ರೋಡ್ ಶೋ ಮೂಲಕ ಅಮಿತ್ ಶಾ ಶಕ್ತಿಪ್ರದರ್ಶನ – ಚುನಾವಣೆಗೆ ಏನೆಲ್ಲಾ ಕಸರತ್ತು..?

ರೋಡ್ ಶೋ ಮೂಲಕ ಅಮಿತ್ ಶಾ ಶಕ್ತಿಪ್ರದರ್ಶನ – ಚುನಾವಣೆಗೆ ಏನೆಲ್ಲಾ ಕಸರತ್ತು..?

ವಿಧಾನಸಭೆ ಎಲೆಕ್ಷನ್ ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿಯಲ್ಲಿ ಹತ್ತಾರು ಕಸರತ್ತುಗಳು ಶುರುವಾಗಿದೆ. ಈಗಾಗ್ಲೇ ರಾಷ್ಟ್ರ ಮಟ್ಟದ ನಾಯಕರು ಒಬ್ಬರ ಹಿಂದೆ ಒಬ್ಬರಂತೆ ರಾಜ್ಯಕ್ಕೆ ಮ್ಯಾರಾಥಾನ್ ನಡೆಸ್ತಿದ್ದಾರೆ. ಇವತ್ತು ಬಿಜೆಪಿ ಪಾಳಯದ ಚಾಣಕ್ಯ ಅಮಿತ್ ಶಾ ಶಕ್ತಿ ಪ್ರದರ್ಶನ ತೋರಿಸಿದ್ದಾರೆ.

ಇದನ್ನೂ ಓದಿ : 

ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದಲ್ಲಿ ಅಮಿತ್ ಶಾ ರೋಡ್ ಶೋ ನಡೆಸಿದ್ರು. ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸೋಕೆ ಕರಸತ್ತು ನಡೆಸಿದ್ರು. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು. ರೋಡ್ ಶೋಗೆ ಜನಸಾಗರವೇ ಹರಿದು ಬಂದಿದ್ದು, ಪ್ರವಾಸಿ ಮಂದಿರದಿಂದ ಗಾಳಿ ಮರೆಮ್ಮ ದೇವಸ್ಥಾನದವರೆಗೆ ರೋಡ್ ಶೋ ನಡೀತು. ಅಮಿತ್ ಶಾಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ರು. ಕೇಂದ್ರ ಗೃಹ ಸಚಿವರ ಇಚ್ಛೆಯ ಮೇರೆಗೆ ಕುಂದಗೋಳದ ರೋಡ್ ಶೋ ಅಂತರವನ್ನು ಒಂದೂವರೆ ಕಿಮೀನಿಂದ ಒಂದು ಕಿಮೀಗೆ ಇಳಿಸಲಾಗಿತ್ತು. ಇದರಿಂದಾಗಿ ರಸ್ತೆಯುದ್ದಕ್ಕೂ ನೆರೆದಿದ್ದ ಸಹಸ್ರಾರು ಜನರಿಗೆ ನಿರಾಶೆಯಾಗಿದೆ.

ರೋಡ್ ಶೋಗೂ ಮುನ್ನ ಧಾರವಾಡದ ಫೊರೆನ್ಸಿಕ್ ವಿವಿಯನ್ನ ಅಮಿತ್ ಶಾ ಉದ್ಘಾಟನೆ ಮಾಡಿದ್ರು. ಹಾಗೇ ಎನ್​ಎಫ್​ಎಸ್​ಯು ಕ್ಯಾಂಪಸ್​ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅಮಿತ್  ಶಾ ‘ಅಪರಾಧ ಪತ್ತೆಯಲ್ಲಿ ನಾವು ಬೆಳೆದಿದ್ದೇವೆ. ಅಪರಾಧ ಪ್ರಕರಣಗಳಲ್ಲಿ ನ್ಯಾಯ ಸಿಗಬೇಕಾದರೆ ಫೊರೆನ್ಸಿಕ್ ತಜ್ಞರ ಪಾತ್ರ ತುಂಬಾ ಇದೆ. ಹೀಗಾಗಿ ಈ ವಿವಿ ಬಹಳ ಮುಖ್ಯ ಪಾತ್ರ ವಹಿಸಲಿದೆ’ ಅಂದ್ರು.

 

suddiyaana