RR ಕ್ಯಾಪ್ಟನ್ ಧಮ್ ಮಾರೋ ಧಮ್ – ಲೈವ್ ಪಂದ್ಯದಲ್ಲಿ ಪರಾಗ್ ವೇಪಿಂಗ್..!

ಐಪಿಎಲ್ ಅಂದ್ರೆ ಚಿನ್ನದ ಮೊಟ್ಟೆ ಇಡೋ ಕೋಳಿ, ಆದ್ರೆ ಇಲ್ಲಿ ಬೇಕಾಬಿಟ್ಟಿ ರೂಲ್ಸ್‌ನ ಬ್ರೇಕ್ ಮಾಡೋ ಹಾಗಿಲ್ಲ. ಆಟಗಾರರು ಚಿಕ್ಕಚಿಕ್ಕ ತಪ್ಪುಗಳಿಗೂ ಇಲ್ಲಿ ದೊಡ್ಡ ಬೆಲೆ ತರಬೇಕಾಗುತ್ತೆ.. ನಾವು ಈ ಹಿಂದೆ ಕೂಡ ಸಾಕಷ್ಟು ಆಟಗಾರರು ತಪ್ಪು ಮಾಡಿ ಶಿಕ್ಷೆ ಅನುಭವಿಸಿರುವುದನ್ನ ನೋಡಿದ್ದೇವೆ. ಈ ಸೀಸನ್‌ನಲ್ಲಿ ಐಪಿಎಲ್‌ನಲ್ಲಿ ಆರ್‌ಆರ್‌ನ ನಾಯಕ ರಿಯಾನ್ ಪರಾಗ್ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಮ್ಯಾಚ್ ನಡಿಯೋ ಟೈಂನಲ್ಲಿ ಧಮ್ ಮಾರೋ ಧಮ್ ಅಂತ ಸಿಗರೇಟ್ ಸೈದಿದ್ದಾರೆ. ಅದು ಭಾರತದಲ್ಲಿ ನಿಷೇಧವಾಗಿರೋ ಈ ಸಿಗರೇಟ್. ಹಾಗಿದ್ರೆ ಆಟದ ನಡುವೆ ಈ ಸಿಗರೇಟ್ ಸೈದ ರಿಯಾನ್ ಪರಾಗ್‌ಗೆ ಏನ್ ಶಿಕ್ಷೆ? ಐಪಿಎಲ್‌ನಿಂದ ಬ್ಯಾನ್ ಆಗ್ತಾರಾ? ಅರೆಸ್ಟ್ ಆಗ್ತಾರಾ? ರೂಲ್ಸ್ ಏನ್ ಹೇಳುತ್ತೆ ಅನ್ನೋದ್ದನ್ನ ನೋಡೋಣ.
ನಿನ್ನೆ ಪಂಜಾಬ್ ವಿರುದ್ದ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು ದಾಖಲಿಸಿ. ಪಂಜಾಬ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಖುಷಿಯಲ್ಲಿ ಆರ್‌ಆರ್ ಇತ್ತು. ಆದ್ರೆ ಇದರ ನಡುವೆಯೇ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಪರಾಗ್ ‘ವೇಪಿಂಗ್’ ಅಂದ್ರೆ ಈ ಸಿಗರೇಟ್ ಸೇದುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಬೆನ್ನಲ್ಲೇ ಐಪಿಎಲ್ ನಿಯಮಗಳ ಬಗ್ಗೆ ಪ್ರಶ್ನೆಗಳೆದ್ದಿವೆ. ಪರಾಗ್ ಬಂಧನ ಭೀತಿ ಎದುರಾಗಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಿಯಾನ್ ಪರಾಗ್ 16 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಅವರು ಪೆವಿಲಿಯನ್‌ಗೆ ಮರಳಿದ ನಂತರ, ಎರಡನೇ ಇನಿಂಗ್ಸ್‌ನ 16ನೇ ಓವರ್ ನಡೆಯುತ್ತಿದ್ದಾಗ ಬ್ರಾಡ್‌ಕಾಸ್ಟ್ ಕ್ಯಾಮೆರಾ ಡ್ರೆಸ್ಸಿಂಗ್ ರೂಮ್‌ನತ್ತ ತಿರುಗಿತು. ಈ ವೇಳೆ ಪರಾಗ್ ಎಲೆಕ್ಟ್ರಾನಿಕ್ ಸಿಗರೇಟ್ ಅಥವಾ ವೇಪ್ ಬಳಸುತ್ತಿರುವುದು ಕಂಡು ಬಂದಿದೆ. ಆ ಟೈಂನಲ್ಲಿ ಈ ಬಗ್ಗೆ ಯಾರು ಮಾತನಾಡಿಲ್ಲ. ಆದ್ರ ಪಂದ್ಯ ಮುಗಿದ ಮೇಲೆ ಈ ವಿಡಿಯೋ ವೈರಲ್ ಆಗಿದ್ದು, ಪರಾಗ್ ಸಂಕಷ್ಟ ಎದುರಾಗಿದೆ..
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ಗೆಲುವಿನ ಓಟಕ್ಕೆ ಬ್ರೇಕ್ – ಆರ್‌ಆರ್ ವಿರುದ್ಧ ಮೊದಲ ಸೋಲುಂಡ ಶ್ರೇಯಸ್ ಅಯ್ಯರ್ ಪಡೆ
ರಿಯಾನ್ ಪರಾಗ್ ಈ ಮಾಡಿದ್ದು ದೊಡ್ಡ ತಪ್ಪು.. ಯಾಕಂದ್ರೆ ಆಟ ನಡೆಯೋ ಟೈಂನಲ್ಲಿ ಈ ಸಿಗರೇಟ್ ಸೈದ ಪರಾಗ್ ಕಾನೂನು ಮತ್ತು ಕ್ರೀಡಾ ನಿಯಮಗಳನ್ನ ಬ್ರೇಕ್ ಮಾಡಿದ್ದಾರೆ. ಭಾರತದಲ್ಲಿ ಇ-ಸಿಗರೇಟ್ ಬಳಕೆಯನ್ನು ನಿಷೇಧಿಸಲಾಗಿದೆ. ಅಲ್ಲದೆ ಇದು ಬಿಸಿಸಿಐನ ಶಿಷ್ಟಾಚಾರದ ಉಲ್ಲಂಘನೆ ಕೂಡ ಹೌದು. ಹಾಗಿದ್ರೆ ರಿಯಾನ್ ಪರಾಗ್ ಉಲ್ಲಂಘಿಸಿರುವ ನಿಯಮಗಳಾವುವು ಎಂದು ನೋಡುವುದಾದರೆ…
ಭಾರತದಲ್ಲಿ 2019 ರಿಂದಲೇ ಇ-ಸಿಗರೇಟ್ ಮತ್ತು ವೇಪ್‌ಗಳ ಬಳಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕ್ರೀಡಾಂಗಣದ ಆವರಣದಲ್ಲಿ ಮತ್ತು ವಿಶೇಷವಾಗಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಧೂಮಪಾನ ಮಾಡುವುದು ಕಟ್ಟುನಿಟ್ಟಾದ ಶಿಸ್ತು ಉಲ್ಲಂಘನೆಯಾಗಿದೆ. ಲಕ್ಷಾಂತರ ಯುವ ಅಭಿಮಾನಿಗಳು ವೀಕ್ಷಿಸುವ ಐಪಿಎಲ್‌ನಲ್ಲಿ ತಂಡದ ನಾಯಕನೇ ಇಂತಹ ಕೆಲಸ ಮಾಡುವುದು ಬೇಜವಾಬ್ದಾರಿತನ. ಐಪಿಎಲ್ ವೇಳೆ ಆಟಗಾರರು ತಪ್ಪು ಸಂದೇಶ ನೀಡುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಬಾರದೆಂಬ ನಿಯಮವಿದೆ.
ಈಗಾಗಲೇ ಕಳಪೆ ಫಾರ್ಮ್‌ನಿಂದಾಗಿ ಟೀಕೆಗೆ ಗುರಿಯಾಗಿರುವ ರಿಯಾನ್ ಪರಾಗ್ ಅವರಿಗೆ ಈ ಘಟನೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಐಪಿಎಲ್ ಆಡಳಿತ ಮಂಡಳಿ ಅಥವಾ ಬಿಸಿಸಿಐ ಈ ಬಗ್ಗೆ ಅಧಿಕೃತ ತನಿಖೆ ನಡೆಸಿ ದಂಡ ಅಥವಾ ಪಂದ್ಯದಿಂದ ನಿಷೇಧ ಹೇರುವ ಸಾಧ್ಯತೆಯಿದೆ.ಸಂಜು ಸ್ಯಾಮ್ಸನ್ ಬದಲಿಗೆ ನಾಯಕತ್ವ ವಹಿಸಿಕೊಂಡಿದ್ದ ಪರಾಗ್, ಈ ಸೀಸನ್‌ನಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದಾರೆ. ತಂಡ ಪಂದ್ಯವನ್ನು ಗೆದ್ದಿದ್ದರೂ, ನಾಯಕನ ಈ ವರ್ತನೆಯು ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿ ಪರಿಣಮಿಸಿದೆ. ಐಪಿಎಲ್ ನೀತಿ ಸಂಹಿತೆ ಮತ್ತು ಬಿಸಿಸಿಐನ ಆರೋಗ್ಯ ಮತ್ತು ಸುರಕ್ಷತಾ ಶಿಷ್ಟಾಚಾರಗಳ ಅಡಿಯಲ್ಲಿ ಪರಾಗ್ ಅವರ ಮೇಲೆ ಈ ಕೆಳಗಿನ ಕ್ರಮಗಳನ್ನು ಜರುಗಿಸಬಹುದು:
IPL ನಿಂದ ರಿಯಾನ್ BAN ?
ಪಂದ್ಯದ ಶುಲ್ಕದಲ್ಲಿ ಶೇಕಡಾವಾರು ಕಡಿತ ಅಥವಾ ಭಾರಿ ಮೊತ್ತದ ದಂಡ ವಿಧಿಸಬಹುದು. ಉದಾಹರಣೆಗೆ, ಈ ಹಿಂದಿನ ಕೆಲವು ಶಿಸ್ತು ಉಲ್ಲಂಘನೆಗಳಿಗೆ ಆಟಗಾರರಿಗೆ ಲಕ್ಷಾಂತರ ರೂಪಾಯಿ ದಂಡ ವಿಧಿಸಲಾಗಿದೆ. ಇದು ಗಂಭೀರ ಸ್ವರೂಪದ ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಲ್ಪಟ್ಟರೆ, ಪರಾಗ್ ಅವರನ್ನು 1 ರಿಂದ 2 ಪಂದ್ಯಗಳ ಕಾಲ ನಿಷೇಧಿಸುವ ಸಾಧ್ಯತೆಯೂ ಇದೆ. ಮೊದಲ ಬಾರಿಯ ಅಪರಾಧವೆಂದು ಪರಿಗಣಿಸಿ ಬಿಸಿಸಿಐ ಅವರಿಗೆ ಅಧಿಕೃತ ಎಚ್ಚರಿಕೆ ಪತ್ರವನ್ನು ನೀಡಬಹುದು. ತಂಡದ ನಾಯಕನಾಗಿ ಇಂತಹ ವರ್ತನೆ ತೋರಿರುವುದರಿಂದ, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ತನ್ನ ಬ್ರ್ಯಾಂಡ್ ಮೌಲ್ಯ ಕಾಪಾಡಲು ಆಂತರಿಕವಾಗಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬಹುದು.
ಭಾರತದಲ್ಲಿ ಇ-ಸಿಗರೇಟ್ ಬ್ಯಾನ್, ಶಿಕ್ಷೆ ಏನು
ಮೊದಲ ಬಾರಿಯ ಅಪರಾಧಕ್ಕೆ 1 ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆಯಿದೆ. ಕಾನೂನು ಉಲ್ಲಂಘನೆಗಾಗಿ ₹1 ಲಕ್ಷದವರೆಗೆ ದಂಡ ವಿಧಿಸಬಹುದು. ಮರುಕಳಿಸಿದರೆ: ಎರಡನೇ ಬಾರಿ ಅಥವಾ ಪದೇ ಪದೇ ಇಂತಹ ಕೃತ್ಯವೆಸಗಿದರೆ 3 ವರ್ಷಗಳವರೆಗೆ ಜೈಲು ಮತ್ತು ₹5 ಲಕ್ಷದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ನೋಡಿರಿ

