4 ವರ್ಷಗಳ ಹಿಂದೆ ‘ಕೆಡಿ’ ಸಿನಿಮಾ ಶುರುವಾಗಿತ್ತು. ಕೊನೆಗೂ ತೆರೆ ಕಂಡಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಚಿತ್ರದಲ್ಲಿ ನಟಿಸಿರುವುದು ಕುತೂಹಲ ಹೆಚ್ಚಿಸಿದೆ. ಕಿಚ್ಚ ಗೆಸ್ಟ್ ಅಪಿಯರೆನ್ಸ್ ಯಾಕೆ ಎನ್ನುವ ಪ್ರಶ್ನೆ ಫ್ಯಾನ್ಸ್‌ಗೆ ಇತ್ತು. ಅಂತೂ ಇಂದು ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಸಿನಿಮಾ 70ರ ದಶಕದ ಕಥೆಯನ್ನು ರೆಟ್ರೋ ಶೈಲಿಯಲ್ಲಿ ಹೇಳಲಾಗ್ತಿದೆ. ‘ದಿ ವಿಲನ್’ ಬಳಿಕ ಪ್ರೇಮ್ ನಿರ್ದೇಶನದ ದೊಡ್ಡ ಸಿನಿಮಾ ಇದು. ಬೆಂಗಳೂರಿನಲ್ಲಿ ಮೊದಲ ದಿನ 320ಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನ ನಡೆಯುತ್ತಿದೆ.
ಧ್ರುವ ಸರ್ಜಾ ಅಭಿನಯದ ‘KD’ ಸಿನಿಮಾ ರಿಲೀಸ್ – ಹೇಗಿದೆ ಸಿನಿಮಾ? ಕಥೆಯೇನು? ಕಂಪ್ಲೀಟ್ ರಿವ್ಯೂ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್‌ನ ‘ಕೆಡಿ ದಿ ಡೆವಿಲ್’ ಸಿನಿಮಾ ಇಂದು ತೆರೆ ಕಂಡಿದೆ. ರೀಷ್ಮಾ ನಾಣಯ್ಯ ಚಿತ್ರದ ನಾಯಕಿ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದವರು ಚಿತ್ರದಲ್ಲಿದ್ದಾರೆ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ನೋಡಿದವರು ಸಖತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ಧ್ರುವ ಅವರ ನಟನೆಗೆ ಫ್ಯಾನ್ಸ್ ಮನಸೋತ್ತಿದ್ದಾರೆ.
ಇದನ್ನೂ ಓದಿ: ಸೋತ ಮೇಲೆ ನೋವು ತೋಡಿಕೊಂಡ ಹಾರ್ದಿಕ್ ಪಾಂಡ್ಯ – ಮುಂಬೈ ಫ್ಯಾನ್ಸ್ ಕಣ್ಣೀರು..!
ಅಭಿಮಾನಿಗಳ ಅಭಿಪ್ರಾಯ
ಇನ್ನೊಬ್ಬರು ಧ್ರುವ ಸರ್ಜಾ ಡೀಸೆಂಟ್ ಎಂಟ್ರಿ. ಸಂಜಯ್ ದತ್ ಹೈಪ್ ತುಂಬಾ ಕೊಟ್ಟಿದ್ದಾರೆ. ಬ್ಯಾಕ್‌ಗ್ರೌಂಡ್ ಸ್ಕೋರ್ ಅಂತು ಎಲ್ಲೂ ಡ್ರಾಪ್ ಆಗಿಲ್ಲ. ಪ್ರತಿ ಸೀನ್ ಅಲ್ಲು ಸೌಂಡ್ ಜೋರ್ ಇದೆ.ಹೀರೋಯಿನ್ ಕ್ಯಾರೆಕ್ಟರೇಶನ್ ಇಷ್ಟ ಆಗ್ಲಿಲ್ಲಾ. ಭೈರವನ ಪ್ರವೇಶ (ಕಿಚ್ಚ) ಮಾಸ್ ಆಗಿತ್ತು ಎಂದು ಇನ್ನೊಬ್ಬರು ಹೇಳಿದ್ದಾರೆ.

ನೋಡಿರಿ

