತಿದ್ದಾರೆ.

ಅನುಷ್ಕಾ ಈ ಬಾರಿಯ ಐಪಿಎಲ್‌ ಉದ್ಘಾಟನಾ ಪಂದ್ಯಕ್ಕೆ ಬಂದಿದ್ರು. ಈ ವೇಳೆ ಅನುಷ್ಕಾ ಗ್ಯಾಲರಿಯಲ್ಲಿ ಕೂತು ಕಿಂಗ್‌ ಕೊಹ್ಲಿಗೆ ಸಪೋರ್ಟ್‌ ಮಾಡಿದ್ರು. ಈ ವೇಳೆ ಅನುಷ್ಕಾ ಧರಿಸಿರುವ ಡ್ರೆಸ್‌ ಫುಲ್‌ ಹೈಲೈಟ್‌ ಆಗಿತ್ತು. ಪ್ಯಾರಿಸ್‌ನ ಫೇಮಸ್‌ ಸೆಝಾನೆ ಬ್ರ್ಯಾಂಡ್‌ ನ ಡ್ರೆಸ್‌ನ ಧರಿಸಿದ್ರು. ಹೂವಿನ ಇನ್ಯಾಸವಿರುವ ಟಾಪ್‌ನ ಧರಿಸಿದ್ರು. ಇದಕ್ಕೆ ಬೆಲ್‌ಬಾಟಮ್‌ ಜೀನ್ಸ್‌ ಪ್ಯಾಂಟ್‌ ಧರಿಸಿದ್ರು. ಈ ಟಾಪ್‌ನ ಬೆಲೆ 16,000 ಹಾಗೇ ಪ್ಯಾಂಟ್‌ ಬೆಲೆ 30,000 ಎನ್ನಲಾಗ್ತಿದೆ. ಅಂದ್ರೆ ಉದ್ಘಾಟನಾ ಪಂದ್ಯದ ದಿನ ಅನುಷ್ಕಾ 46,000 ರೂಪಾಯಿ ಮೌಲ್ಯದ ಬಟ್ಟೆ ಧರಿಸಿದ್ರು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏ. 15 ರಂದು RCB Vs LSG ಮ್ಯಾಚ್‌ ನಡೆದಿತ್ತು. ಈ ಪಂದ್ಯಕ್ಕೂ ನಟಿ ಅನುಷ್ಕಾ ಶರ್ಮಾ ಬಂದಿದ್ರು. ಆ ದಿನ ಅನುಷ್ಕಾ  ಸ್ಯಾಂಡ್ರೋ ಪ್ಯಾರಿಸ್ ಬ್ರ್ಯಾಂಡ್‌ನ ಸುಂದರ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ರಫಲ್ ಸ್ಟ್ರೈಪ್ಡ್ ಶರ್ಟ್  ಧರಿಸಿದ್ರು. ಇದ್ರ ಬೆಲೆ 29 ,750 ರೂಪಾಯಿ ಇನ್ನು ಈ ಶರ್ಟ್‌ಗೆ ಮ್ಯಾಕ್ಸಿ ಪಾಪ್ಲಿನ್ ಸ್ಕರ್ಟ್ ಧರಿಸಿದ್ದು, ಇದ್ರ ಬೆಲೆ 36,125ರೂ ಎಂದು ಹೇಳಲಾಗ್ತಿದೆ. ಅಂದ್ರೆ ಆ ದಿನ ಅನುಷ್ಕಾ ಒಟ್ಟು ₹65,875 ಮೌಲ್ಯದ ಡ್ರೆಸ್‌ನ ಧರಿಸಿದ್ರು.

ಇನ್ನು ಅನುಷ್ಕಾ ಇತ್ತೀಚೆಗೆ ಚಿನ್ನಸ್ವಾಮಿಯಲ್ಲಿ ನಡೆದ RCB VS GT ನಡುವಿನ ಪಂದ್ಯಕ್ಕೂ ಮೈದಾನಕ್ಕೆ ಬಂದಿದ್ರು. ಈ ವೇಳೆ ಕೊಹ್ಲಿ ಪತ್ನಿ ಫ್ಯಾಷನ್‌ ಪ್ರಿಯರ ಗಮನ ಸೆಳೆದಿದ್ದಾರೆ. ಆ ದಿನ ಅನುಷ್ಕಾ ಬಟ್ಟೆ ಮಾತ್ರವಲ್ಲ, ಅವರು ಧರಿಸಿದ್ದ ವಾಚ್‌ ಕೂಡ ಸುದ್ದಿಯಾಗಿತ್ತು. ಅನುಷ್ಕಾ ಶರ್ಮಾ ಸೆಝಾನೆ ಬ್ರ್ಯಾಂಡ್‌ನ ಸಿಂಪಲ್‌ ವೈಟ್‌ ಕಲರ್‌ ಟಾಪ್‌ ಹಾಗೂ ಜೀನ್ಸ್‌ ಪ್ಯಾಂಟ್‌ ಧರಿಸಿದ್ರು. ಈ ವಿ ನೆಕ್‌ ಟಾಪ್‌ ಬೆಲೆ 17,700 ರೂಪಾಯಿ ಎಂದು ಹೇಳಲಾಗ್ತಿದೆ. ಇನ್ನು ಆ ದಿನ ಅನುಷ್ಕಾ ವಿಶ್ವಪ್ರಸಿದ್ಧ ಪ್ಯಾಂಥೆರೆ ಡಿ ಕಾರ್ಟಿಯರ್ ಬ್ರಾಂಡ್‌ ನ ಗೋಲ್ಡ್ ಕಲರ್ ವಾಚ್ ಧರಿಸಿದ್ರು. ಈ ವಾಚ್ ಬೆಲೆ ಸುಮಾರು 24 ಲಕ್ಷದ 70,000 ರೂಪಾಯಿ ಎನ್ನಲಾಗ್ತಿದೆ.ಇದನ್ನ ಕೇಳಿ RCB ಫ್ಯಾನ್ಸ್‌ ಶಾಕ್‌ ಆಗಿದ್ದಾರೆ. ಈ ವಾಚ್‌ನಲ್ಲಿ VIP ಗ್ಯಾಲರಿಯ 53 ಟಿಕೆಟ್‌ ಬರುತ್ತೆ ಅಂತ ಫ್ಯಾನ್ಸ್‌ ಹೇಳ್ತಿದ್ದಾರೆ.

ಇನ್ನು ಅನುಷ್ಕಾ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಉತ್ತರ ಪ್ರದೇಶದ ಆಧ್ಯಾತ್ಮಿಕ ಕೇಂದ್ರ ವೃಂದಾವನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಪ್ರೇಮಾನಂದ್ ಜಿ ಮಹಾರಾಜ್ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಧರಿಸಿದ್ದ ಕುರ್ತಾ ಕೂಡ ಹೈಲೈಟ್‌ ಆಗಿದೆ. ಅನುಷ್ಕಾ ಭಾರತೀಯ ಸಾಂಪ್ರದಾಯಿಕ ಉಡುಗೆ ಧರಿಸಿದ್ದರು. ಇವರು ಧರಿಸಿದ್ದ ಕುರ್ತಾ ಸೆಟ್‌ನ ಬೆಲೆ ₹25,500. ಇದನ್ನು ಹತ್ತಿಯಿಂದ ತಯಾರಿಸಲಾಗಿದ್ದು, ಬೇಸಿಗೆಗೆ ಹೇಳಿ ಮಾಡಿಸಿದ ಉಡುಪಾಗಿದೆ. ಇನ್ನು ದುಪ್ಪಟಾ ಬೆಲೆಯು  8,800 ರೂಪಾಯಿ. ಒಟ್ಟಾರೆ ಅವರು ಧರಿಸಿರುವ ಉಡುಪಿನ ಒಟ್ಟು ಬೆಲೆ ₹34,300 ಆಗಿದೆ.

ಒಟ್ಟಿನಲ್ಲಿ ಅನುಷ್ಕಾ ಶರ್ಮಾ ಅವರ ಈ ಸಿಂಪಲ್ ಅಂಡ್ ರಿಚ್ ಲುಕ್ ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ಚರ್ಚೆ ಜೋರಾಗಿದೆ. ಅಭಿಮಾನಿಗಳು ಅನುಷ್ಕಾ ಶರ್ಮಾ ಧರಿಸೋ ಬಟ್ಟೆ ಬೆಲೆಯಲ್ಲಿ ಸಾಕಷ್ಟು RCB ಮ್ಯಾಚ್‌ನ VIP ಟಿಕೆಟ್‌ ಪರ್ಚೇಸ್‌ ಮಾಡ್ಬೋದು ಅಂತ ಹೇಳ್ತಿದ್ದಾರೆ.

Shwetha M