ಪ್ರಿಯಕರನ ಜೊತೆ ಇರುವ ಫೋಟೋ ಸ್ಟೇಟಸ್‌ ಹಾಕಿದ ಪತ್ನಿ! – ಹೆಂಡತಿಯ ಅಕ್ರಮ ಸಂಬಂಧದಿಂದ ಬೇಸತ್ತ ಗಂಡ ನೇಣಿಗೆ ಶರಣು!

ಪ್ರಿಯಕರನ ಜೊತೆ ಇರುವ ಫೋಟೋ ಸ್ಟೇಟಸ್‌ ಹಾಕಿದ ಪತ್ನಿ! – ಹೆಂಡತಿಯ ಅಕ್ರಮ ಸಂಬಂಧದಿಂದ ಬೇಸತ್ತ ಗಂಡ ನೇಣಿಗೆ ಶರಣು!

ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪತ್ನಿ ಪ್ರಿಯಕರನ ಜೊತೆ ಇರುವ ಫೋಟೋ ಸ್ಟೇಟಸ್‌ ಹಾಕಿ ಹಿಂಸೆ ನೀಡುತ್ತಿದ್ದಾಳೆ ಎಂದು ಡೆತ್‌ ನೋಟ್‌ ಬರೆದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಿಮ್ಮ ಫೋನ್ ಗೆ  ಎಮರ್ಜೆನ್ಸಿ ಅಲರ್ಟ್‌ ಬಂತಾ? –  ಭಯಪಡಬೇಡಿ.. ಇದು ಕೇಂದ್ರ ಸರ್ಕಾರದ ಹೊಸ ತಂತ್ರಜ್ಞಾನದ ಪರೀಕ್ಷೆ!

ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕಿಯನ್ನು ರಾಘವೇಂದ್ರ ವಾಡಕರ್ ಎಂದು ಗುರುತಿಸಲಾಗಿದೆ. ಸಾವಿಗೂ ಮುನ್ನ ಆತ ಡೆತ್ ನೋಟ್ ಬರೆದಿಟ್ಟಿದಿಟ್ಟಿದ್ದಾನೆ. ಅದರಲ್ಲಿ ಸಾವಿಗೆ ಪತ್ನಿಯ ಕಿರುಕುಳ ಕಾರಣ ಎಂದು ಉಲ್ಲೇಖಿಸಿದ್ದಾನೆ.

ಕಳೆದ ಮೂರು ವರ್ಷಗಳಿಂದ ಮಲೇಷಿಯಾದಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಒಂದು ವಾರದ ಹಿಂದೆ ದಾಂಡೇಲಿಗೆ ಮರಳಿದ್ದ. ಈತ ದಾಂಡೆಲಿಗೆ ಬರುತ್ತಿದ್ದಂತೆ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದ ಪತ್ನಿ, ನಿನ್ನಜೊತೆ ಸಂಸಾರ ಮಾಡೋಕೆ ಆಗಲ್ಲ ಎಂದು ತಕರಾರು ತೆಗೆದಿದ್ದಳು. ಮಕ್ಕಳಿಗಾಗಿ ಒಟ್ಟಿಗೆ ಸಂಸಾರ ಮಾಡೋಣ ಬಾ ಎಂದು ಕರೆದ್ರೂ ಪತ್ನಿ ಒಪ್ಪಿರಲಿಲ್ಲ.

ಬದಲಿಗೆ ಪತಿಗೆ ಬೇರೆ ಯುವಕರ ಜೊತೆ ಇರುವ ಫೋಟೋಗಳನ್ನ ಕಳಿಸುವುದು, ಮೊಬೈಲ್ ವಾಟ್ಸಾಪ್‍ನಲ್ಲಿ ಸ್ಟೇಟಸ್ ಹಾಕಿ ಮಾನಸಿಕ ಕಿರುಕುಳ ನೀಡುವುದು ಮಾಡುತ್ತಿದ್ದಳು. ಅಲ್ಲದೇ ನಿನ್ನ ಜೊತೆ ಸಂಸಾರ ಮಾಡಲು ಇಷ್ಟ ಇಲ್ಲ, ಸತ್ತ ಹೋಗು ಎಂದು ಹೇಳಿದ್ದಳು. ಅನೈತಿಕ ಸಂಬಂಧದ ಬಗ್ಗೆಯೂ ಗಂಡನ ಬಳಿ ಓಪನ್ ಆಗಿ ಹೇಳಿಕೊಳ್ಳುತಿದ್ದಳು.

ಅನೈತಿಕ ಸಂಬಂಧ ಬಿಡುವಂತೆ ಪತ್ನಿಗೆ ಬುದ್ದಿವಾದ ಹೇಳಿದ್ದ ರಾಘವೇಂದ್ರ, ಕೈ ಕೊಯ್ದುಕೊಂಡು ಪತ್ನಿಗೆ ವಾಟ್ಸ್ ಅಪ್ ಮಾಡಿದ್ದ. ನೀನು ಸಾಯೋದಾದ್ರೆ ಸಾಯಿ ನನಗೇನೂ ತೊಂದರೆ ಇಲ್ಲ ಎಂದು ಈ ವೇಳೆ ಪತ್ನಿ ಹೇಳಿದ್ದಳಂತೆ. ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Shwetha M