ಹನುಮಂತ ಬರೆದಿದ್ದ ರಾಮಾಯಣ ಸಮುದ್ರಕ್ಕೆ ಎಸೆದಿದ್ದು ಯಾಕೆ – ಕೈಲಾಸದಲ್ಲಿ ನಿಜಕ್ಕೂ ಆಗಿದ್ದೇನು ಗೊತ್ತಾ?

ಹನುಮಂತ ಬರೆದಿದ್ದ ರಾಮಾಯಣ ಸಮುದ್ರಕ್ಕೆ ಎಸೆದಿದ್ದು ಯಾಕೆ – ಕೈಲಾಸದಲ್ಲಿ ನಿಜಕ್ಕೂ ಆಗಿದ್ದೇನು ಗೊತ್ತಾ?

ರಾಮಾಯಣ ಎಂದರೆ ತಕ್ಷಣ ನೆನಪಿಗೆ ಬರುವುದು ಮಹರ್ಷಿ ವಾಲ್ಮೀಕಿ. ಆದರೆ ವಾಲ್ಮೀಕಿ ರಾಮಾಯಣಕ್ಕಿಂತ ಮೊದಲೇ ಹನುಮಂತನು ತನ್ನದೇ ಆದ ರಾಮಾಯಣವನ್ನು ರಚಿಸಿದ್ದನು ಎಂಬ ಕುತೂಹಲಕಾರಿ ಸಂಗತಿ ಅನೇಕರಿಗೆ ತಿಳಿದಿಲ್ಲ. ಭಗವಾನ್ ರಾಮನ ಪರಮ ಭಕ್ತನಾದ ಹನುಮಂತನು ಬರೆದ ಈ ಕಾವ್ಯವನ್ನು ಹನುಮದ್ ರಾಮಾಯಣ ಎಂದು ಕರೆಯಲಾಗುತ್ತದೆ. ಆದರೆ ಇಷ್ಟೊಂದು ಅದ್ಭುತವಾದ ಕಾವ್ಯವನ್ನು ಹನುಮಂತನೇ ಸ್ವತಃ ಸಮುದ್ರಕ್ಕೆ ಎಸೆದನು! ಯಾಕೆ ಗೊತ್ತಾ?

ರಾಮಯಾಣದ ಯುದ್ಧ ಮುಗಿದು, ಶ್ರೀರಾಮನ ಪಟ್ಟಾಭೀಷೇಕದ ನಂತರ ಹನುಮಂತನು ಶಿವನನ್ನ ಆರಿಸಿ ಹಿಮಾಲಯದಲ್ಲಿ ಧ್ಯಾನ ಮಗ್ನನಾಗುತ್ತಾನೆ. ಇದರ ಬಿಡುವಿನ ವೇಳೆ ಹನುಮಂತನು ತನ್ನ ಉಗುರುಗಳಿಂದ ಹಿಮಾಲಯದಲ್ಲಿದ್ದ ಬಂಡೆಗಳ ಮೇಲೆ ತಾನು ಕಂಡ ರಾಮಯಣದ ಕಥೆಯನ್ನ ತುಂಬಾ ಸುಂದರವಾಗಿ ಚಿತ್ರಿಸುತ್ತಾರೆ.  ಹೌದು, ಈ ಜಗತ್ತಿನಲ್ಲಿ ರಾಮಯಣವನ್ನ ಮೊದಲಿಗೆ ಬರೆದ ವ್ಯಕ್ತಿ ಎಂದರೆ ಅದು ರಾಮನ ಬಂಟ ಹನುಮಂತನೇ! ಮಹರ್ಷಿ ವಾಲ್ಮೀಕಿಗಿಂತ ಮೊದಲೇ ರಾಮಯಾಣವನ್ನ ಹನುಮಂತನು ಹಿಮಾಲಯದಲ್ಲಿನ ಬಂಡೆಗಳ ಮೇಲೆ ಚಿತ್ರಿಸಿದ್ದಾರೆ. ಹಾಗಾದರೆ, ಈಗ್ಯಾಕೆ ಆ ರಾಮಯಣ ಎಲ್ಲಿಯೂ ಕಾಣಸಿಗುವುದಿಲ್ಲ ಗೊತ್ತಾ? ಯಾಕಂದರೆ, ಖುದ್ದು ಹನುಮಂತನೇ ತಾನು ರಚಿಸಿದ ರಾಮಯಣದ ಕಲ್ಲಿನ ಬಂಡೆಗಳನ್ನ ಸಮುದ್ದಕ್ಕೆ ಎಸಿದ್ದಾನೆ!

ಪುರಾಣದ ಪ್ರಕಾರ, ಹನುಮಂತನು ವಾಲ್ಮೀಕಿಯವರ ರಾಮಾಯಣಕ್ಕೂ ಮುಂಚೆಯೇ ತನ್ನ ರಾಮಾಯಣವನ್ನ ಬರೆದಿದ್ದನ್ನು. ಇದನ್ನ “ಹನುಮ ರಾಮಾಯಣ” ಎಂದು ಕರೆಯಲಾಗುತ್ತದೆ. ಆದರೆ, ಇದೇ ವೇಳೆ, ಮಹರ್ಷಿ ವಾಲ್ಮೀಕಿಯವರು ಕೂಡ ತಮ್ಮ ರಾಮಾಯಣವನ್ನ ಪೂರ್ಣಗೊಳಿಸಿ, ತಮ್ಮ ಕೃತಿಯನ್ನು ಶಿವನಿಗೆ ಅರ್ಪಿಸಲು ಅವರು ಕೈಲಾಸಕ್ಕೆ ತೆರಳುತ್ತಿದ್ದರು. ಆದರೆ, ಶಿವನಿಗೆ ಅರ್ಪಿಸಲು ಹೋಗುವ ದಾರಿಯಲ್ಲಿ ಹನುಮಂತನನ್ನು ಅವರು ಭೇಟಿಯಾದರು. ಈ ವೇಳೆ, ಹನುಮಂತನು ಬಂಡೆಗಳ ಮೇಲೆ ಕೆತ್ತಿದ್ದ ರಾಮಾಯಣವನ್ನು ನೋಡಿದ ವಾಲ್ಮೀಕಿ ದಿಗ್ಬ್ರಮೆಗೊಂಡರು. ಇನ್ನೂ ಬಂಡೆಗಳ ಮೇಲೆ, ಹನುಮಂತನ ಬರಹವು ಎಷ್ಟು ಸುಂದರವಾಗಿ ಮತ್ತು ಭಾವನಾತ್ಮಕವಾಗಿತ್ತೆಂದರೆ, ಅದನ್ನು ಓದಿದ ಯಾರಿಗಾದರೂ ರಾಮನ ಕಥೆ ಕಣ್ಣ ಮುಂದೆ ಕಂಡಂತೆ ಭಾಸವಾಗುತ್ತಿತ್ತು. ಇದನ್ನು ಕಂಡ ವಾಲ್ಮೀಕಿ ಕೂಡ ತುಂಬಾ ವಿಷಾದಿಸಿದರು.
ಇನ್ನೂ, ವಾಲ್ಮೀಕಿಯವರ ಮುಖದಲ್ಲಿನ ವಿಷಾದವನ್ನು ಗಮನಿಸಿದ ಹನುಮಂತನು, ಅದಕ್ಕೆ ಕಾರಣವೇನೆರಂದು ವಿಚಾರಿಸಿದನು. ಆಗ ವಾಲ್ಮೀಕಿಯವರು, “ಹನುಮಂತಾ ನೀನು ಬರೆದಿರುವ ರಾಮಾಯಣವು ಅದ್ಭುತವಾಗಿದೆ. ಇದರ ಮುಂದೆ ನಾನು ಕಷ್ಟಪಟ್ಟು ಬರೆದ ರಾಮಾಯಣವು ಮಂಕಾಗಿ ಕಾಣುತ್ತದೆ. ನಿನ್ನ ಈ ಕೃತಿಯನ್ನು ನೋಡಿದ ಮೇಲೆ ಜನರು ನನ್ನ ರಾಮಾಯಣವನ್ನು ಓದುವುದಿಲ್ಲ, ಕಾಲಕ್ರಮೇಣ ನನ್ನ ಪರಿಶ್ರಮವು ವ್ಯರ್ಥವಾಗುತ್ತದೆ” ಎಂಬ ಆತಂಕವನ್ನು ಹೊರಹಾಕಿದರು.
ಏತನ್ಮಧ್ಯೆ, ವಾಲ್ಮೀಕಿಯವರ ಮನಸ್ಸಿನ ನೋವನ್ನು ಅರ್ಥಮಾಡಿಕೊಂಡ ಹನುಮಂತನಿಗೆ ತನ್ನ ಕಾವ್ಯಕ್ಕಿಂತ ಭಕ್ತನ ಮತ್ತು ಋಷಿಯ ಗೌರವವೇ ಮುಖ್ಯವೆನಿಸಿತು. ಹಾಗಾಗಿ, ತಕ್ಷಣವೇ, ಹನುಮಂತನು ತನ್ನ ಒಂದು ಭುಜದ ಮೇಲೆ ರಾಮಾಯಣ ಕೆತ್ತಿದ್ದ ಬಂಡೆಗಳನ್ನು ಮತ್ತು ಇನ್ನೊಂದು ಭುಜದ ಮೇಲೆ ವಾಲ್ಮೀಕಿಯವರನ್ನು ಕೂರಿಸಿಕೊಂಡು ಸಮುದ್ರದ ಬಳಿ ಹೋದನು. ಅಲ್ಲಿ ಭಗವಾನ್ ರಾಮನನ್ನು ಸ್ಮರಿಸುತ್ತಾ ಆ ಬಂಡೆಗಳನ್ನು ಸಮುದ್ರದ ನೀರಿನಲ್ಲಿ ಮುಳುಗಿಸಿಬಿಟ್ಟನು. ಹೀಗೆ ಹನುಮಂತನು ತನ್ನ ಕೀರ್ತಿಗಿಂತಲೂ ವಾಲ್ಮೀಕಿಯ ಕಾವ್ಯಕ್ಕೆ ಪ್ರಾಮುಖ್ಯತೆ ನೀಡಿ ತ್ಯಾಗ ಮಾಡಿದನು.
ಮುಂದುವರೆದು, ಹಲವು ವರ್ಷಗಳ ನಂತರ, ರಾಜ ಭೋಜನ ಕಾಲದಲ್ಲಿ ಸಮುದ್ರ ತೀರದಲ್ಲಿ ವಿಚಿತ್ರ ಬರವಣಿಗೆಯಿರುವ ಬಂಡೆಯ ತುಣುಕುಗಳು ಪತ್ತೆಯಾದವು ಎಂದು ಹೇಳಲಾಗುತ್ತದೆ. ಈ ವೇಳೆ, ಮಹಾಕವಿ ಕಾಳಿದಾಸನು ಆ ಬರಹಗಳನ್ನು ಗಮನಿಸಿದಾಗ, ಅದು ಹನುಮಂತನು ಬರೆದಿದ್ದ ರಾಮಾಯಣದ ಒಂದು ಭಾಗವೆಂದು ಗುರುತಿಸಿದನು. ನಂತರ ರಾಜ ಭೋಜನ ಆಸ್ಥಾನದ ವಿದ್ವಾಂಸರು ಅವುಗಳನ್ನು ಸಂಗ್ರಹಿಸಿ ಹನುಮನ್ನಾಟಕ ಎಂಬ ಹೆಸರಿನಲ್ಲಿ ಪುನರ್ನಿರ್ಮಿಸಿದರು ಎಂಬ ನಂಬಿಕೆಯಿದೆ.

Kishor KV