RCB ವಿರುದ್ಧ PBKS ಟ್ರೋಲ್ – LSG ತೊರೆದ ಅರ್ಜುನ್ ತೆಂಡೂಲ್ಕರ್ – ಅರ್ಶ್‌ದೀಪ್‌ಗೆ ಮೋಸ ಮಾಡಿದ್ರಾ ವೈಭವ್?
ಐಪಿಎಲ್‌ ಅಂಗಳದ ರೋಚಕ ಸುದ್ದಿಗಳ ಹೈಲೆಟ್ಸ್..!

RCB ವಿರುದ್ಧ PBKS ಟ್ರೋಲ್ – LSG ತೊರೆದ ಅರ್ಜುನ್ ತೆಂಡೂಲ್ಕರ್ – ಅರ್ಶ್‌ದೀಪ್‌ಗೆ ಮೋಸ ಮಾಡಿದ್ರಾ ವೈಭವ್?ಐಪಿಎಲ್‌ ಅಂಗಳದ ರೋಚಕ ಸುದ್ದಿಗಳ ಹೈಲೆಟ್ಸ್..!

ಐಪಿಎಲ್ ಅಂಗಳದಲ್ಲಿ ಕೆಲವೊಂದು ಸ್ವಾರಸ್ಯಕರ ಘಟನೆಗಳು ನಡೆಯುತ್ತವೆ. ಆಟಗಾರರು ಪರಸ್ಪರರ ಕಾಲೆಳೆದುಕೊಳ್ಳುತ್ತಾರೆ. ಜೊತೆಗೆ ಮರಿ ತೆಂಡೂಲ್ಕರ್ ಅರ್ಜುನ್ ತೆಂಡೂಲ್ಕರ್ ಪರಿಸ್ಥಿತಿ ಬದಲಾಗಿದೆ. ರೋಹಿತ್ ಶರ್ಮಾ ಇನ್ನೂ ಎರಡು ಪಂದ್ಯ ಆಡಲ್ಲ. ಈ ಎಲ್ಲಾ ವಿಚಾರಗಳ ಹೈಲೆಟ್ಸ್ ಇಲ್ಲಿದೆ.

ಇದನ್ನೂ ಓದಿ:ಸೋತ ಮೇಲೆ ನೋವು ತೋಡಿಕೊಂಡ ಹಾರ್ದಿಕ್ ಪಾಂಡ್ಯ – ಮುಂಬೈ ಫ್ಯಾನ್ಸ್ ಕಣ್ಣೀರು..!

 

  • ಮುಂಬೈ ತಂಡದ ಸೋಲಿಗೆ ಕಳಪೆ ಬೌಲಿಂಗ್ ಮತ್ತು ಆರಂಭಿಕ ಓವರ್‌ಗಳಲ್ಲಿ ರನ್‌ಗಳ ಸುರಿಮಳೆಯೇ ಕಾರಣ ಎಂದು ಹಾರ್ದಿಕ್ ಪಾಂಡ್ಯ ನೇರವಾಗಿ ಹೇಳಿದ್ದಾರೆ. ಸೋಲಿಗೆ ಕೆಟ್ಟ ಚೆಂಡುಗಳು ಪ್ರಮುಖ ಪಾತ್ರ ವಹಿಸಿವೆ. ಜೊತೆಗೆ ನಾವು ಕೆಲವು ಕೆಟ್ಟ ಚೆಂಡುಗಳನ್ನು ಬೌಲ್ ಮಾಡಿದ್ದೇವೆ. ಇದೇ ಸೋಲಿಗೆ ಕಾರಣವಾಯ್ತು ಎಂದು ಹಾರ್ದಿಕ್ ಪಾಂಡ್ಯ ಸೋಲಿಗೆ ಕಾರಣ ಕೊಟ್ಟಿದ್ದಾರೆ.
  • ಮುಂಬೈ ತಂಡವನ್ನು ಸೋಲಿಸಿರುವ ಜೋಶ್‌ನಲ್ಲಿರುವ ಹೈದ್ರಾಬಾದ್ ತಂಡದ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್ ಈಶಾನ್ ಮಾಲಿಂಗರನ್ನು ಹೊಗಳಿದ್ದಾರೆ. ಈಶಾನ್ ಮಾಲಿಂಗ ಅವರ ಬೌಲಿಂಗ್ ದಾಳಿಯೇ ನಮ್ಮ ಗೆಲುವಿಗೆ ಕಾರಣ. ಈಶಾನ್ ಮಾಲಿಂಗ ಅವರಂತಹ ಬೌಲರ್‌ಗಳು ನಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ಯಾಟ್ ಕಮಿನ್ಸ್ ಶ್ಲಾಘಿಸಿದ್ದಾರೆ.
  • RCB ಮತ್ತು GT ನಡುವೆ ಎರಡನೇ ಬಾರಿಯ ಕಾದಾಟಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಮೊದಲು ಉಭಯ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಆರ್​ಸಿಬಿ ಸುಲಭವಾಗಿ ಗೆದ್ದುಕೊಂಡಿತ್ತು. ಇದೀಗ ಆರ್​ಸಿಬಿ ಸತತ ಎರಡನೇ ಪಂದ್ಯವನ್ನು ಗೆಲ್ಲುವ ಇರಾದೆಯಲ್ಲಿದೆ. ಇತ್ತ ಗುಜರಾತ್ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ.
  • ಆರ್‌ಸಿಬಿ ವಿರುದ್ಧ ಅವರ ತವರಿನಲ್ಲಿ ಗುಜರಾತ್ ಸೋತ ನಿರಾಶೆಯಲ್ಲಿದೆ. ಇದೀಗ ಗುಜರಾತ್ ತನ್ನ ತವರಲ್ಲಿ ಬೆಂಗಳೂರು ತಂಡವನ್ನು ಸೋಲಿಸುವ ಉತ್ಸಾಹದಲ್ಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಆರ್​ಸಿಬಿ ಆರು ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಗುಜರಾತ್ ನಾಲ್ಕು ಗೆಲುವುಗಳೊಂದಿಗೆ ಐದನೇ ಸ್ಥಾನದಲ್ಲಿದೆ.
  • ಸಿಎಸ್‌ಕೆ ತಂಡ ಕೂಡಾ ಈ ಬಾರಿ ಐಪಿಎಲ್ ನಲ್ಲಿ ಡಲ್ ಫರ್ಫಾಮೆನ್ಸ್ ನೀಡ್ತಿದೆ. ತಂಡದಲ್ಲಿರುವ ಆಟಗಾರರಲ್ಲಿ ಗಾಯಾಳುಗಳೇ ಜಾಸ್ತಿಯಿದ್ದಾರೆ. ಇದರ ಮಧ್ಯೆ ಮುಂಬೈ ಆಲ್‌ರೌಂಡರ್​ನ ಟ್ರಯಲ್​ಗೆ ಕರೆದಿದೆ. ಖಲೀಲ್ ಅಹ್ಮದ್ ಬದಲಿಗೆ 21 ವರ್ಷದ ಮುಂಬೈ ಆಲ್‌ರೌಂಡರ್ ಆಯುಷ್ ವರ್ತಕ್ ಅವರನ್ನು ಟ್ರಯಲ್​ಗೆ ಆಹ್ವಾನಿಸಿದೆ. ಆಯುಷ್ ವರ್ತಕ್ ಆಟ ಇಷ್ಟವಾದ್ರೆ ಚೆನ್ನೈ ತಂಡದ ಬೌಲಿಂಗ್‌ಗೆ ಹೊಸ ಅಸ್ತ್ರ ಸಿಗಬಹುದು.
  • ಲಕ್ನೋ ಸೂಪರ್‌ಜೈಂಟ್ಸ್‌ ತಂಡ ಸೇರಿದ ಅರ್ಜುನ್ ತೆಂಡೂಲ್ಕರ್‌ಗೆ ಆಡಲು ಅವಕಾಶ ಸಿಕ್ಕಿಲ್ಲ. ಈ ನಡುವೆ ಮುಂಬೈ ಟಿ20 ಲೀಗ್ ಹರಾಜಿಗೆ ₹5 ಲಕ್ಷ ಮೂಲಬೆಲೆಯೊಂದಿಗೆ ಸೇರಿಕೊಂಡಿದ್ದಾರೆ. ಮುಂಬೈ ಟಿ20 ಲೀಗ್​ಗಾಗಿ ಮೇ 2 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಅರ್ಜುನ್ ಕೂಡ ಮೂಲ ಬೆಲೆ 5 ಲಕ್ಷ ರೂಗಳೊಂದಿಗೆ ಈ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
  • ವೈಭವ್ ಸೂರ್ಯವಂಶಿ ಅವರನ್ನು ಒಬ್ಬ ಮೋಸಗಾರ ಎಂದು ಅರ್ಶ್‌ದೀಪ್ ಸಿಂಗ್ ತಮಾಷೆ ಮಾತಲ್ಲಿ ಹೇಳಿದ್ದಾರೆ. ಅವನು ನನ್ನನ್ನು ಭಯ್ಯಾ, ಭಯ್ಯಾ ಎಂದು ಯಾವಾಗಲೂ ಕರೆಯುತ್ತಾನೆ. ಆದರೆ ಮೈದಾನಕ್ಕೆ ಬಂದ ನಂತರ ಅದೆಲ್ಲವನ್ನೂ ಮರೆತುಬಿಡುತ್ತಾನೆ ಎಂದು ಹೇಳಿದರು. ಭಯ್ಯಾ ಅಂತಾ ಕರೆದುಕೊಂಡೇ ನನ್ನ ಬಾಲ್‌ಗೆ 35 ರನ್ ಹೊಡೆದುಬಿಟ್ಟ ಎಂದು ಅರ್ಶ್‌ದೀಪ್ ಸಿಂಗ್ ಜೈಸ್ವಾಲ್‌ ಬಳಿ ನೋವು ತೋಡಿಕೊಂಡಿದ್ದಾರೆ.
  • ಪಂಜಾಬ್ ಮತ್ತು RCB ನಡುವಿನ ಪಂದ್ಯ ಮೇ 17ರಂದು ನಡೆಯಲಿದೆ. ಆದರೆ ಅದಕ್ಕೂ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ವಾರ್ ಶುರುವಾಗಿದೆ. ಪಂಜಾಬ್ ಕಿಂಗ್ಸ್ ತಂಡ ಮಾಡಿರುವ ಟ್ವೀಟ್ RCB ಅಭಿಮಾನಿಗಳನ್ನು ಕೆರಳಿಸಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ನಡುವೆ ಪಂಜಾಬ್ ತಂಡ ತನ್ನ ಸಾಮಾಜಿಕ ಮಾಧ್ಯಮದಲ್ಲಿ 49 ರನ್ ಸ್ಕೋರ್‌ಕಾರ್ಡ್ ಅನ್ನು ಪೋಸ್ಟ್ ಮಾಡಿ RCB ತಂಡವನ್ನ ಟ್ರೋಲ್ ಮಾಡಿದೆ.
  • ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್, ಮುಂಬೈ ತಂಡದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಇನ್ನೂ ಚೇತರಿಕೆ ಕಂಡಿಲ್ಲ.. ರೋಹಿತ್ ಅವರು ಚೇತರಿಸಿಕೊಳ್ಳಲು ಇನ್ನೂ ಎರಡು ಪಂದ್ಯಗಳು ಬೇಕಾಗಬಹುದು ಎಂದು ಮುಂಬೈ ಮ್ಯಾನೇಜ್‌ಮೆಂಟ್ ಹೇಳಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯು ತಂಡಕ್ಕೆ ದೊಡ್ಡ ನಷ್ಟವಾಗಿದ್ದರೂ, ಆರಂಭಿಕ ಬ್ಯಾಟರ್ಸ್ ಭರ್ಜರಿ ಫಾರ್ಮ್‌ನಲ್ಲಿರುವುದು ಮುಂಬೈ ತಂಡಕ್ಕೆ ಸಮಾಧಾನ ತಂದಿದೆ.ರೋಹಿತ್ ಶರ್ಮಾ ಏಪ್ರಿಲ್ 30ಕ್ಕೆ 38ನೇ ವರ್ಷಕ್ಕೆ ಕಾಲಿಟ್ಟ ಖುಷಿಯಲ್ಲಿದ್ದಾರೆ.

Sulekha