ಮ್ಯಾಂಗೋ ಪಚ್ಚ ಸಿನಿಮಾ ರಿಲೀಸ್‌ಗೆ ಡೇಟ್ ಫಿಕ್ಸ್ – ಟಾಕ್ಸಿಕ್ ಜಾಗ ತುಂಬಲು ಕಿಚ್ಚನ ಅಳಿಯ ಸಿನಿಮಾ ರಿಲೀಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದೂಡಲಾಗಿದೆ. ಜೂನ್ ನಾಲ್ಕರಂದು ರಿಲೀಸ್ ಆಗಬೇಕಿದ್ದ ಸಿನಿಮಾವನ್ನು ಮತ್ತೆ ಮುಂದೂಡಲಾಗಿದೆ. ಇದೀಗ ಟಾಕ್ಸಿಕ್ ರಿಲೀಸ್ ಆಗಬೇಕಿದ್ದ ದಿನಾಂಕದಲ್ಲಿ ಮತ್ತೊಂದು ಸಿನಿಮಾ ರಿಲೀಸ್ ಆಗಲಿದೆ.
ಇದನ್ನೂ ಓದಿ: ಜೂನ್ 4 ಕ್ಕೆ ರಿಲೀಸ್ ಆಗಲ್ಲ ಟಾಕ್ಸಿಕ್ – ಫ್ಯಾನ್ಸ್‌ಗೆ ಬ್ಯಾಡ್ ನ್ಯೂಸ್ ಕೊಟ್ಟ ಯಶ್
ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜೂನ್ ನಾಲ್ಕರಂದು ರಿಲೀಸ್ ಆಗಬೇಕಿತ್ತು. ಇದೀಗ ಸಿನಿಮಾ ರಿಲೀಸ್ ಮುಂದೂಡಲಾಗಿದೆ. ಇದರ ನಡುವೆ ಕಿಚ್ಚ ಸುದೀಪ್ ಒಂದು ಘೋಷಣೆ ಮಾಡಿದ್ದಾರೆ. ಟಾಕ್ಸಿಕ್ ಜಾಗ ತುಂಬಲು ಕಿಚ್ಚ ಸುದೀಪ್ ಅಳಿಯನ ಸಿನಿಮಾ ರಿಲೀಸ್ ಆಗಲಿದೆ. ಸಂಚಿತ್ ಸಂಜೀವ್ ಅವರ ಚೊಚ್ಚಲ ಚಿತ್ರ ಮ್ಯಾಂಗೋ ಪಚ್ಚ ಜೂನ್ 5 ರಂದು ತೆರೆಗೆ ಬರಲಿದೆ. ಟಾಕ್ಸಿಕ್ ಚಿತ್ರದ ಬಿಡುಗಡೆ ವಿಳಂಬಗೊಂಡ ಹಿನ್ನೆಲೆಯಲ್ಲಿ ಈ ದಿನಾಂಕವನ್ನು ಫಿಕ್ಸ್ ಮಾಡಲಾಗಿದೆ.
ಮೈಸೂರಿನಲ್ಲಿ 2001-2011ರ ಘಟನೆಗಳನ್ನು ಆಧರಿಸಿ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಸಿನಿಮಾದ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ. ಟ್ರೇಲರ್ ಮೇ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಮ್ಯಾಂಗೋ ಪಚ್ಚ ಸಿನಿಮಾದ ಹೀರೋ. ಸುದೀಪ್ ಟ್ವೀಟ್ ಮಾಡಿ ರಿಲೀಸ್ ದಿನಾಂಕ ಘೋಷಣೆ ಮಾಡಿದ್ದಾರೆ. ‘ಮ್ಯಾಂಗೋ ಪಚ್ಚ ಸಿನಿಮಾ ಈ ವರ್ಷದ ಸಂಕ್ರಾಂತಿಗೆ ಅಂದರೆ ಜನವರಿ 15ಕ್ಕೆ ಅದ್ದೂರಿಯಾಗಿ ತೆರೆಗೆ ಬರಲು ಸಜ್ಜಾಗಿತ್ತು. ಆದರೆ, ಇದನ್ನು ತಂಡ ಮುಂದೂಡಿಕೊಂಡಿತ್ತು. ಈ ಚಿತ್ರಕ್ಕೆ ಕಾಜಲ್ ಕುಂದರ್ ನಾಯಕಿ. ಮಯೂರ್ ಪಟೇಲ್, ಭಾವನಾ, ಹರಿಣಿ ಶ್ರೀಕಾಂತ್, ಹಂಸ, ವಿಜಯ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್, ಪ್ರಶಾಂತ್ ಹಿರೇಮಠ್, ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ನೋಡಿರಿ

