ಹೆಣ್ಮಕ್ಕಳ ಬಾಯಿಯಲ್ಲಿ ಗುಟ್ಟು ನಿಲ್ಲೋದಿಲ್ಲಾ ಯಾಕೆ ಗೊತ್ತಾ? – ಮಹಾಭಾರತದ ಈ ಶಾಪವೇ ಅದ್ದಕ್ಕೆ ಕಾರಣ!

ಹೆಣ್ಮಕ್ಕಳ ಬಾಯಿಯಲ್ಲಿ ಗುಟ್ಟು ನಿಲ್ಲೋದಿಲ್ಲಾ ಯಾಕೆ ಗೊತ್ತಾ? –  ಮಹಾಭಾರತದ ಈ ಶಾಪವೇ ಅದ್ದಕ್ಕೆ ಕಾರಣ!

ಹೆಣ್ಮಕ್ಕಳ ಬಾಯಿಯಲ್ಲಿ ಗುಟ್ಟು ಹೆಚ್ಚೆ ಕಾಲ ನಿಲ್ಲೋದಿಲ್ಲ.  ಯಾರಿಗೂ ಈ ಸತ್ಯವನ್ನ ಹೇಳಬೇಡಿ ಅಂದ್ರೆ, ಅದ್ದನ್ನ ಊರಿಗೆಲ್ಲಾ ಹೇಳ್ತಾರೆ. ಆದ್ರೆ ಇದ್ದಕ್ಕೆ ಕಾರಣ  ಮಹಾಭಾರತ. ಕುಂತಿ ಮಾಡಿದ ತಪ್ಪಿನಿಂದಾಗಿ ಯುಧಿಷ್ಠಿರನು ಕೇವಲ ಕುಂತಿಗೆ ಮಾತ್ರವಲ್ಲ, ಸಂಪೂರ್ಣ ಸ್ತ್ರೀ ಕುಲಕ್ಕೆ ಘೋರವಾದ ಶಾಪವನ್ನು ನೀಡಿದ್ದಾನೆ. ಧರ್ಮರಾಜನಾದ ಯುಧಿಷ್ಠಿರನು ಸ್ತ್ರೀ ಕುಲಕ್ಕೆ ನೀಡಿದ ಶಾಪವಾದರೂ ಏನು ಯಾಕೆ ಅನ್ನೋದ್ದನ್ನ ನೋಡೋಣ.

ಮಹಾಭಾರತ ಯುದ್ಧದ ಸಮಯದಲ್ಲಿ ಅರ್ಜುನನು ಕರ್ಣನನ್ನು ಕೊಂದಾಗ, ಕುಂತಿ ಅವನ ದೇಹವನ್ನು ನೋಡಿದ ನಂತರ ತಾಯಿಯಾಗಿ ಮಗನ ಸಾವನ್ನು ನೋಡಿ ಸುಮ್ಮನಿರಲು ಸಾಧ್ಯವಾಗಲಿಲ್ಲ. ಕುಂತಿ ಕರ್ಣನ ಮೃತ ದೇಹವನ್ನು ನೋಡುತ್ತಿದ್ದಂತೆ ಜೋರಾಗಿ ಅಳುತ್ತಾ ಓಡಿ ಬಂದು ಅವನ ದೇಹವನ್ನು ತಬ್ಬಿಕೊಂಡು ಗೋಗರೆದಳು. ಕುಂತಿ ಪುತ್ರರು ತಮ್ಮ ತಾಯಿ ಕುಂತಿಯ ದುಃಖಕ್ಕೆ ಹೆಗಲಾಗುವ ಬದಲು ಆಶ್ಚರ್ಯಕ್ಕೆ ಒಳಗಾದರು. ನಮ್ಮ ತಾಯಿ ಯಾಕೆ ಹೀಗೆಲ್ಲಾ ವರ್ತಿಸುತ್ತಿದ್ದಾರೆ ಎಂಬುದು ಅವರಿಗೆ ತಿಳಿಯದೇ ಹೋಯಿತು. ಏಕೆಂದರೆ ಕರ್ಣ ಇವರಿಗೆ ಶತ್ರುವಾಗಿದ್ದ. ಶತ್ರು ಮರಣ ಹೊಂದಿದ ತಕ್ಷಣ ನಮ್ಮ ತಾಯಿ ಯಾಕೆ ಅಳುತ್ತಿದ್ದಾಳೆ ಎಂದು ಯೋಚಿಸಲಾರಂಭಿಸಿದರು. ನಂತರ ಪಾಂಡುವಿನ ಮಗ ತಾಯಿ ಕುಂತಿಯನ್ನು ಕುರಿತು ನಮ್ಮ ಶತ್ರು ಕರ್ಣನ ದೇಹವನ್ನು ನೋಡಿ ಇಷ್ಟೊಂದು ಅಳಲು ಕಾರಣವೇನೆಂದು ಕೇಳುತ್ತಾನೆ

ಬಳಿಕ ಕುಂತಿಯು ತನ್ನ ಒಡಲೊಳಗಿನ ಸತ್ಯವನ್ನು ನುಂಗಿಕೊಳ್ಳಲಾಗದೆ ಪಾಂಡು ಪುತ್ರರಿಗೆ ಕರ್ಣ ನಿಮ್ಮ ಶತ್ರುವಲ್ಲ, ಕರ್ಣ ನಿಮ್ಮೆಲ್ಲರ ಸಹೋದರ ಎನ್ನುವ ಕಟುವಾದ ಸತ್ಯವನ್ನು ಹೇಳುತ್ತಾಳೆ. ತನಗೆ ಮದುವೆಯಾಗುವ ಮೊದಲೇ ಓರ್ವ ಮಗನಿದ್ದ. ಆತನೇ ಈ ಕರ್ಣ ಎಂದು ಹೇಳುತ್ತಾಳೆ. ದುರ್ವಾಸ ಮುನಿಗಳಿಂದ ಮಂತ್ರವನ್ನು ಪಡೆದುಕೊಂಡು ಕರ್ಣನಿಗೆ ಜನ್ಮ ನೀಡಿರುವ ವಿಚಾರವನ್ನು ತಿಳಿಸುತ್ತಾಳೆ.

ತಾಯಿ ಕುಂತಿಯಿಂದ ಇದನ್ನು ಕೇಳಿದ ಧರ್ಮರಾಜ ಯುಧಿಷ್ಠಿರನಿಗೆ ತನ್ನ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ನಮ್ಮ ಮತ್ತು ಕರ್ಣನ ತಾಯಿಯಾಗಿ ಈ ಸತ್ಯವನ್ನು ನಮ್ಮಿಂದ ಮರೆಮಾಚಿದ್ದರಿಂದ ನಾವು ಸಹೋದರನನ್ನೇ ಕೊಂದ ಕಳಂಕಕ್ಕೆ ಒಳಗಾಗಿದ್ದೇವೆ ಎಂದು ಕೋಪವನ್ನು ಹೊರಹಾಕುತ್ತಾನೆ. ಈ ಸಮಯದಲ್ಲಿ ಯುಧಿಷ್ಠಿರನು ತಮ್ಮ ತಾಯಿ ಕುಂತಿ ಮಾಡಿದ ತಪ್ಪಿಗೆ ಬ್ರಹ್ಮಾಂಡದ ಸ್ತ್ರೀಕುಲವನ್ನೇ ಶಪಿಸುತ್ತಾನೆ. ಯುಧಿಷ್ಠಿರನು ಮಹಿಳೆಯರು ಇಂದಿನಿಂದ ತಮ್ಮ ಮನಸ್ಸಿನಲ್ಲಿ ಯಾವುದೇ ವಿಚಾರವನ್ನು ಬಚ್ಚಿಟ್ಟುಕೊಳ್ಳದಂತಾಗಲಿ ಎಂದು ಶಪಿಸುತ್ತಾನೆ. ಅಂದಿನಿಂದ ಬ್ರಹ್ಮಾಂಡದ ಯಾವುದೇ ಮಹಿಳೆಗೆ ರಹಸ್ಯವನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.

Kishor KV