ಭುವಿ ಬಂಗಾರ.. ಹೇಜಲ್GOD – 75ಕ್ಕೆ ಗಂಟು ಮೂಟೆ ಕಟ್ಟಿದ ಡೆಲ್ಲಿ
RCB ಬೌಲಿಂಗ್ ಬೆಂಕಿ!

ಎಂತಾ ಮ್ಯಾಚ್.. ಎಂಥ ರಿವೆಂಜ್.. ಬೆಂಗಳೂರಲ್ಲಿ ಬೆಂಗಳೂರು ತಂಡವನ್ನ ಸೋಲಿಸಿದ್ದ ಡೆಲ್ಲಿಗೆ ಡೆಲಿಯಲ್ಲೇ ಸೋಲಿಸಿ ತಿರುಗೇಟು ಕೊಟ್ಟಿದ್ದಾರೆ ಬೆಂಗಳೂರ್ ಬಾಯ್ಸ್. ಹಾಗಂತ ಸುಮ್ನೆ ಗೆದ್ರಾ.. ಇಲ್ಲ ಡೆಲ್ಲಿ ಟೀಂ ಮೇಲೇಳೋಕೂ ಬಿಡದೆ ಬಗ್ಗು ಬಡಿದಿದ್ದಾರೆ. ಬೌಲಿಂಗ್ ಅಂತೂಈ ಎಕ್ಸ್ಟ್ರಾರ್ಡಿನರಿ.
ಇದನ್ನೂ ಓದಿ : ಫೀಲ್ಡಿಂಗ್ಗೆ ಅಡ್ಡಿಪಡಿಸಿದ್ದಕ್ಕೆ ಅಂಗ್ಕ್ರಿಶ್ ರಘುವಂಶಿ ಔಟ್- ಕೆಕೆಆರ್ ಆಟಗಾರನಿಗೆ ದಂಡದ ಜೊತೆಗೆ ಡಿಮೆರಿಟ್ ಪಾಯಿಂಟ್
ಲಾಸ್ಟ್ ಮ್ಯಾಚ್ ನಲ್ಲಿ ಡೆಲ್ಲಿ ಟೀಂ ಪಂಜಾಬ್ ವಿರುದ್ಧ 264 ರನ್ಸ್ ಹೊಡೆದಿದ್ರು. ಬಟ್ ಅದನ್ನ ಡಿಫೆಂಡ್ ಮಾಡಿಕೊಳ್ಳೋಕೆ ಆಗಿರ್ಲಿಲ್ಲ. ಸೋಲಬೇಕಾಯ್ತು. ಆದ್ರೆ ಈ ಸಲ ಬೆಂಗಳೂರ್ ಬೌಲರ್ಸ್ ಬಿಗ್ ಸ್ಕೋರ್ ಇರ್ಲಿ ಪವರ್ ಪ್ಲೇ ನಲ್ಲೇ ಅಲೌಟ್ ಆಗ್ತಾರೇನೋ ಅನ್ನೋ ಭಯ ಹುಟ್ಟಿಸಿದ್ರು. ಸಿಂಪಲ್ ಟಾರ್ಗೆಟ್ ಸೆಟ್ ಮಾಡಿ ಅಷ್ಟೇ ಈಸಿಯಾಗಿ ಗೆದ್ದು ಬೀಗಿದ್ರು.
ಆರ್ ಸಿಬಿ ಅಬ್ಬರಕ್ಕೆ ಡೆಲ್ಲಿ ತತ್ತರ!
ಟಾಸ್ ಗೆದ್ದು ಫಸ್ಟ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು
ಫಸ್ಟ್ ಓವರ್ ನಲ್ಲೇ ಯಂಗ್ ಬ್ಯಾಟರ್ ಸಾಹಿಲ್ ವಿಕೆಟ್ ತೆಗೆದ ಭುವಿ
2 ನೇ ಓವರ್ ನಲ್ಲಿ ಫಸ್ಟ್, ಸೆಕೆಂಡ್ ಬಾಲ್ ನಲ್ಲಿ ಜೋಶ್ ವಿಕೆಟ್
ಪವರ್ ಪ್ಲೇ ನಲ್ಲೇ ತಲಾ 3 ವಿಕೆಟ್ ತೆಗೆದ ಭುವಿ & ಜೋಶ್
ಡೆಲ್ಲಿ ಪರ ಟಾಪ್ 6 ಬ್ಯಾಟರ್ಸ್ 4 ಓವರ್ ಗಳಲ್ಲೇ ಒಂದಂಕಿಗೆ ಔಟ್
ಭುವನೇಶ್ವರ್ 5 ರನ್ ನೀಡಿ 3 ವಿಕೆಟ್, ಜೋಶ್ 12 ರನ್ ನೀಡಿ 4 ವಿಕೆಟ್
16.3 ಓವರ್ ನಲ್ಲೇ 75 ರನ್ ಗಳಿಗೆ ಆಲೌಟ್, ಈಸಿ ಚೇಸಿಂಗ್
6.3 ಓವರ್ ಗಳಲ್ಲೇ ಟಾರ್ಗೆಟ್ ರೀಚ್.. ಪಡಿಕ್ಕಲ್ 34(13) ರನ್ಸ್
ಹೀಗೆ ಎಲ್ಲಿಯೂ ಕೂಡ ಆರ್ಸಿಬಿಗೆ ಕಷ್ಟ ಅನ್ನಿಸೋ ಸಿಚುಯೇಷನ್ ಬರ್ಲೇ ಇಲ್ಲ. ಆರಂಭದಲ್ಲಿ ಡೆಲ್ಲಿ ವಿಕೆಟ್ಸ್ ಬೀಳ್ತಿದ್ದಾಗ ಐಪಿಎಲ್ನಲ್ಲಿ ಲೋಯೆಸ್ಟ್ ಸ್ಕೋರ್ ಆಲೌಟ್ ಆಗ್ಬೋದು ಅನ್ನಿಸ್ತಿತ್ತು. ಆದ್ರೆ ಅಭಿಷೇಕ್ ಪೊರೆಲ್ ಮತ್ತು ಡೇವಿಡ್ ಮಿಲ್ಲರ್ 50ರ ಗಡಿ ದಾಟಿಸಿದ್ರು. ಒಟ್ನಲ್ಲಿ ಆರ್ ಸಿಬಿ ಈ ಸಲ ಪ್ಲೇಆಫ್ ಹೊಸ್ತಿಲಲ್ಲೇ ಇದೆ. ಟಾಪ್ 2 ಟಾರ್ಗೆಟ್ನಲ್ಲಿರೋ ಬೆಂಗಳೂರು ಲೀಗ್ ಹಂತದಲ್ಲಿ ಇನ್ನು 6 ಪಂದ್ಯಗಳಲನ್ನು ಆಡಲಿದೆ. ಸದ್ಯ 12 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಸೆಕೆಂಡ್ ಪ್ಲೇಸ್ ನಲ್ಲಿದ್ದಾರೆ.

ನೋಡಿರಿ

