ಮುಂಬೈ ಇನ್ನಾದ್ರೂ ಗೆಲ್ಲುತ್ತಾ? ಪಾಂಡ್ಯಾ ತಲೆಯಲ್ಲಿ ಐಡಿಯಾನೇ ಇಲ್ವಾ?
SRH ಗೆಲುವಿನ ಓಟ ಸುಲಭವೇ?

ಮುಂಬೈ ಇನ್ನಾದ್ರೂ ಗೆಲ್ಲುತ್ತಾ? ಪಾಂಡ್ಯಾ ತಲೆಯಲ್ಲಿ ಐಡಿಯಾನೇ ಇಲ್ವಾ?SRH ಗೆಲುವಿನ ಓಟ ಸುಲಭವೇ?

ಮುಂಬೈ ತಂಡದ ರಿವೇಂಜ್‌ ರೌಂಡ್‌ ಮ್ಯಾಚ್‌ ಇವತ್ತಿನಿಂದ ಆರಂಭ.. ಪಾಯಿಂಟ್‌ ಟೇಬಲ್‌ನಲ್ಲಿ ಬಾಟಮ್‌ 2ನಲ್ಲಿ ಮುಂಬೈ ತಂಡವಿದೆ. ಆಡಿರೋ 7 ಮ್ಯಾಚ್‌ಗಳಲ್ಲಿ 5 ಸೋತಿದ್ದಾರೆ. ನಾಯಕ ಹಾರ್ದಿಕ್‌ ಪಾಂಡ್ಯಾ ಒಂದು ಕಾಲದಲ್ಲಿ ಅತ್ಯುತ್ತಮ ಕ್ಯಾಪ್ಟನ್‌ ಮೆಟೀರಿಯಲ್‌ ಎಂದು ಪರಿಗಣಿಸಲಾಗಿತ್ತು.. ಜಿಟಿಯ ಕ್ಯಾಪ್ಟನ್‌ ಆಗಿ ಮೊದಲ ಸೀಸನ್‌ನಲ್ಲೇ ಐಪಿಎಲ್‌ ಟೈಟಲ್‌ ಗೆದ್ದಿದ್ದರು. ಆದ್ರೆ ಎಂಐಗೆ ಬಂದು ಕ್ಯಾಪ್ಟನ್‌ ಆದ್ಮೇಲೆ ಮೊದಲ ಸೀಸನ್‌ನಲ್ಲಿ ಅಭಿಮಾನಿಗಳಿಂದ ಟ್ರೋಲ್‌ಗೆ ಒಳಗಾಗಿ ಕುಗ್ಗಿದ್ದ ಪಾಂಡ್ಯಾ ಅಲ್ಲಿಂದ ನಂತರ ಚೇತರಿಸಿಕೊಂಡೇ ಇಲ್ಲ.. ಈ ಸೀಸನ್‌ನಲ್ಲಿ ಪಾಂಡ್ಯಾ ತನ್ನ ತಲೆಯಲ್ಲಿ ಹೊಸ ಐಡಿಯಾಗಳೇ ಇಲ್ಲ ಎಂಬಂತೆ ಟೀಂ ಲೀಡ್‌ ಮಾಡ್ತಿದ್ದಾರೆ.. ಬೌಲಿಂಗ್‌ ಚೇಂಜ್‌ನಲ್ಲೂ ಯಾವುದೇ ಹೊಸತನ ಕಾಣ್ತಿಲ್ಲ.. ಎಂಐನ ಬ್ಯಾಟಿಂಗ್‌ ಕೂಡ ಸರಿಯಾಗಿ ಕೆಲಸ ಮಾಡ್ತಿಲ್ಲ..  ಆದ್ರೆ ಎಸ್‌ಆರ್‌ಹೆಚ್‌ ಭರ್ಜರಿ ಫಾರ್ಮ್‌ನಲ್ಲಿದೆ.. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಅತ್ಯುತ್ತಮವಾಗಿ ಆಡ್ತಿದೆ.

5 ಸಲ ಚಾಂಪಿಯನ್ ಆಗಿರೋ ಮುಂಬೈ ಇಂಡಿಯನ್ಸ್ ಟೀಂ ಈ ಸಲ ಆಟನೇ ಬರಲ್ಲ ಅನ್ನೋ ರೇಂಜ್‌ಗೆ ಐಪಿಎಲ್ ಆಡುತ್ತಿದೆ.  ನೀವೇ ನೋಡಿದಂತೆ ಪಾಂಡ್ಯ ಪಡೆ ಅಷ್ಟು ಕೆಟ್ಟದಾಗಿ ಈ ಸೀಸನ್‌ನಲ್ಲಿ ಆಟ ಆಡುತ್ತಿದೆ. ಇಲ್ಲಿ ತನಕ ಮುಂಬೈ 7 ಪಂದ್ಯ ಆಡಿದೆ, ಆದ್ರೆ  ಗೆದ್ದಿರುವುದು ಜಸ್ಟ್ ಎರಡೇ ಎರಡು ಮ್ಯಾಚ್‌ನಲ್ಲಿ ಇನ್ನುಳಿದ 5 ಮ್ಯಾಚ್‌ನಲ್ಲಿ ಹೀನಾಯ ಪ್ರದರ್ಶನ ಕಂಡಿದೆ. ಐಪಿಎಲ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಎಲ್ಲಾದ್ರೂ ಇವತ್ತು ಸನ್ ರೈಸರ್ಸ್ ವಿರುದ್ಧವೂ ಸೋತದ್ದೇ ಆದಲ್ಲಿ ಮುಂಬೈ ಇಂಡಿಯನ್ಸ್ ತಂಡ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ. ಯಾಕಂದ್ರೆ 14 ಪಂದ್ಯದಲ್ಲಿ 7 ಪಂದ್ಯ ಆಡಿ 2 ಪಂದ್ಯ ಗೆದ್ದಿದೆ. ಕೇವಲ ನಾಲ್ಕು ಪಾಯಿಂಟ್ಸ್‌ ಗಳಿಸಿದೆ.. ಈ ಸಲ ಪ್ಲೇ ಆಫ್‌ಗೆ ಹೋಗಬೇಕಂದ್ರೆ 16 ಅಂಕ ಬೇಕೆ ಬೇಕು. ಹೀಗಾಗಿ ಮುಂಬೈ 7ಕ್ಕೆ 7 ಗೆಲ್ಲಲೇ ಬೇಕು. ಒಂದು ಪಂದ್ಯ ಸೋತ್ರು ಕೂಡ ಮುಂಬೈ ಪ್ಲೇ ಆಫ್‌ಗೆ ಹೋಗುವುದು ಕಷ್ಟ. ಅಪ್ಪಿ ತಪ್ಪಿ ಮಳೆಯಿಂದ ಒಂದು ಪಂದ್ಯ ರದ್ದಾದ್ರೂ ಮುಂಬೈ ಪ್ಲೇ ಆಫ್ ಹಾದಿ ಕಷ್ಟ ಆಗುತ್ತೆ.. ಹೀಗಾಗಿ ಇಂದಿನ ಪಂದ್ಯ ಮುಂಬೈಗೆ ವೇರಿ ವೇರಿ ಇಂಪಾರ್ಡೆಂಟ್ ಅಂತನೇ ಹೇಳಬಹುದು. ಹೀಗಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ನೀಡಬೇಕಾದ ಒತ್ತಡ ತಂಡದ ಮೇಲಿದೆ.

ಇದನ್ನೂ ಓದಿ: ಸೋತರೂ RR ಹೊಗಳಿದ ಶ್ರೇಯಸ್! – ಪರಾಗ್‌ ಪಡೆಗೆ ಪ್ಲಸ್‌ ಆಗಿದ್ದೇನು?

ಗಾಯಕ್ಕೆ ತುತ್ತಾಗಿದ್ದ ರೋಹಿತ್ ಶರ್ಮಾ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಭರವಸೆಯ ಆಟಗಾರರಾದ ಕ್ವಿಂಟನ್ ಡಿಕಾಕ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಅನಿವಾರ್ಯತೆ ಇದೆ.  ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲಿಂಗ್ ಸಹ ಬಲಿಷ್ಠವಾಗಿದೆ. ಆದರೆ ಶಿಸ್ತುಬದ್ಧ ದಾಳಿ ನಡೆಸುವ ಅನಿವಾರ್ಯತೆ ಇದೆ. ಜಸ್ಪ್ರೀತ್ ಬುಮ್ರಾ ವಿಕೆಟ್‌ ಪಡೆಯುವಲ್ಲಿ ಹಿಂದೆ ಬಿದ್ದಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಅಶ್ವನಿ ಕುಮಾರ್‌ ವಿಕೆಟ್‌ ಬೇಟೆ ನಡೆಸುತ್ತಿದ್ದಾರೆ. GT ನಾಯಕನಾಗಿ ಕಪ್ ಗೆಲ್ಲಿಸಿಕೊಟ್ಟ ಹಾರ್ದಿಕ್ ಪಾಂಡ್ಯ ಮುಂಬೈ ನಾಯಕನಾದ ಮೇಲೆ ಬೇಕಾಬಿಟ್ಟಿ ನಿರ್ಧಾರ ತೆಗೆದುಕೊಂಡು ತಂಡದ ಸೋಲಿಗೆ ಕಾರಣವಾಗುತ್ತಿದ್ದಾರೆ. ಬೇಕಾಬಿಟ್ಟಿಯಾಗಿ ಪಿಲ್ಡಿಂಡ್‌ರಗಳನ್ನ ನಿಲ್ಲಿಸೋದು, ತಲೆಯಲ್ಲಿ ಬುದ್ಧಿ ಇಲ್ಲದಂತೆ ತೆಗೆದುಕೊಳ್ಳುವ ನಿರ್ಧಾರ ತಡವನ್ನ ಸೋಲಿನ ಕಡೆಗೆ  ಕರೆದುಕೊಂಡು ಹೋಗುತ್ತಿದೆೆ. Vis flow..

 ಗೆದ್ದು ಮುಂಬೈಗೆ ಗುನ್ನಾ ಇಡುತ್ತಾ SRH?

ಇನ್ನೊಂದೆಡೆ, ಸತತ 4 ಗೆಲುವುಗಳೊಂದಿಗೆ ಬೀಗುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ಅತ್ಯಂತ ಆತ್ಮವಿಶ್ವಾಸದಲ್ಲಿದೆ. ಈಗಾಗಲೇ 10 ಅಂಕಗಳನ್ನು ಗಳಿಸಿರುವ ಪ್ಯಾಟ್ ಕಮಿನ್ಸ್ ಪಡೆ, ಇಂದಿನ ಪಂದ್ಯ ಗೆದ್ದು ಪ್ಲೇಆಫ್ ಹಂತಕ್ಕೆ ಮತ್ತಷ್ಟು ಹತ್ತಿರವಾಗುವ ಗುರಿ ಹೊಂದಿದೆ. ಸ್ಥಿರ ಬ್ಯಾಟಿಂಗ್ ಮತ್ತು ಚಾಣಾಕ್ಷ ಬೌಲಿಂಗ್ ಹೈದರಾಬಾದ್ ತಂಡದ ಶಕ್ತಿಯಾಗಿದೆ. ಅಭಿಷೇಕ್‌ ಆಕರ್ಷಣೆ ಸನ್‌ರೈಸರ್ಸ್‌ ತಂಡದ ಟಾಪ್ ಆರ್ಡರ್‌ಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಟ್ರಾವಿಸ್ ಹೆಡ್‌ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇನ್ನು ವೇಗದ ಬೌಲರ್‌ಗಳಾದ ಇಶಾನ್‌ ಮಲಿಂಗ್, ಸಕೀಬ್ ಹುಸೇನ್‌, ಪ್ಯಾಟ್ ಕಮಿನ್ಸ್‌, ಹರ್ಷ್ ದುಬೆ, ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್‌ ಬೇಟೆ ನಡೆಸಬೇಕಿದೆ. ಅಂದಾಗ ಅಂಕಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ನನಸಾಗುತ್ತದೆ.

ವಾಂಖೆಡೆ ಪಿಚ್ ಯಾರಿಗೆ ಲಾಭ? 

ಸ್ಪಿನ್ನರ್ ಗಳ ಸ್ವರ್ಗವಾಗಿರುವ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣ ಚುಟುಕು ಕ್ರಿಕೆಟ್ ವಿಚಾರಕ್ಕೆ ಬಂದಾಗ ಮಾತ್ರ ಪಕ್ಕಾ ಬ್ಯಾಟಿಂಗ್ ಸ್ನೇಹಿಯಾಗಿ ಬದಲಾಗುತ್ತದೆ. ಪಿಚ್ ನಲ್ಲಿ ಚೆಂಡು ಚೆನ್ನಾಗಿ ಬ್ಯಾಟಿಗೆ ಬರುವುದರಿಂದ ಬ್ಯಾಟರ್ ಗಳು ಶಾಟ್ ಗಳನ್ನು ಬಹಳ ಚೆನ್ನಾಗಿ ಹೊಡೆಯಲು ಅನುಕೂಲವಾಗುತ್ತದೆ. ಇನ್ನು ಸಣ್ಣ ಬೌಂಡರಿ ಇರುವುದರಿಂದ ಸಿಕ್ಸರ್ ಗಳನ್ನು ಹೊಡೆಯುವುದು ಸುಲಭ. ಟಾಸ್ ಗೆದ್ದವರು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚು.

ಐಪಿಎಲ್ ಇತಿಹಾಸದಲ್ಲಿ ಮುಂಬೈ ಮತ್ತು ಎಸ್‌ಆರ್‌ಹೆಚ್ ತಂಡಗಳು ಒಟ್ಟು 25 ಬಾರಿ ಪರಸ್ಪರ ಸೆಣಸಾಡಿವೆ. ಇದರಲ್ಲಿ ಮುಂಬೈ 15 ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸಿದ್ದರೆ, ಹೈದರಾಬಾದ್ 10 ಪಂದ್ಯಗಳಲ್ಲಿ ಜಯ ಗಳಿಸಿದೆ.    ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಮುಂಬೈ ಪಾಲಿಗೆ  ಮಾಡು ಇಲ್ಲವೇ ಮಡಿ ಪಂದ್ಯವಾದ್ರೆ, ಹೈದರಾಬಾದ್‌ಗೆ ತನ್ನ ಗೆಲುವಿನ ಓಟವನ್ನು ಮುಂದುವರಿಸುವ ಅವಕಾಶವಾಗಿದೆ.

Kishor KV