ಸೋತ ಮೇಲೆ ನೋವು ತೋಡಿಕೊಂಡ ಹಾರ್ದಿಕ್ ಪಾಂಡ್ಯ – ಮುಂಬೈ ಫ್ಯಾನ್ಸ್ ಕಣ್ಣೀರು..!

ಸೋತ ಮೇಲೆ ನೋವು ತೋಡಿಕೊಂಡ ಹಾರ್ದಿಕ್ ಪಾಂಡ್ಯ – ಮುಂಬೈ ಫ್ಯಾನ್ಸ್ ಕಣ್ಣೀರು..!

ಬುಧವಾರ ನಡೆದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋತಿದೆ. ಅದು ಕೂಡಾ ತವರಲ್ಲೇ ಮುಂಬೈ ತಂಡ ಸೋಲಿನ ಅವಮಾನ ಎದುರಿಸಿದೆ. ಸೋತ ಮೇಲೆ ಮುಂಬೈ ಕ್ಯಾಪ್ಟನ್ ಕೊಟ್ಟ ಕಾರಣಕ್ಕೆ ಮುಂಬೈ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇದನ್ನೂ ಓದಿ:ಮುಂಬೈ ನೀಡಿದ ಬಿಗ್ ಟಾರ್ಗೆಟ್ ಧೂಳಿಪಟ – MI ಎದುರು SRHಗೆ ರಣರೋಚಕ ಜಯ

ಸೋಲಿನ ಮೇಲೆ ಸೋಲಿನ ಆಘಾತ. ಬಿಗ್ ಸ್ಕೋರ್ ಗಳಿಸಿದರು ಹೈದ್ರಾಬಾದ್ ತಂಡವನ್ನು ಕಟ್ಟಿಹಾಕಲು ವಿಫಲರಾದ ದಿಗ್ಗಜ ಬೌಲರ್ಸ್. ಮುಂಬೈ ಇಂಡಿಯನ್ಸ್ ಎಷ್ಟೇ ತಿಪ್ಪರಲಾಗ ಹಾಕಿದರು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಒಂದು ಬಲಿಷ್ಠ ಟೀಮ್ ಗೆಲ್ಲಲು ಎಷ್ಟು ಕಷ್ಟಪಡುತ್ತಿದೆ ಅನ್ನೋದನ್ನು ನೋಡಲಾಗದೇ ಮುಂಬೈ ಅಭಿಮಾನಿಗಳು ಮೌನವಾಗಿದ್ದಾರೆ. ಕೆಲವರು ಕಣ್ಣೀರು ಹಾಕಿದರೆ, ಕೆಲವರು ಏನಾಯ್ತು, ಇದೇನಾಯ್ತು ಅಂತಾ ನೋವು ತೋಡಿಕೊಂಡಿದ್ದಾರೆ. ಇದೆಲ್ಲದರ ಮಧ್ಯೆ ಮುಂಬೈ ಕಾಪ್ಟನ್ ಕೊಟ್ಟ ಕಾರಣ ಅಭಿಮಾನಿಗಳಿಗೆ ಮತ್ತಷ್ಟು ನೋವು ಕೊಟ್ಟಿದೆ.

ವಾಂಖೆಡೆಯಲ್ಲಿ ನಡೆದ ಪಂದ್ಯದ ವೇಳೆ ಎದುರಾಳಿ ತಂಡಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದ ಅಭಿಮಾನಿಗಳ ಬಗ್ಗೆ ಹಾರ್ದಿಕ್ ಪಾಂಡ್ಯ ತಮ್ಮ ನೋವನ್ನು ವ್ಯಕ್ತಪಡಿಸಿದರು. ವಿರೋಧಿ ತಂಡ ಬಂದಾಗ ಅಭಿಮಾನಿಗಳು ಅವರ ಹೆಸರು ಜಪಿಸಿದಾಗ ಕೆಲವೊಮ್ಮೆ ದುಃಖವಾಗುತ್ತದೆ. ನಮ್ಮ ಅಭಿಮಾನಿಗಳು ತುಂಬಾ ನಿಷ್ಠಾವಂತರು, ಆದರೆ ನಾವು ಅವರನ್ನು ಮನರಂಜಿಸಬೇಕು ಮತ್ತು ಅವರ ವಿಶ್ವಾಸವನ್ನು ಮರಳಿ ಗಳಿಸಬೇಕು ಎಂದು ಪಾಂಡ್ಯ ಹೇಳಿದ್ದಾರೆ. ಪಾಂಡ್ಯ ಆಡಿರುವ ಈ ಮಾತು ಮುಂಬೈ ಇಂಡಿಯನ್ಸ್ ಫ್ಯಾನ್ಸ್‌ಗೆ ಶಾಕ್ ಜೊತೆಗೆ ಬೇಸರ ತಂದಿದೆ.

ಇನ್ನು ತಮ್ಮ ಸೋಲಿಗೆ ಕಳಪೆ ಬೌಲಿಂಗ್ ಮತ್ತು ಆರಂಭಿಕ ಓವರ್‌ಗಳಲ್ಲಿ ರನ್‌ಗಳ ಸುರಿಮಳೆಯೇ ಕಾರಣ ಎಂದು ಹಾರ್ದಿಕ್ ಪಾಂಡ್ಯ ನೇರವಾಗಿ ಹೇಳಿದ್ದಾರೆ. ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಮ್ಮ ಘಟನೆತೆಗೆ ತಕ್ಕಂತೆ ಆಡಿಲ್ಲ ಎಂಬ ನೈಜ್ಯತೆಯನ್ನೂ ಪಾಂಡ್ಯ ಒಪ್ಪಿಕೊಂಡಿದ್ದಾರೆ. ಪಂದ್ಯದಲ್ಲಿ ಇಬ್ಬನಿ ಪ್ರಮುಖ ಪಾತ್ರ ವಹಿಸಲಿಲ್ಲ ಎಂದು ಹಾರ್ದಿಕ್ ಪಾಂಡ್ಯ ಸ್ಪಷ್ಟಪಡಿಸಿದರು. ಸೋಲಿಗೆ ಕೆಟ್ಟ ಚೆಂಡುಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಪಾಂಡ್ಯ ಹೇಳಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ಮುಂಬೈ ಇಂಡಿಯನ್ಸ್ , 244 ರನ್​ಗಳ ಬೃಹತ್ ಗುರಿಯನ್ನ ಹೈದ್ರಾಬಾದ್ ತಂಡಕ್ಕೆ ನೀಡಿತ್ತು. ಆದರೆ, ಹೈದ್ರಬಾದ್ ತಂಡ ಇನ್ನೂ 8 ಎಸೆತಗಳಿರುವಂತೆಯೇ ಚೇಸ್ ಮಾಡಿ ಗೆದ್ದು ಇತಿಹಾಸ ಸೃಷ್ಟಿಸಿದೆ.

Sulekha