ಬೆನ್ನ ಮೇಲೆ ಬಾಲಕನ ಶವ ಹೊತ್ತು ತಂದು ರಕ್ಷಣಾ ಸಿಬ್ಬಂದಿಗೆ ಒಪ್ಪಿಸಿದ ಮೊಸಳೆ – ಅಬ್ಬಬ್ಬಾ.. ಇಲ್ಲಿದೆ ಅಚ್ಚರಿಯ ವಿಡಿಯೋ!

ಬೆನ್ನ ಮೇಲೆ ಬಾಲಕನ ಶವ ಹೊತ್ತು ತಂದು ರಕ್ಷಣಾ ಸಿಬ್ಬಂದಿಗೆ ಒಪ್ಪಿಸಿದ ಮೊಸಳೆ – ಅಬ್ಬಬ್ಬಾ.. ಇಲ್ಲಿದೆ ಅಚ್ಚರಿಯ ವಿಡಿಯೋ!

ಮೊಸಳೆ ಅಂದ್ರೆ ಮೈಲು ದೂರ ಓಡಿ ಹೋಗೋರೇ ಜಾಸ್ತಿ. ಅದ್ರಲ್ಲೂ ಮೊಸಳೆ ನಿಮ್ಮ ಕಡೆಯೇ ಬರ್ತಿದೆ ಅಂದ್ರೆ ಕೇಳ್ಬೇಕಾ. ಹಾರ್ಟ್ ಬೀಟ್ ಹೆಚ್ಚಾಗಿ ಎದ್ನೋ ಬಿದ್ನೋ ಅಂತಾ ಓಡಿ ಹೋಗ್ತೀರಿ. ಆದ್ರೆ ಇಲ್ಲಿ ನಡೆದಿರೋ ಘಟನೆ ಕೇಳಿದ್ರೆ ಇದೆಂಥಾ ಪವಾಡನಪ್ಪ. ಈ ಕಾಲದಲ್ಲೂ ಹಿಂಗೆಲ್ಲಾ ನಡೆಯುತ್ತಾ ಅಂತಾ ಶಾಕ್ ಆಗ್ತೀರ.

ಇಂಡೋನೇಷಿಯಾದಲ್ಲಿ ನಡೆದಿರೋ ಈ ಘಟನೆ ಅಚ್ಚರಿಯ ಜೊತೆಗೆ ಕುತೂಹಲವನ್ನೂ ಮೂಡಿಸಿದೆ. ವಿಷಯ ಏನಂದ್ರೆ ನಾಲ್ಕು ವರ್ಷದ ಬಾಲಕನೊಬ್ಬ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ. ಹೀಗಾಗಿ ರಕ್ಷಣಾ ಪಡೆಯ ಸಿಬ್ಬಂದಿ ನದಿಯಲ್ಲಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ರು. ಈ ವೇಳೆ ಸಿಬ್ಬಂದಿಯೇ ಒಂದು ಕ್ಷಣ ದಂಗಾಗುವಂಥ ಘಟನೆ ನಡೆದಿದೆ. ನದಿಯಲ್ಲಿದ್ದ ಬೃಹತ್ ಗಾತ್ರದ ಮೊಸಳೆಯೊಂದು ಬಾಲಕನ ಮೃತದೇಹವನ್ನ ತನ್ನ ಬೆನ್ನ ಮೇಲೆ ಹೊತ್ತು ಸಿಬ್ಬಂದಿ ಇದ್ದ ದೋಣಿ ಬಳಿಯೇ ಬಂದಿದೆ.

ಇದನ್ನೂ ಓದಿ : ಸ್ಕೂಟರ್ ಸಮೇತ ಸವಾರರನ್ನ ಎಳೆದೊಯ್ದ ಕಾರು – ವಿದ್ಯಾರ್ಥಿಗಳ ಎಣ್ಣೆ ‘ಮತ್ತು’.. ಎಂಥಾ ಎಡವಟ್ಟು..!?

ಭಾರತೀಯ ಅರಣ್ಯಾಧಿಕಾರಿ ಸುಸಂತ ನಂದ ಶೇರ್ ಮಾಡಿಯೋ ವಿಡಿಯೋವೇ ಅಚ್ಚರಿಗೆ ಕಾರಣವಾಗಿದೆ. ವಿಡಿಯೋದಲ್ಲಿ ಇರೋದೇನಂದ್ರೆ ನದಿಯಲ್ಲಿ ಬಾಲಕನ ಶವಕ್ಕಾಗಿ ಹುಡುಕಾಡುವಾಗ ಮೊಸಳೆಯೊಂದು ಈಜುತ್ತಾ ರಕ್ಷಣಾ ತಂಡವಿರುವ ದೋಣಿಯತ್ತ ಬಂದಿದೆ. ಮೊಸಳೆ ಮೇಲೆ ಮಗುವಿನ ಮೃತದೇಹವನ್ನ ಹೊತ್ತಿರುವಂತೆ ಕಾಣುತ್ತದೆ. ಈ ವೇಳೆ ದೋಣಿಯಲ್ಲಿದ್ದ ಒಬ್ಬ ವ್ಯಕ್ತಿ ಮಗುವಿನ ಮೃತದೇಹವನ್ನ ಸುರಕ್ಷಿತವಾಗಿ ದೋಣಿಯೊಳಗೆ ಎಳೆದುಕೊಳ್ಳುತ್ತಾನೆ.

ವಿಡಿಯೋ ಪೋಸ್ಟ್ ಮಾಡಿರುವ ಅಧಿಕಾರಿ ‘ವಿಚಿತ್ರ ಅನ್ನಿಸಿದ್ರೂ ಸತ್ಯ. ದೊಡ್ಡ ಮೊಸಳೆಯು ನೀರಲ್ಲಿ ಮುಳುಗಿದ್ದ ಮಗುವಿನ ಮೃತದೇಹವನ್ನ ಅದರ ಬೆನ್ನ ಮೇಲೆ ಹೊತ್ತು ತಂದು ಹಸ್ತಾಂತರಿಸಿದೆ. ಮೊಸಳೆಯಿಂದಲೇ ತುಂಬಿರುವ ನದಿಯಲ್ಲಿ ಮಗುವಿನ ಮೃತದೇಹ ಕಂಡುಹಿಡಿಯಲು ಕುಟುಂಬಸ್ಥರು ವಿಫಲವಾಗಿದ್ದರು’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಸ್ಥಳೀಯ ಮಾಧ್ಯಮವೊಂದರ ವರದಿ ಪ್ರಕಾರ 4 ವರ್ಷದ ಮೊಹಮ್ಮದ್ ಜಿಯಾದ್ ಎಂಬ ಬಾಲಕ ಜನವರಿ 22ರಂದು ಇಂಡೋನೇಷ್ಯಾದ ಪೂರ್ವ ಕಾಲಿಮಂಟನ್ ಬಳಿಯ ನದಿತೀರದಲ್ಲಿ ನಾಪತ್ತೆಯಾಗಿದ್ದ.  ಬೋರ್ನಿಯಾದ ಮಹಕಾಮ್ ನದಿಯಲ್ಲಿ ಆತ ಮುಳುಗಿರೋದು ಗೊತ್ತಾಗಿತ್ತು. ಬಳಿಕ ಶವ ಹೊರತೆಗೆಯಲು ತೆರಳಿದ್ದಾಗ ಈ ಘಟನೆ ನಡೆದಿದೆ. ವಿಷಯ ಅಂದ್ರೆ ಬಾಲಕನ ಮೃಹದೇಹದ ಮೇಲೆ ಕಚ್ಚಿದ ಗುರುತುಗಳಿಲ್ಲ. ಹಾಗೇ ಬಾಲಕ ನೀರಿನಲ್ಲಿ ಮುಳುಗಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಮೊಸಳೆ ವರ್ತನೆಗೆ ನೆಟ್ಟಿಗರು ಬೆರಗಾಗಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

 

suddiyaana