RCBಗೆ 2ನೇ ಕಪ್ LOADING….. – ಬ್ಯಾಕ್ ಟು ಬ್ಯಾಕ್ ಟ್ರೋಫಿ ನಮ್ದೇ?
ರೆಡ್ ಆರ್ಮಿಗೆ ಏನೆಲ್ಲಾ ಅಡ್ವಾಂಟೇಜ್?

RCBಗೆ 2ನೇ ಕಪ್ LOADING….. – ಬ್ಯಾಕ್ ಟು ಬ್ಯಾಕ್ ಟ್ರೋಫಿ ನಮ್ದೇ?ರೆಡ್ ಆರ್ಮಿಗೆ ಏನೆಲ್ಲಾ ಅಡ್ವಾಂಟೇಜ್?

2026ರ ಐಪಿಎಲ್​ನ ಅಸಲಿ ಆಟ ಸ್ಟಾರ್ಟ್ ಆಗಿದೆ. ಫಸ್ಟ್ ಆಫ್​ನಲ್ಲಿ ಕೆಲ ಟೀಮ್ಸ್​ ಡಾಮಿನೇಷನ್ ಮಾಡಿದ್ರೆ ಸೆಕೆಂಡ್ ಆಫ್​ನಲ್ಲೂ ಥ್ರಿಲ್ಲಿಂಗ್ ಮ್ಯಾಚಸ್ ಆಗ್ತಿವೆ. ಹಾಗೇ ಇನ್ಮುಂದಿನ ಒಂದೊಂದು ಪಂದ್ಯಗಳೂ ಕೂಡ ಪ್ಲೇ ಆಫ್ ರೇಸ್​ನ ನಿರ್ಧಾರ ಮಾಡ್ತಾ ಹೋಗುತ್ತೆ. ಌಂಡ್ ಈ ಸೀಸನ್​ನಲ್ಲಿ ಪಂಜಾಬ್ ಅಂತೂ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡಿದೆ. ಕಳೆದ ವರ್ಷದ ಫೈನಲಿಸ್ಟ್​ಗಳು ಈ ಸಲ ಕೂಡ ಡೇಂಜರಸ್ ಆಗಿದ್ದಾರೆ. ಬೆಂಗಳೂರು ತಂಡ ಕೂಡ ಸೋಲು ಗೆಲುವು ಇದ್ರೂ ಬೌನ್ಸ್ ಬ್ಯಾಕ್ ಮಾಡಿ ಮುನ್ನುಗ್ತಿದ್ದಾರೆ. ಈ ಸಲ ಪಂಜಾಬ್ ಅಂತೂ ಪ್ಲೇಆಫ್​ಗೇರೋದು ಪಕ್ಕಾ ಆಗಿದೆ. ಅದ್ರಲ್ಲೂ ಟಾಪ್-2ನಲ್ಲೇ ಫಿನಿಶ್ ಮಾಡೋದು ಆಲ್ಮೋಸ್ಟ್ ಕನ್ಫರ್ಮ್. ಹಾಗೇ ಬೆಂಗಳೂರು ಟೀಂ ಕೂಡ ಈ ಸಲ ಟ್ರೋಫಿ ಗೆಲ್ಲೋ ಫೇವರೆಟ್ ಟೀಂ ಕೂಡ ಹೌದು. ಯಾಕಂದ್ರೆ ಕೆಲ ಅಡ್ವಾಂಟೇಜಸ್ ಕೂಡ ಇದೆ.

ಇದನ್ನೂ ಓದಿ : ಡೆಲ್ಲಿನ ಗಿಲ್ಲಿ ತರ ಹೊಡೆದ ಆರ್‌ಸಿಬಿ ಬಾಯ್ಸ್‌ – ಬೌಲಿಂಗ್‌ನಲ್ಲಿ ಮಿಂಚಿದ ರಾಯಲ್‌ ಚಾಲೆಂಜರ್ಸ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು. ಮೊದಲ ಟ್ರೋಫಿ ಗೆಲ್ಲೋಕೆ 18 ವರ್ಷಗಳೇ ಬೇಕಾಯ್ತು. ಹಾಗಂತ ಆರ್​ಸಿಬಿ ಏನು ಡಮ್ಮಿ ಟೀಂ ಅಲ್ಲ. ದಾಖಲೆಗಳನ್ನೇ ಮೆಟ್ಟಿಲು ಮಾಡ್ಕೊಂಡು ಐಪಿಎಲ್​ನಲ್ಲಿ ಬ್ರ್ಯಾಂಡ್ ಆಗಿ ಬೆಳ್ದಿರೋ ಮೋಸ್ಟ್ ಫ್ಯಾನ್ ಬೇಸ್ಡ್ ಟೀಂ. ವಿಶ್ವಕ್ರಿಕೆಟ್​ನಲ್ಲಿ ಕಿಂಗ್ ಆಗಿ ಮೆರೀತಿರೋ ಕಿಂಗ್ ವಿರಾಟ್ ಕೊಹ್ಲಿಯೇ ದಶಕದ ಕಾಲ ಕ್ಯಾಪ್ಟನ್ ಆಗಿ ಮುನ್ನಡೆಸಿದ್ರೂ ಕಪ್ ಗೆಲ್ಲೋಕೆ ಸಾಧ್ಯವಾಗಿರಲಿಲ್ಲ. ಆದ್ರೆ ಕಳೆದ ವರ್ಷ ಚೊಚ್ಚಲ ಕಪ್ ಗೆದ್ದು ಕುಣಿದು ಕುಪ್ಪಳಿಸಿದ್ರು.

ಸತತ 2ನೇ ಟ್ರೋಫಿ ಗೆಲ್ಲುತ್ತಾ ಬೆಂಗಳೂರು?

2025ರಲ್ಲಿ ಚಾಂಪಿಯನ್ ಆಗಿರುವ ತಂಡಕ್ಕೆ ಕಾನ್ಫಿಡೆನ್ಸ್ ಹೆಚ್ಚು

ಆರೆಂಜ್ ಕ್ಯಾಪ್ ರೇಸ್ ನಲ್ಲಿ ಕೊಹ್ಲಿ.. ಬ್ಯಾಟಿಂಗ್ ಕೂಡ ಬೊಂಬಾಟ್

200+ ಟಾರ್ಗೆಟ್ ಗಳನ್ನ ಯಶಸ್ವಿಯಾಗಿ ಚೇಸ್ ಮಾಡ್ತಿರೋ ಬೆಂಗಳೂರು

ಫಸ್ಟ್ ಬ್ಯಾಟಿಂಗ್ ಮಾಡಿದಾಗ ಡೆಲ್ಲಿ ವಿರುದ್ಧ ಸ್ಟ್ರಗಲ್ ಬಿಟ್ರೆ ಮತ್ತೆ ಸೂಪರ್

ಪಂಜಾಬ್ ತಂಡದ ವಿರುದ್ಧ ಕಳೆದ ಮೂರು ಪಂದ್ಯಗಳಲ್ಲಿ ವಿನ್

ಕಳೆದ ವರ್ಷದ ಆಟಗಾರರೇ ಕಂಟಿನ್ಯೂ ಆಗಿರೋದ್ರಿಂದ ಉತ್ತಮ ಪ್ರದರ್ಶನ

ಬ್ಯಾಟಿಂಗ್, ಬೌಲಿಂಗ್ ಕೂಡ ಚೆನ್ನಾಗಿದ್ದು ಕಪ್ ಗೆಲ್ಲೋ ಎಲ್ಲಾ ಸಾಮರ್ಥ್ಯ

ಇದನ್ನೆಲ್ಲಾ ನೋಡಿದಾಗ ಬೆಂಗಳೂರು ತಂಡಕ್ಕೆ 2ನೇ ಕಪ್ ಗೆಲ್ಲೋಕೆ ಬೇಕಿರೋ ಎಲ್ಲಾ ಅವಕಾಶಗಳೂ ಇದೆ. ಬ್ಯಾಟಿಂಗ್ ಡೆಪ್ತ್, ಬೌಲಿಂಗ್ ಲೈನಪ್ ಎಲ್ಲವೂ ಸೂಪರ್ ಸ್ಟ್ರಾಂಗ್ ಇರೋದ್ರಿಂದ ಬ್ಯಾಕ್ ಟು ಬ್ಯಾಕ್ ಕಪ್ ಗೆಲ್ಲಬಹುದು.

Shantha Kumari