ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮಹತ್ವದ ಸುದ್ದಿ! – ಇನ್ಮುಂದೆ ಕ್ರೆಡಿಟ್ ಕಾರ್ಡ್ ಬಿಲ್ ತಡವಾದ್ರೂ ಟೆನ್ಷನ್ ಬೇಡ!

ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮಹತ್ವದ ಸುದ್ದಿಯಿದೆ. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮಗಳನ್ನ ಘೋಷಿಸಿದೆ. ಈ ಹೊಸ ಮಾರ್ಗಸೂಚಿಗಳ ಪ್ರಕಾರ, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಲ್ಲಿ ಸ್ವಲ್ಪ ತಡವಾದರೂ ತಕ್ಷಣ ದಂಡ ವಿಧಿಸುವ ಪದ್ಧತಿಗೆ ಕಡಿವಾಣ ಹಾಕಲಾಗಿದೆ.
ಇದನ್ನೂ ಓದಿ:ಪ್ಲಾಸ್ಟಿಕ್ ಬಾಟಲ್‌ನಲ್ಲಿ ಮಗುವಿಗೆ ಹಾಲು ಕುಡಿಸುತ್ತೀರಾ? – ಎಚ್ಚರ.. ಈ ಸಮಸ್ಯೆ ಕಾಡಬಹುದು!
ಹೊಸ ನಿಯಮದ ಪ್ರಮುಖ ಅಂಶವೆಂದರೆ 3 ದಿನಗಳ ಗ್ರೇಸ್ ಪೀರಿಯಡ್. ಇನ್ಮುಂದೆ ಗ್ರಾಹಕರು ಡ್ಯೂ ಡೇಟ್ ಮಿಸ್ ಮಾಡಿದರೂ ಸಹ 3 ದಿನಗಳೊಳಗೆ ಪಾವತಿ ಮಾಡಿದರೆ ಯಾವುದೇ ಲೇಟ್ ಫೀ ಅಥವಾ ದಂಡ ವಿಧಿಸಲಾಗುವುದಿಲ್ಲ. ಉದಾಹರಣೆಗೆ ಡ್ಯೂ ಡೇಟ್ 5ರಂದು ಇದ್ದರೆ, 8ರವರೆಗೆ ಪಾವತಿ ಮಾಡಿದರೂ ದಂಡದಿಂದ ತಪ್ಪಿಸಿಕೊಳ್ಳಬಹುದು.
ಇದಲ್ಲದೆ RBI ಸ್ಪಷ್ಟಪಡಿಸಿದಂತೆ ಕ್ರೆಡಿಟ್ ಕಾರ್ಡ್ ಖಾತೆಯನ್ನ past due ಎಂದು ಗುರುತಿಸುವುದು ಅಥವಾ ಲೇಟ್ ಪೇಮೆಂಟ್ ಶುಲ್ಕ ವಿಧಿಸುವುದು ಡ್ಯೂ ಡೇಟ್‌ನಿಂದ 3 ದಿನಗಳ ನಂತರ ಮಾತ್ರ ಸಾಧ್ಯವಾಗುತ್ತದೆ.
ಹೊಸ ನಿಯಮದ ಮತ್ತೊಂದು ಪ್ರಮುಖ ಅಂಶವೆಂದರೆ, ಲೇಟ್ ಫೀ ಈಗ ಸಂಪೂರ್ಣ ಬಿಲ್ ಮೊತ್ತದ ಮೇಲೆ ಅಲ್ಲ, ಬಾಕಿ ಇರುವ ಮೊತ್ತದ ಮೇಲೆ ಮಾತ್ರ ವಿಧಿಸಲಾಗುತ್ತದೆ. ಇದರಿಂದ ಗ್ರಾಹಕರಿಗೆ ಹಣಕಾಸಿನ ಭಾರ ಕಡಿಮೆಯಾಗುತ್ತದೆ.
ಕ್ರೆಡಿಟ್ ಸ್ಕೋರ್ ಮೇಲಿನ ಪರಿಣಾಮವೂ ಈ ನಿಯಮದಿಂದ ಬದಲಾಗಲಿದೆ. 3 ದಿನಗಳ ಒಳಗೆ ಪಾವತಿ ಮಾಡಿದರೆ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಆದರೆ ಈ ಅವಧಿಯ ನಂತರವೂ ಪಾವತಿ ಮಾಡದಿದ್ದರೆ ಮಾತ್ರ ಖಾತೆ Overdue ಆಗಿ ಗುರುತಿಸಲಾಗುತ್ತದೆ ಮತ್ತು ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ಒಟ್ನಲ್ಲಿ RBIನ ಈ ಹೊಸ ನಿಯಮಗಳು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸ್ವಲ್ಪ ಸಮಯದ ಸಡಿಲಿಕೆ ನೀಡುತ್ತವೆ. ಆದರೆ ತಜ್ಞರು ಹೇಳುವಂತೆ, ದಂಡ ತಪ್ಪಿಸಲು ಸಾಧ್ಯವಾದರೂ ಸಮಯಕ್ಕೆ ಸರಿಯಾಗಿ ಪಾವತಿ ಮಾಡುವುದು ಉತ್ತಮ ಹಣಕಾಸು ಶಿಸ್ತು ಕಾಪಾಡಲು ಅವಶ್ಯಕವಾಗಿದೆ.

ನೋಡಿರಿ

