ಧನಲಾಭ ಬೇಕಾ? ಸಮಸ್ಯೆಗಳಿಗೆ ಪರಿಹಾರ ಬೇಕಾ? – ಲಕ್ಷ್ಮೀ ಪೂಜೆಯಲ್ಲಿ ಬಳಸಿ ಕಮಲದ ಹೂ

ಧನಲಾಭ ಬೇಕಾ? ಸಮಸ್ಯೆಗಳಿಗೆ ಪರಿಹಾರ ಬೇಕಾ? – ಲಕ್ಷ್ಮೀ ಪೂಜೆಯಲ್ಲಿ ಬಳಸಿ ಕಮಲದ ಹೂ

 ಕಮಲ ಹೂವು ಶುದ್ಧತೆ, ಐಶ್ವರ್ಯ ಮತ್ತು ದೈವಿಕ ಶಕ್ತಿಯ ಸಂಕೇತ. ಭಕ್ತಿಯಿಂದ ಇದನ್ನು ಪೂಜೆಯಲ್ಲಿ ಬಳಸುವುದರಿಂದ ಪಾಪಗಳು ನಿವಾರಣೆಯಾಗುತ್ತವೆ ಮತ್ತು ಮನಸ್ಸಿನ ದುಃಖಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ತಾವರೆ ನಮ್ಮ ಜೀವನದಲ್ಲಿ ಶುಭಫಲ ತರುತ್ತದೆ ಎಂಬ ನಂಬಿಕೆ ಇದೆ. ಹಣವನ್ನು ಆಕರ್ಷಿಸುವ ಶಕ್ತಿ ಇದಕ್ಕಿದೆ ಎಂದು ಶಾಸ್ತ್ರ ಹೇಳುತ್ತದೆ.

ಆದ್ದರಿಂದ ತಾವರೆಯನ್ನು ಲಕ್ಷ್ಮೀ ಪೂಜೆಯಲ್ಲಿ ಬಳಸಿದರೆ ಧನಲಾಭ ಪಡೆಯಬಹುದು ಮತ್ತು ಜೀವನದ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎನ್ನುತ್ತದೆ ಪುರಾಣ ಗ್ರಂಥ. ಇದರಿಂದ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಯಶಸ್ಸು ದೊರೆಯುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಬನ್ನಿಜ್ಯೋತಿಷ್ಯ ಶಾಸ್ತ್ರದ  ಸಲಹೆಯಂತೆ  ಕಮಲದ ಹೂವಿನಿಂದ ಯಾವ ಪರಿಹಾರಗಳನ್ನು ಮಾಡಿದ್ದರೆ ಏನು ಪ್ರಯೋಜನ ಎಂಬುದನ್ನು ತಿಳಿದುಕೊಳ್ಳೋಣ.

ಆರ್ಥಿಕ ಅಭಿವೃದ್ಧಿ

ಶುಕ್ರವಾರ ಕಮಲದ ಹೂವನ್ನು ಲಕ್ಷ್ಮೀ ದೇವಿ ಪಾದಗಳಿಗೆ ಅರ್ಪಿಸಿ. ಇದನ್ನು ನಿರಂತರವಾಗಿ 5 ಶುಕ್ರವಾರಗಳವರೆಗೆ ಮಾಡಿದರೆ ಹಣಕಾಸಿನ ತೊಂದರೆ ಕಡಿಮೆಯಾಗುತ್ತದೆ. ನಿಮ್ಮ ಶ್ರಮಕ್ಕೆ ಫಲ ಸಿಗದಿದ್ದರೆ, ಕಮಲದ ಹೂವನ್ನು ಪೂಜಿಸಿ ಕೆಂಪು ಬಟ್ಟೆಯಲ್ಲಿ ಕಟ್ಟಿ ಹಣ ಇಡುವ ಸ್ಥಳದಲ್ಲಿ ಇರಿಸಬೇಕು.

ಲಕ್ಷ್ಮೀ ದೇವಿಯ ಕೃಪೆ ಪಡೆಯಲು

11 ಶುಕ್ರವಾರಗಳ ಕಾಲ ಒಂದು ತೆಂಗಿನಕಾಯಿ ಮತ್ತು ಬಿಳಿ ಕಮಲವನ್ನು ಲಕ್ಷ್ಮೀ ದೇವಿಗೆ ಅರ್ಪಿಸಿ ಪೂಜೆ ಮಾಡಬೇಕು. ನಂತರ ನವಮಿ ದಿನ ಕಮಲ ಹೂವನ್ನು ಹರಿಯುವ ನೀರಿನಲ್ಲಿ ಬಿಡಿ ಮತ್ತು ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತಿಜೋರಿಯಲ್ಲಿ ಇಡಿ.

ಸಂತಾನ ಭಾಗ್ಯಕ್ಕಾಗಿ

ಪ್ರತಿ ಏಕಾದಶಿಯಂದು ಶ್ರೀ ಕೃಷ್ಣನಿಗೆ 2 ತಾವರೆ ಅರ್ಪಿಸಿದರೆ ಸಂತಾನ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಇದೆ.

Kishor KV