ಅರಿಶಿಣಪುಡಿ, ಮಸಾಲೆ ಪುಡಿಗಳಲ್ಲೂ ಸೀಸದ ಅಂಶ ಪತ್ತೆ! – ಸರ್ಕಾರದಿಂದಲೇ ಟೆಸ್ಟ್‌ಗೆ ಆದೇಶ

ಅರಿಶಿಣಪುಡಿ, ಮಸಾಲೆ ಪುಡಿಗಳಲ್ಲೂ ಸೀಸದ ಅಂಶ ಪತ್ತೆ! – ಸರ್ಕಾರದಿಂದಲೇ ಟೆಸ್ಟ್‌ಗೆ ಆದೇಶ

ಈಗ ಏನಿದ್ದರೂ ಪೈಸಾ ಕಮಾನಾ, ಕಲಬೆರಕೆ ಜಮಾನಾ ಅನ್ನುವಂತಾಗಿದೆ. ಹಿಂದೆ ಕಡಿಮೆಯಾಗಿ ಬಳಸುತ್ತಿದ್ದ ಪದಾರ್ಥಗಳಲ್ಲಷ್ಟೇ ಅಪರೂಪಕ್ಕೆ ಎಂಬುವಂತೆ ಕಲಬೆರಕೆಯಾಗುತ್ತಿದ್ದವು , ಆದ್ರೀಗ ನಾವು ನಿತ್ಯ ಸೇವಿಸುವ/ಬಳಸುವ ಹಲವಾರು ಪದಾರ್ಥಗಳಲ್ಲಿ ಕಲಬೆರಕೆ ಎಂಬುದು ಸಾಮಾನ್ಯವಾದಂತಾಗಿದೆ.  ಇದೀಗ ಅರಿಶಿಣ ಪುಡಿಯಲ್ಲೂ ಕಲಬೆರಕೆ ಮಾಡಲಾಗಿದೆ ಎಂಬ ದೂರು ಕೇಳಿಬರುತ್ತಿದೆ.

ಇದನ್ನೂ ಓದಿ: ಮಚ್ಚು ಆಯ್ತು.. ಈಗ ಪೆಟ್ರೋಲ್‌ ಬಾಂಬ್‌ ರೀಲ್ಸ್!‌ – ರಸ್ತೆಯಲ್ಲಿ ರಜತ್‌ ಸ್ಟಂಟ್‌.. ಸಾರ್ವಜನಿಕರಿಂದ ಆಕ್ರೋಶ!

ಅಡುಗೆ ಮನೆಯಲ್ಲಿ ಅರಿಶಿಣ ಪುಡಿ ಅತ್ಯವಶ್ಯಕ. ಆದ್ರೆ ಈಗ ರಾಜ್ಯದ ಜನರು ಆತಂಕ ಪಡುವಂತಹ ವಿಚಾರ ಬಯಲಿಗೆ ಬಂದಿದೆ. ಅರಿಶಿಣಪುಡಿಯಲ್ಲಿ ಕಲಬೆರಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅರಿಶಿಣ ಪುಡಿ ಮತ್ತು ಬೇರುಗಳಲ್ಲಿ ಸೀಸದ ಅಂಶ ಕಲಬೆರಕೆ ಮಾಡುತ್ತಿದ್ದಾರೆ ಎಂದು ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಗೆ ದೂರು ದಾಖಲಾಗಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಮಸಾಲೆ ಪೌಡರ್, ಅರಿಶಿಣ ಪುಡಿ ಟೆಸ್ಟ್‌ಗೆ ಸರ್ಕಾರವೇ ಆದೇಶಿಸಿದೆ.

ಹೌದು, ಅರಿಶಿಣಪುಡಿ ಮತ್ತು ಮಸಾಲೆ ಪುಡಿ ಗಟ್ಟಿ ಬರಲಿ ಅಂತಾ ಕಲಬೆರಕೆ ಮಾಡುತ್ತಿದ್ದಾರೆ. ಅರಿಶಿಣ ಪುಡಿಗೆ ಯಾವುದೋ ಚೆಕ್ಕೆಯ ಪುಡಿಗಳನ್ನ ಮಿಕ್ಸ್ ಮಾಡುತ್ತಿದ್ದಾರೆ. ಈ ಕಲಬೆರಕೆಯಿಂದ ಕ್ಯಾನ್ಸರ್‌ಗೆ ಕಾರಣ ಆಗೋದು ಅಲ್ಲದೇ ಹಲವು ಹಾನಿಕಾರಕ ಅಂಶಗಳಿಗೆ ಕಾರಣ ಆಗಲಿದೆ. ಜೊತೆಗೆ ಖಾಯಿಲೆಗಳಿಗೆ ಮಾರ್ಗ ಆಗುತ್ತದೆ ಸರ್ಕಾರಕ್ಕೆ ದೂರು ಸಲ್ಲಿಸಲಾಗಿದೆ. ಇದೀಗ ರಾಜ್ಯಾದ್ಯಂತ ಮಸಾಲೆ ಪುಡಿ, ಅರಿಶಿಣ ಪುಡಿ ಸ್ಯಾಂಪಲ್‌ಗಳನ್ನ ಕಲೆಕ್ಟ್ ಮಾಡಿ ಟೆಸ್ಟ್‌ಗೆ ರವಾನೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

Shwetha M