RCB No.1 ಕನಸು ಭಗ್ನ.. ಅಂಪೈರ್ ಜೊತೆ ಕೊಹ್ಲಿ ಕಿರಿಕ್! – LSG ತೊರೆದ ಅರ್ಜುನ್ ತೆಂಡೂಲ್ಕರ್!

ನಿನ್ನೆ RCB ಮತ್ತು ಜಿಟಿ ನಡುವಿನ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಇತಿಹಾಸ ನಿರ್ಮಿಸಿದ್ದಾರೆ. ಏಷ್ಯಾದಲ್ಲಿ 12,000ಕ್ಕೂ ಹೆಚ್ಚು T20 ರನ್ ಪೂರೈಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಜೊತೆ ಟೇಬಲ್ ಟಾಪರ್ ಆಗಬೇಕೆಂದು ಕನಸು ಕಂಡಿದ್ದ RCBಗೆ ನಿರಾಸೆಯಾಗಿದೆ. ಇನ್ನು ಭುವನೇಶ್ವರ್ ಕುಮಾರ್ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಈ ಕುರಿತ ಇಂಟ್ರೆಸ್ಟಿಂಗ್ ಮಾಹಿತಿಗಳು ಇಲ್ಲಿವೆ.
ಇದನ್ನೂ ಓದಿ: ಮದವೇರಿದ ಆನೆ ಅಟ್ಟಹಾಸಕ್ಕೆ ಓರ್ವ ಬಲಿ, ಮಾವುತನಿಗೆ ಗಂಭೀರ ಗಾಯ! – ರಣರಂಗವಾಯ್ತು ದೇವಸ್ಥಾನದ ಆವರಣ!
- GT ವಿರುದ್ದದ ಪಂದ್ಯದಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್ನಲ್ಲಿ ನಂಬರ್ 1 ಸ್ಥಾನಕ್ಕೇರುವ ಆಸೆಯಲ್ಲಿದ್ದ RCBಗೆ ಈಗ ನಿರಾಸೆಯಾಗಿದೆ. ಗುಜರಾತ್ ವಿರುದ್ದ ಸೋತ RCB 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಇನ್ನು ಜಿಟಿ ತಂಡ 5ನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ಪಂಜಾಬ್ ಮೊದಲ ಸ್ಥಾನದಲ್ಲಿದ್ದು, ಲಕ್ನೋ ಕೊನೆಯ ಸ್ಥಾನದಲ್ಲಿದೆ.
- GT ವಿರುದ್ದದ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರ ವಿಕೆಟ್ ವಿವಾದಕ್ಕೆ ಗುರಿಯಾಗಿದೆ. ಜೇಸನ್ ಹೋಲ್ಡರ್ ಕ್ಯಾಚ್ ಹಿಡಿಯುವಾಗ ಚೆಂಡು ನೆಲಕ್ಕೆ ತಾಗಿರುವುದು ವಿಡಿಯೋದಲ್ಲಿ ಕಾಣಿಸಿದೆ. ಆದ್ರೆ 3ನೇ ಅಂಪೈರ್ ಪಾಟಿದಾರ್ ಔಟ್ ಎಂದು ತೀರ್ಪು ನೀಡಿದ್ರು. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಮತ್ತು ಕೋಚ್ ಆಂಡಿ ಫ್ಲವರ್ ರಿಸರ್ವ್ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಾರೆ.ಅವರ ಕೈ ನೆಲಕ್ಕೆ ತಾಗಿದ್ರೂ ಕೈಬೆರಳುಗಳು ಚೆಂಡಿನ ಅಡಿಯಲಿದ್ದವು ಎಂದು ಅಂಪೈರ್ ವಾದಿಸಿದ್ದಾರೆ. ಇದೀಗ ಅಂಪೈರ್ ನಿರ್ಧಾರ RCB ಫ್ಯಾನ್ಸ್ ಕಿಡಿಕಾರಿದ್ದಾರೆ.
- GT ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಏಷ್ಯಾದಲ್ಲಿ 12,000ಕ್ಕೂ ಹೆಚ್ಚು T20 ರನ್ ಪೂರೈಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಷ್ಯಾದಲ್ಲಿ 340 ಇನ್ನಿಂಗ್ಸ್ಗಳನ್ನಾಡಿರುವ ವಿರಾಟ್ ಕೊಹ್ಲಿ 12,012 ಟಿ20 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಕೊಹ್ಲಿ ಅಕ್ಕಪಕ್ಕ ಸದ್ಯ ಯಾವ ಬ್ಯಾಟ್ಸ್ಮನ್ ಕೂಡ ಇಲ್ಲ. ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಏಷ್ಯಾದಲ್ಲಿ 10,252 T20 ರನ್ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 10,023 ರನ್ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
- ಗುಜರಾತ್ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ ಕುಮಾರ್ 4 ಓವರ್ ಬೌಲಿಂಗ್ ಮಾಡಿ 28 ರನ್ಗಳಿಗೆ 3 ವಿಕೆಟ್ಗಳನ್ನು ಪಡೆದರು. ಈ ಮೂಲಕ ಪರ್ಪಲ್ ಕ್ಯಾಪ್ ನ ತಮ್ಮದಾಗಿಸಿಕೊಂಡಿದ್ದಾರೆ. ಅಂದ್ಹಾಗೆ 2026 ರ ಐಪಿಎಲ್ ಆವೃತ್ತಿಯಲ್ಲಿ, ಭುವನೇಶ್ವರ್ 9 ಪಂದ್ಯಗಳಲ್ಲಿ 17 ವಿಕೆಟ್ಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಸೆಕೆಂಡ್ ಪ್ಲೇಸ್ನಲ್ಲಿ SRH ವೇಗಿ ಇಶಾನ್ ಮಾಲಿಂಗ ಇದ್ದಾರೆ. ಇನ್ನು ಇದೇ ಮ್ಯಾಚ್ನಲ್ಲಿ ಭುವಿ ಈ IPLನಲ್ಲಿ 200 ವಿಕೆಟ್ ಪೂರ್ತಿಗೊಳಿಸಿದ ಮೊದಲ ಬೌಲರ್ ಎಂಬ ದಾಖಲೆಯನ್ನ ತಮ್ಮದಾಗಿಸಿಕೊಂಡರು.
- ಗುಜರಾತ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫುಲ್ ವೈಲೆಂಟ್ ಆಗಿ ಕಾಣಿಸಿಕೊಂಡಿದ್ರು. ಶುಭ್ಮನ್ ಗಿಲ್ ಔಟಾದಾಗ ಕೊಹ್ಲಿ ಬಾಲ್ನ ನೆಲಕ್ಕೆ ಬಡಿದು ಕಿರುಚಾಡಿ ಸೆಲೆಬ್ರೇಷನ್ ಮಾಡಿದ್ರು. ಇದೀಗ ಕೊಹ್ಲಿಗೆ, ಗಿಲ್ ಕೌಂಟರ್ ಕೊಟ್ಟಿದ್ದಾರೆ. ಗಿಲ್ ಸೋಶಿಯಲ್ ಮೀಡಿಯಾದಲ್ಲಿ ತಂಡದ ಕೆಲ ಫೋಟೊಗಳ ಜತೆ ಕೊಹ್ಲಿ ದಿಟ್ಟಿಸಿ ನೋಡುತ್ತಿರುವ ಫೋಟೋ ಪೋಸ್ಟ್ ಮಾಡಿ, ಪ್ಲೇ ಹೋಲ್ಡ್ ಜೇಸನ್ ಹೋಲ್ಡರ್, ಟೀಂನಿಂದ ದಿಟ್ಟ ಪ್ರದರ್ಶನ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಮೂಲಕ RCB ಘೋಷ ವಾಕ್ಯವಾದ ಪ್ಲೇ ಬೋಲ್ಡ್ ಅನ್ನೋ ಪದಕ್ಕೆ ಗಿಲ್ ಪ್ಲೇ ಹೋಲ್ಡ್ ಎಂದು ಪೋಸ್ಟ್ ಹಾಕಿ ಕೊಹ್ಲಿ ಹಾಗೂ RCBಗೆ ಕೌಂಟರ್ ಕೊಟ್ಟಿದ್ದಾರೆ.
- ಲಕ್ನೋ ಸೂಪರ್ಜೈಂಟ್ಸ್ ತಂಡ ಸೇರಿದ ಅರ್ಜುನ್ ತೆಂಡೂಲ್ಕರ್ಗೆ ಆಡಲು ಅವಕಾಶ ಸಿಕ್ಕಿಲ್ಲ. ಈ ನಡುವೆ ಅರ್ಜುನ್ ಮುಂಬೈ ಟಿ20 ಲೀಗ್ ಹರಾಜಿಗೆ ₹5 ಲಕ್ಷ ಮೂಲ ಬೆಲೆಯೊಂದಿಗೆ ಸೇರಿಕೊಂಡಿದ್ದಾರೆ. ಮುಂಬೈ ಟಿ20 ಲೀಗ್ಗಾಗಿ ಮೇ 2 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಅರ್ಜುನ್ ಕೂಡ ಮೂಲ ಬೆಲೆ 5 ಲಕ್ಷ ರೂಗಳೊಂದಿಗೆ ಈ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
- ಇಂದು RR ಮತ್ತು DC ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಒಟ್ಟು 8 ಪಂದ್ಯಗಳನ್ನ ಆಡಿದ್ದು, ಇದ್ರಲ್ಲಿ 5 ಪಂದ್ಯಗಳನ್ನ ಸೋತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಡಿಸಿ ಗೆಲ್ಲಬೇಕಾಗಿದೆ. ಇನ್ನು ಭುಜದ ಗಾಯದಿಂದ ಚೇತರಿಸಿಕೊಂಡಿರುವ ಮಿಚೆಲ್ ಸ್ಟಾರ್ಕ್ RR ವಿರುದ್ದ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ.
- ವೈಭವ್ ಸೂರ್ಯವಂಶಿ ಬ್ಯಾಟ್ನಲ್ಲಿ AI ಚಿಪ್ ಇದೆ. ಲ್ಯಾಬ್ಗೆ ಕಳುಹಿಸಿ ಟೆಸ್ಟ್ ಮಾಡಬೇಕು ಎಂದು ಪಾಕ್ ಕಿಕೆಟ್ ತಜ್ಞ ನೌಮನ್ ನಿಯಾಜ್ ಹೇಳಿದ್ದರು. ಇದೀಗ ನಿಯಾಜ್ಗೆ ವೈಭವ್ ಸೂರ್ಯವಂಶಿ ಕೌಂಟರ್ ಕೊಟ್ಟಿದ್ದಾರೆ. ದೇವರೇ ನನ್ನ ಬ್ಯಾಟ್ಗೆ ಎಐ ಚಿಪ್ ಅಂಟಿಸಿ ಕಳುಹಿಸಿದ್ದಾನೆ. ನಿನ್ನ ಬ್ಯಾಟಿಗೆ ಏನೋ ಒಂದನ್ನು ಅಂಟಿಸಿದ್ದೇನೆ ಎಂದು ದೇವರು ನನಗೆ ಹೇಳಿಯೇ ಕಳಿಸಿದ್ರು. ಈಗ ಅದನ್ನೇ ಬಳಸುತ್ತಿದ್ದೇನೆ ಎಂದು ಹೇಳಿದ್ದಾರೆ.
- ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಲುಂಗಿ ಎನ್ಗಿಡಿ ಸದ್ಯ ಚೇತರಿಸಿಕೊಂಡಿದ್ದು ಶೀಘ್ರದಲ್ಲೇ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸದ್ಯ ಲುಂಗಿ ಎನ್ಗಿಡಿ ಬೌಲಿಂಗ್ ಅಭ್ಯಾಸದಲ್ಲಿ ತೊಡಗಿದ್ದಾರೆ. ಇದ್ರ ವಿಡಿಯೋವನ್ನ ಡೆಲ್ಲಿ ಕ್ಯಾಪಿಟಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
- ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ LSG ತಂಡ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡವು ಟಾಸ್ ಗೆದ್ದಾಗಲೂ ನಿರಂತರವಾಗಿ ರನ್ ಚೇಸ್ ಮಾಡಲು ಮುಂದಾಗಿರುವುದು ಕೂಡ ದೊಡ್ಡ ತಪ್ಪು. ತಂಡದ ಬ್ಯಾಟರ್ಸ್ ಒತ್ತಡದಲ್ಲಿ ಬ್ಯಾಟ್ ಮಾಡಲು ಸಾಧ್ಯವಾಗುತ್ತಿಲ್ಲವೆಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಅದೇ ತಂತ್ರ ಮುಂದುವರಿಸೋದ್ರಲ್ಲಿ ಅರ್ಥವಿಲ್ಲ ಎಂದಿದ್ದಾರೆ.

ನೋಡಿರಿ

