RCBಗೆ ಈಗ ನಂಬರ್ 1 ಟಾರ್ಗೆಟ್ – ನಾಗಾಲೋಟಕ್ಕೆ ಅಡ್ಡಿ ಯಾರು?
6 ಪಂದ್ಯ.. ಹೇಗಿದೆ ಪ್ಲೇ ಆಫ್ ಜರ್ನಿ?

ಆರ್ಸಿಬಿ ಈಗ ಎಂಥಾ ಸೂಪರ್ ಡೂಪರ್ ಫಾರ್ಮ್ನಲ್ಲಿದೆ. ಒಂದಿನ ಬ್ಯಾಟಿಂಗ್ನಲ್ಲಿ ಸುನಾಮಿ ಎಬ್ಬಿಸಿದ್ರೆ ಮತ್ತೊಂದಿನ ಬೌಲಿಂಗ್ನಲ್ಲಿ ಬಿರುಗಾಳಿ ಎಬ್ಬಿಸ್ತಿದ್ದಾರೆ. ಡೆಲ್ಲಿ ವಿರುದ್ಧದ ಮ್ಯಾಚ್ ಅಂತೂ ಅಭಿಮಾನಿಗಳಿಗೆ ಡ್ರೀಮ್ ಗೇಮ್.. ಆಲ್ರೆಡಿ ಪ್ಲೇ ಆಫ್ ಹೊಸ್ತಿಲಲ್ಲಿರೋ ಬೆಂಗಳೂರಿಗೆ ನೆಕ್ಸ್ಟ್ ಹಾದಿ ಕೂಡ ಈಸಿ ಅನ್ನೋ ಥರನೇ ಇದೆ. ಬಟ್ ಈ ಗೆಲುವಿನ ನಾಗಾಲೋಟಕ್ಕೆ ಎರಡು ತಂಡಗಳು ಸವಾಲ್ ಹಾಕಬಹುದು.
ಇದನ್ನೂ ಓದಿ : ಒಂದೇ ಸ್ಕೂಟರ್‌ನಲ್ಲಿ ಆರು ಅಪ್ರಾಪ್ತರ ರೈಡ್! – ಆಮೇಲೆ ಏನಾಯ್ತು?
ಬೆಂಗಳೂರು ತಂಡ ಈ ಸೀಸನ್ನಲ್ಲಿ ಸದ್ಯ 8 ಪಂದ್ಯಗಳನ್ನ ಆಡಿದ್ದು 6ರಲ್ಲಿ ಗೆದ್ದಿದೆ. ಹಾಗೇ 12 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಉಳಿದ 6 ಪಂದ್ಯಗಳಲ್ಲಿ 2 ಪಂದ್ಯಗಳನ್ನ ಗೆದ್ರೂ ಸಾಕು ಪ್ಲೇಆಫ್ ಫಿಕ್ಸ್.. ಡಬಲ್ ರೌಂಡ್ ರಾಬಿನ್ ಇದ್ದ 2012-2013 ಹೊರತುಪಡಿಸಿದರೆ ಐಪಿಎಲ್ ಇತಿಹಾಸದಲ್ಲಿ 16 ಅಂಕಗಳಿಸಿದ ಯಾವುದೇ ತಂಡ ಪ್ಲೇ ಆಫ್ನಿಂದ ವಂಚಿತವಾಗಿರುವ ಇತಿಹಾಸವಿಲ್ಲ. ಹಾಗಾಗಿ ಐಪಿಎಲ್ನಲ್ಲಿ ಪ್ಲೇಆಫ್ ಟಿಕೆಟ್ ಖಚಿತಪಡಿಸಿಕೊಳ್ಳಲು ಆರ್ಸಿಬಿಗೆ ಇನ್ನೆರಡು ಗೆಲುವುಗಳು ಮಾತ್ರ ಅಗತ್ಯವಾಗಿದೆ. ನೆಟ್ ರನ್ ರೇಟ್ ಅಂತೂ ಎಲ್ರಿಗಿಂತ ಜಾಸ್ತಿನೇ ಇದೆ. ಸೋ ಪಾಯಿಂಟ್ಸ್ ಈಕ್ವಲ್ ಅಂತಾ ಬಂದ್ರೂ ಆರ್ಸಿಬಿಗೆ ಪಕ್ಕಾ ಚಾನ್ಸ್ ಸಿಗುತ್ತೆ. ಬಟ್ ವಿಷ್ಯ ಅದಲ್ಲ ಆರ್ಸಿಬಿಗೆ ಪ್ಲೇಆಫ್ ಗಿಂತ ಟಾಪ್-2ಗೆ ಬರೋದೇ ಗುರಿ. ಯಾಕಂದ್ರೆ ಅಲ್ಲಿ ಗೆದ್ರೆ ಸೀದಾ ಫೈನಲ್. ಹಾಗಾದ್ರೆ ಆರ್ಸಿಬಿಗೆ ನೆಕ್ಸ್ಟ್ ಇರೋ ಮ್ಯಾಚಸ್ ಮತ್ತೆ ಫೈಟ್ ಹೇಗಿರುತ್ತೆ ಅನ್ನೋದನ್ನ ನೋಡ್ತಾ ಹೋಗೋಣ. ಮೊದಲನೇದಾಗಿ ಆರ್ಸಿಬಿಗೆ ಮುಂದಿನ ಪಂದ್ಯ ಗುಜರಾತ್ ವಿರುದ್ಧ.
ಆರ್ ಸಿಬಿ ಮುಂದಿನ ಪಂದ್ಯಗಳು!
ದಿನಾಂಕ ಎದುರಾಳಿ ಪ್ರಸ್ತುತ ಸ್ಥಾನ
ಏಪ್ರಿಲ್ 30 ಗುಜರಾತ್ 8 ಅಂಕ, 5ನೇ ಸ್ಥಾನ
ಮೇ 7 ಲಕ್ನೋ 4 ಅಂಕ, 10ನೇ ಸ್ಥಾನ
ಮೇ 10 ಮುಂಬೈ 4 ಅಂಕ, 9ನೇ ಸ್ಥಾನ
ಮೇ 13 ಕೊಲ್ಕತ್ತಾ 5 ಅಂಕ, 8ನೇ ಸ್ಥಾನ
ಮೇ 17 ಪಂಜಾಬ್ 13 ಅಂಕ, 1ನೇ ಸ್ಥಾನ
ಮೇ 22 ಹೈದ್ರಾಬಾದ್ 10 ಅಂಕ, 3ನೇ ಸ್ಥಾನ
ಇಲ್ಲಿ ಆರ್ಸಿಬಿಯ ಮುಂದಿನ ಪಂದ್ಯಗಳನ್ನ ನೋಡಿದಾಗ 6 ಮ್ಯಾಚ್ಗಳ ಪೈಕಿ ಪಂಜಾಬ್ ಹಾಗೇ ಹೈದ್ರಾಬಾದ್ ತಂಡಗಳು ಸ್ವಲ್ಪ ಚಾಲೆಂಜಿಂಗ್ ಎನ್ನಿಸಬಹುದು. ಯಾಕಂದ್ರೆ ಪಂಜಾಬ್ ಅನ್ಬೀಟನ್ ಟೀಂ ಆಗಿ ಮುನ್ನುಗ್ತಿದೆ. ಇನ್ನು ಹೈದ್ರಾಬಾದ್ ತಂಡ ಆರಂಭದಲ್ಲಿ ಏರಿಳಿತ ಕಂಡ್ರೂ ಈಗ ಟಾಪ್ ಪರ್ಫಾಮೆನ್ಸ್ ಬರ್ತಿದೆ. ಹೀಗಾಗಿ ಇವ್ರಿಬ್ರು ಕೂಡ ಲೀಗ್ ಹಂತದ ಕೊನೆಯ ಪಂದ್ಯಗಳಲ್ಲಿ ಟಫ್ ಫೈಟ್ ಕೊಡಬಹುದು. ಉಳಿದೆಲ್ಲಾ ತಂಡಗಳು ಸ್ವಲ್ಪ ಸ್ಟ್ರಗಲ್ಸ್ ಇರೋದ್ರಿಂದ ಆರ್ಸಿಬಿಗೆ ಮುಂದಿನ ಹಾದಿ ಈಸಿ ಆಗುತ್ತೆ. ಸದ್ಯಕ್ಕೆ ಆರ್ ಸಿಬಿ ಪರ್ಫಾಮೆನ್ಸ್ ನೋಡ್ತಿದ್ರೆ ಕಂಪ್ಲೀಟ್ ಡಾಮಿನೇಷನ್ ಪಕ್ಕಾ ಇದೆ. ಯಾಕಂದ್ರೆ ಆರ್ಸಿಬಿ ಯಾರೋ ಒಂದಿಬ್ಬರ ಮೇಲೆ ಡಿಪೆಂಡ್ ಆಗಿಲ್ಲ. ಆಲ್ರೌಂಡ್ ಪ್ರದರ್ಶನ ನೀಡ್ತಿದೆ. ಹಾಗೇ ಬ್ಯಾಟಿಂಗ್ ಜೊತೆ ಬೌಲಿಂಗ್ ಕೂಡ ಸೂಪರ್ ಆಗಿದೆ. ಚೆನ್ನೈ ವಿರುದ್ಧದ ಮ್ಯಾಚಲ್ಲಿ 250, ಮುಂಬೈ ವಿರುದ್ಧ 240 ರನ್ಸ್ ಹೊಡ್ದು ಬ್ಯಾಟಿಂಗ್ನಲ್ಲಿ ಬಿರುಗಾಳಿ ಎಬ್ಬಿಸಿದ್ರು. ಹಾಗೇ ಸ್ಟ್ರೆಂಥ್ ಏನು ಅನ್ನೋದನ್ನ ತೋರಿಸಿದ್ರು. ಈಗ ಡೆಲ್ಲಿ ವಿರುದ್ಧ ಫಸ್ಟ್ ಬೌಲಿಂಗ್ ಮಾಡಿ ಕೇವಲ 75 ರನ್ಗಳಿಗೆ ಆಲ್ಔಟ್ ಮಾಡಿ ಬೌಲಿಂಗ್ ಬೆಂಕಿ ಅನ್ನೋದನ್ನೂ ತೋರಿಸಿಕೊಟ್ಟಿದ್ದಾರೆ. ಈ ಸೀಸನ್ನಲ್ಲಿ ರಾಜಸ್ಥಾನ ಹಾಗೇ ಡೆಲ್ಲಿ ವಿರುದ್ಧ ಒಂದೊಂದು ಪಂದ್ಯ ಸೋತಿದ್ದಾರೆ ನಿಜ. ಆದ್ರೆ ಕೊನೇ ಮೂಮೆಂಟ್ವರೆಗೂ ಫೈಟ್ ಕೊಟ್ಟೇ ಸೋತಿದ್ದಾರೆ. ಈಸಿಯಾಗಿ ಸೋಲೊಪ್ಪಿಕೊಂಡಿಲ್ಲ. ಸೋ ಮುಂದಿನ ಪಂದ್ಯಗಳಲ್ಲೂ ಅಂಥದ್ದೇ ಪ್ರದರ್ಶನವನ್ನ ನಿರೀಕ್ಷೆ ಮಾಡ್ಬೋದು. ಸದ್ಯಕ್ಕೇನೂ ಪ್ಲೇಆಫ್ ಹಾದಿ ಪಕ್ಕಾ ಅನ್ನುವಂತೆಯೇ ಇದೆ. ಟಾಪ್ 1 ಅಥವಾ 2 ಟಾರ್ಗೆಟ್ ಇರೋದ್ರಿಂದ ಮುಂದಿನ ಎಲ್ಲಾ ಪಂದ್ಯಗಳೂ ಇಂಪಾರ್ಟೆಂಟ್ ಆಗುತ್ತೆ.

ನೋಡಿರಿ

