ಹಸೆಮಣೆ ಏರಬೇಕಿದ್ದ ವಧು ಬಾಳಲ್ಲಿ ವಿಧಿಯಾಟ! – ಬ್ಯೂಟಿ ಪಾರ್ಲರ್ಗೆ ಹೊರಟ ಯುವತಿ ಅಪಘಾತಕ್ಕೆ ಬಲಿ!

ಆಕೆ ಮದುವೆಯಾಗಲು ತಯಾರಾಗಿ ಹೊಸ ಜೀವನದ ಕನಸು ಕಂಡಿದ್ದಳು. ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಳು. ಆದ್ರೆ ವಿಧಿಯ ಆಟವೇ ಬೇರೆಯಿತ್ತು. ಹಸೆಮಣೆಗೆ ಏರಲು ಹೊರಟ್ಟಿದ್ದವಳು ಈಗ ಮಸಣ ಸೇರಿದ್ದಾಳೆ. ಬ್ಯೂಟಿ ಪಾರ್ಲರ್ಗೆ ಹೋಗಿದ್ದವಳು ಈಗ ಶವವಾಗಿ ಬಂದಿದ್ದಾಳೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಮತದಾನದ ವೇಳೆ ಹಿಂಸಾಚಾರ! – ಬಿಜೆಪಿ ಕಾರ್ಯಕರ್ತನ ಮೇಲೆ ದಾಳಿ, ಟಿಎಂಸಿಯಿಂದ ಬೂತ್ ಧ್ವಂಸ
ಈ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಬರಿಯಾರ್ಪುರದ ಗೌರ್ ಕೋಥಿ ಗ್ರಾಮದಲ್ಲಿ ನಡೆದಿದೆ. ರಚನಾ (22) ಮೃತ ದುರ್ದೈವಿ.
ಗೌರ್ ಕೋಥಿ ಗ್ರಾಮದ ರಚನಾ (22) ವಿವಾಹ ನಿಶ್ಚಯವಾಗಿತ್ತು. ನಿನ್ನೆ ಸಂಜೆ ಆಕೆಯ ಮದುವೆ ನಡೆಯಬೇಕಿತ್ತು. ಹೀಗಾಗಿ ರಚನಾ ಮದುವೆಗೆ ರೆಡಿಯಾಗಲು ತನ್ನ ಕಿರಿಯ ಸಹೋದರನೊಂದಿಗೆ ಬೈಕ್ನಲ್ಲಿ ಹತ್ತಿರದ ಬ್ಯೂಟಿ ಪಾರ್ಲರ್ಗೆ ಹೊರಟಿದ್ದರು. ಆದ್ರೆ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ, ಇದೇ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ಟ್ರಕ್ ರಚನಾ ಮೇಲೆ ಹರಿದಿದೆ. ಅಪಘಾತದ ತೀವ್ರತೆಗೆ ರಚನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಬಂದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಇನ್ನು ಮದುವೆಗೆ ತಯಾರಾಗಿದ್ದ ಮಗಳು ತಂದೆ ಮತ್ತು ಕುಟುಂಬಸ್ಥರು ಈ ಸುದ್ದಿಯನ್ನು ಕೇಳಿ ದಿಗ್ಭ್ರಾಂತರಾಗಿದ್ದಾರೆ. ವರನ ಕಡೆಯವರು ಮೆರವಣಿಗೆಯೊಂದಿಗೆ ಬರಬೇಕಿದ್ದ ಸಮಯದಲ್ಲಿ, ಮಗಳ ಶವಯಾತ್ರೆ ನಡೆಸಬೇಕಾದ ಅನಿವಾರ್ಯತೆ ಆ ತಂದೆಗೆ ಎದುರಾಗಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಟ್ರೇಲರ್ ಅನ್ನು ವಶಪಡಿಸಿಕೊಂಡಿದ್ದು, ಚಾಲಕನನ್ನು ಬಂಧಿಸಿದ್ದಾರೆ. ಟ್ರೇಲರ್ ಅಡಿಯಲ್ಲಿ ಸಿಲುಕಿ ವಧು ಸಾವನ್ನಪ್ಪಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ದೀಪಕ್ ಸಿಂಗ್ ತಿಳಿಸಿದ್ದಾರೆ.
ಸ್ಥಳೀಯ ಪ್ರತಿನಿಧಿ ರಾಜೇಶ್ ರಾಜ್ಭರ್ ಈ ಘಟನೆಯನ್ನು ಅತ್ಯಂತ ದುರಂತ ಎಂದು ಬಣ್ಣಿಸಿದ್ದಾರೆ. ಮದುವೆಯ ಸಿದ್ಧತೆಗಳಿಗಾಗಿ ಅದ್ದೂರಿಯಾಗಿ ಸಿಂಗಾರಗೊಂಡಿದ್ದ ಮನೆ, ಈಗ ಶೋಕಸಾಗರದಲ್ಲಿ ಮುಳುಗಿದೆ.

ನೋಡಿರಿ

