ABD ರೂಪದಲ್ಲಿ DDP – RCB ಸೂಪರ್ ಸ್ಟ್ರೈಕರ್ ಆಗಿದ್ದೇಗೆ?
ಪಡಿಕ್ಕಲ್ ಸಕ್ಸಸ್ ಸೀಕ್ರೆಟ್ DKನಾ?

ABD ರೂಪದಲ್ಲಿ DDP – RCB ಸೂಪರ್ ಸ್ಟ್ರೈಕರ್ ಆಗಿದ್ದೇಗೆ?ಪಡಿಕ್ಕಲ್ ಸಕ್ಸಸ್ ಸೀಕ್ರೆಟ್ DKನಾ?

ಹಠಕ್ಕೆ ಬಿದ್ದರೆ ಅಸಾಧ್ಯವಾದದ್ದನ್ನೂ ಸಾಧಿಸಿ ತೋರಿಸಬಹುದು ಅನ್ನೋದಕ್ಕೆ ಸದ್ಯ ಬೆಸ್ಟ್ ಎಕ್ಸಾಂಪಲ್ ಆರ್​ಸಿಬಿಯ ಪವರ್ ಹಿಟ್ಟರ್ ದೇವದತ್ ಪಡಿಕ್ಕಲ್. ಬೆಂಗಳೂರು ಪರ ನಂಬರ್ 3ನಲ್ಲಿ ಬ್ಯಾಟಿಂಗ್​ಗೆ ಬರೋ ಪಡಿಕ್ಕಲ್ ಪಂದ್ಯದ ದಿಕ್ಕನ್ನೇ ಬದಲಿಸೋ ಬ್ಯಾಟರ್ ಆಗಿದ್ದಾರೆ. ಕಳೆದ 2 ವರ್ಷಗಳಲ್ಲಿ ಅಕ್ಷರಶಃ ಫೈಯರ್ ಶೋ ತೋರಿಸ್ತಿದ್ದಾರೆ. ಟಿ-20 ಬ್ಯಾಟರ್ ಅಲ್ಲ ಅಂತಾ ಆಡಿಕೊಂಡವ್ರೇ ಈಗ ಡಿಡಿಪಿ ಆಟ ನೋಡಿ ಬಾಯ್ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ : SUPER OVER ಅಲ್ಲ ಕಾಮಿಡಿ ಓವರ್ – ಸೋಲೋಕಂತಲೇ ಆಡ್ತಿದ್ದಾರಾ ಲಕ್ನೋ?

ಟಿ-20 ಫಾರ್ಮೆಟ್ ಅಂದ್ರೆ ಬ್ಯಾಟರ್​ಗಳ ಪಾಲಿಗೆ ಇರುವಂಥ ಮೇನ್ ಚಾಲೆಂಜ್ ಸ್ಟ್ರೈಕ್ ರೇಟ್. ಅರ್ಧಶತಕ, ಶತಕ ಬಂತು ಅನ್ನೋದಕ್ಕಿಂತ ಎಷ್ಟು ಬಾಲ್​ನಲ್ಲಿ ಬಂದಿದೆ ಅನ್ನೋದು ಮ್ಯಾಟ್ರ್ ಆಗುತ್ತೆ. 40 ಬಾಲ್ ಫೇಸ್ ಮಾಡಿ 50 ರನ್ ಗಳಿಸಿದ್ರೆ ಟೀಕೆಗಳನ್ನ ಎದುರಿಸಬೇಕಾಗುತ್ತೆ. ಅದೇ 13 ಬಾಲಲ್ಲಿ 40 ರನ್ ಹೊಡ್ದು ಔಟ್ ಆದ್ರೂ ಕೂಡ ಸೂಪರ್ ಸ್ಟಾರ್ ಆಗೋಗ್ತಾರೆ. ಐಪಿಎಲ್​ನಲ್ಲಂತೂ 200+ ಸ್ಟ್ರೈಕ್ ಬ್ಯಾಟಿಂಗ್​ನಲ್ಲಿ ದೊಡ್ಡ ರೇಸೇ ಇದೆ. ಸೋ ಈಗ ಆರ್​ಸಿಬಿಯಲ್ಲಿ ಸೂಪರ್ ಸ್ಟ್ರೈಕರ್ ಆಗಿ ಆಡ್ತಿರೋ ಆಟಗಾರ ನಮ್ಮ ಕನ್ನಡಿಗ ದೇವದತ್ ಪಡಿಕ್ಕಲ್. ಈ ಸೀಸನ್​ನಲ್ಲಿ ಬ್ಯಾಟಿಂಗ್​ನಲ್ಲಿ ಬಿಗ್ ಇಂಪ್ಯಾಕ್ಟ್ ಮಾಡಿದ್ದಾರೆ.

ಪಡಿಕ್ಕಲ್ 2.0 ಅವತಾರ!

ಎದುರಾಳಿ                                ರನ್ಸ್                    ಸ್ಟ್ರೈಕ್ ರೇಟ್

ಹೈದ್ರಾಬಾದ್                            61(26)                 234.62

ಚೆನ್ನೈ                                    50(29)                 172.41

ರಾಜಸ್ಥಾನ                               14(7)                   200

ಲಕ್ನೋ                                  10(11)                 90.91

ಡೆಲ್ಲಿ                                     18(13)                 138.46

ಗುಜರಾತ್                              55(27)                  203.70

ಡೆಲ್ಲಿ                                     34(13)                 261(54)

ಇಲ್ಲಿ ಆರ್​ಸಿಬಿ 8 ಪಂದ್ಯಗಳ ಪೈಕಿ ಮುಂಬೈ ವಿರುದ್ಧದ ಮ್ಯಾಚಲ್ಲಿ ಬ್ಯಾಟಿಂಗ್​ಗೆ ಅವಕಾಶ ಸಿಕ್ಕಿಲ್ಲ. ಅದನ್ನ ಬಿಟ್ರೆ ಉಳಿದ 7 ಪಂದ್ಯಗಳಲ್ಲಿ ಆಡಿದ್ದಾರೆ. ಕೆಲವು ಸಲ ಡೌನ್ ಅನ್ಸಿದ್ರೂ ಆ ನಂತ್ರ ಗ್ರೇಟ್ ಕಂ ಬ್ಯಾಕ್ ಮಾಡಿದ್ದಾರೆ. ಮೂರು ಅರ್ಧಶತಕಗಳು ಬಂದಿದೆ. ಟೋಟಲ್ ಸ್ಟ್ರೈಕ್​ರೇಟ್ ಈ ಸೀಸನ್​ನಲ್ಲಿ 192.06 ಇದೆ. ಹಾಗೇ ಆರ್​ಸಿಬಿ ಪರ 242 ರನ್​ಗಳನ್ನ ಕಲೆ ಹಾಕಿದ್ದು ಹೈಯೆಸ್ಟ್ ಸ್ಕೋರ್ ಲಿಸ್ಟ್ ನಲ್ಲಿ ಟಾಪ್-2ನಲ್ಲಿದ್ದಾರೆ. ಕೊಹ್ಲಿ ಬಳಿಕ ಬೆಂಗಳೂರು ಪರ ಅತೀಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ಹೀಗೆ ಡಿಡಿಪಿ ಅಕ್ಷರಶಃ ಬ್ಯಾಟಿಂಗ್​ನಲ್ಲಿ ಉಗ್ರರೂಪಿಯಾಗಿದ್ದಾರೆ. ಆದ್ರೆ 2 ವರ್ಷಗಳ ಹಿಂದೆ ಪಡಿಕ್ಕಲ್ ಸ್ಥಿತಿ ಹೀಗಿರಲಿಲ್ಲ. ಟಿ-20 ಫಾರ್ಮೆಟ್ ಬ್ಯಾಟರ್ ಅಲ್ಲ ಅಂತಾ ಗೇಲಿ ಮಾಡ್ತಿದ್ರು. ಯಾಕಂದ್ರೆ ಡಿಡಿಪಿಗೆ ರನ್ಸ್ ಬಂದ್ರೂ ಸ್ಟ್ರೈಕ್ ರೇಟ್ ಕೈ ಕೊಡ್ತಿತ್ತು. ಆದ್ರೆ ಈಗ ಸೂಪರ್ ಸ್ಟ್ರೈಕರ್ ಆಗಿದ್ದಾರೆ. ಅಷ್ಟಕ್ಕೂ ಪಡಿಕ್ಕಲ್ ಪವರ್ ಹಿಂದಿನ ಸೀಕ್ರೆಟ್ ಆರ್ ಸಿಬಿಯ ಇಬ್ಬರು ಮಾಸ್ಟರ್ ಮೈಂಡ್ ಗಳು.

ಪಡಿಕ್ಕಲ್ ಆಟ ಬದಲಿಸಿದ ಡಿಕೆ ಮತ್ತು ಫ್ಲವರ್!

2025ರ ಐಪಿಎಲ್ ಗೂ ಮುನ್ನ ಮೆಗಾ ಹರಾಜಿನಲ್ಲಿ ದೇವದತ್ ಪಡಿಕ್ಕಲ್ ಆರ್ ಸಿಬಿ ಸೇರಿದ್ರು. ಅದಕ್ಕೂ ಮುನ್ನ ಪಡಿಕ್ಕಲ್ ಆಡ್ತಿದ್ರೂ ಕೂಡ ಗೇಮ್ ಚೇಂಜರ್ ಥರ ಕಾಣ್ತಾ ಇರ್ಲಿಲ್ಲ. ಸೋ ಇಂಥಾ ಟೈಮಲ್ಲಿ  ಪಡಿಕ್ಕಲ್ ಆಟದ ದಿಕ್ಕನ್ನೇ ಬದಲಿಸಿದ್ದು ಆರ್​ಸಿಬಿಯ ಹೆಡ್ ಕೋಚ್ ಌಂಡಿ ಫ್ಲವರ್ ಮತ್ತು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್. ಇದನ್ನ ಸ್ವತಃ ದೇವದತ್ ಪಡಿಕ್ಕಲ್​ರೇ ಹೇಳಿಕೊಂಡಿದ್ದಾರೆ. ನಾನು ನನ್ನ ಬ್ಯಾಟಿಂಗ್ ಸ್ಟೈಲ್ ಬದಲಾವಣೆಗೆ ಸಾಕಷ್ಟು ಕಷ್ಟ ಪಟ್ಟಿದ್ದೇನೆ. ಐಪಿಎಲ್​ನಲ್ಲಿ ನಾನೂ ಸದ್ದು ಮಾಡಬಲ್ಲೆ ಅನ್ನೋ ಬಗ್ಗೆ ನನಗೆ ಕಾನ್ಫಿಡೆನ್ಸ್ ಬೇಕಿತ್ತು. ಇದಕ್ಕಾಗಿ ತುಂಬಾ ಕೆಲಸ ಮಾಡಿದ್ದೇನೆ. ಅಗ್ರೆಸ್ಸಿವ್ ಬ್ಯಾಟಿಂಗ್ ಸ್ಟೈಲ್​ಗೆ ಅಳವಡಿಸಿಕೊಳ್ಳೋಕೆ ತುಂಬಾ ಕಷ್ಟ ಪಟ್ಟಿದ್ದೇನೆ. ಹಾಗೇ ಆರ್​ಸಿಬಿಯಲ್ಲಿ ಌಂಡಿ ಫ್ಲವರ್, ದಿನೇಶ್ ಕಾರ್ತಿಕ್, ಮೊ ಬೊಬಾಟ್ ಜೊತೆ ಸಾಕಷ್ಟು ಕೆಲಸ ಮಾಡಿದ್ದೇನೆ. ಅವ್ರಿಂದಲೂ ಬ್ಯಾಟಿಂಗ್ಸ್ ಸ್ಕಿಲ್ಸ್ ಬಗ್ಗೆ ಇನ್ನಷ್ಟು ಇಂಪ್ರೂವ್ ಆಗಿದ್ದೇನೆ. ಟೆಕ್ನಿಕಲಿ ತುಂಬಾ ಕಲಿತಿದ್ದೇನೆ ಅನ್ನೋ ಮೂಲಕ ಹೊಸ ಡಿಡಿಪಿಯ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಸದ್ಯ ಆರ್ ಸಿಬಿ ಪರ ಅದ್ಭುತವಾಗಿ ಬ್ಯಾಟಿಂಗ್ ಮಾಡ್ತಿರೋ ಡಿಡಿಪಿ ಆರ್​ಸಿಬಿಯ ಆಪತ್ವಾಂಧವ ಎಬಿ ಡಿವಿಲಿಯರ್ಸ್​​ರನ್ನ ನೆನಪು ಮಾಡ್ತಿದ್ದಾರೆ. ಅದ್ರಲ್ಲೂ ವಿರಾಟ್ ಕೊಹ್ಲಿ ಮತ್ತು ಪಡಿಕ್ಕಲ್ ಇಬ್ರೂ ಆಡೋದನ್ನ ನೋಡೋದೇ ಚೆಂದ.

Shantha Kumari