20 ಸಾವಿರ ಹಣಕ್ಕೆ ಅಕ್ಕನ ಅಸ್ಥಿಪಂಜರವನ್ನೇ ಬ್ಯಾಂಕ್ಗೆ ಹೊತ್ತು ತಂದ ತಮ್ಮ!

ಮೃತಪಟ್ಟವರ ಖಾತೆಯಲ್ಲಿದ್ದ ಹಣವನ್ನು ನೀವು ಪಡೆಯಬೇಕೆಂದರೆ ಅದಕ್ಕೆ ಅಗತ್ಯವಾದ ದಾಖಲೆಗಳನ್ನು ನೀವು ನೀಡಬೇಕಾಗುತ್ತದೆ. ವಿಶೇಷವಾಗಿ ಮರಣಪತ್ರವನ್ನು ನೀವು ನೀಡಬೇಕು. ಆದರೆ ಇದರ ಅರಿವಿಲ್ಲದ ವ್ಯಕ್ತಿಯೊಬ್ಬರು ತಮ್ಮ ಮೃತಪಟ್ಟ ಸೋದರಿಯ ಖಾತೆಯಲ್ಲಿದ್ದ 20 ಸಾವಿರ ರೂಪಾಯಿ ಹಣವನ್ನು ಬಿಡಿಸಿಕೊಳ್ಳುವುದಕ್ಕೆ ಬ್ಯಾಂಕ್ಗೆ ಹೋಗಿದ್ದಾರೆ. ಆದ್ರೆ ಅಲ್ಲಿ ಆಗಿದ್ದು ಸಮಾಜವೇ ತಲೆ ತಗ್ಗಿಸೋ ಘಟನೆ
ಆಗಿದ್ದೇನು?
ಒಡಿಶಾದಲ್ಲಿ ಆದಿವಾಸಿ ವ್ಯಕ್ತಿಯೊಬ್ಬರು ತಮ್ಮ ಸೋದರಿಯ ಖಾತೆಯಲ್ಲಿದ್ದ 20 ಸಾವಿರ ರೂಪಾಯಿ ಹಣವನ್ನು ವಾಪಸ್ ಪಡೆಯುವುದಕ್ಕೆ ಆಕೆಯ ಹೂತ್ತಿದ್ದ ಶವವನ್ನು ಹೊರತೆಗೆದು ಅಸ್ಥಿಪಂಜರವನ್ನೇ ಬ್ಯಾಂಕ್ಗೆ ತಂದಂತಹ ಆಘಾತಕಾರಿ ಘಟನೆ ನಡೆದಿದೆ. ಒಡಿಶಾದ ಕಿಯೊಂಝರ್ ಜಿಲ್ಲೆಯ ಪಟನಾ ಬ್ಲಾಕ್ನಲ್ಲಿರುವ ಮಲಿಪೊಸಿ ಪ್ರದೇಶದಲ್ಲಿ ಬರುವ ಒಡಿಶಾ ಗ್ರಾಮೀಣ ಬ್ಯಾಂಕ್ನಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಕಿ ಬಿಸಿಲಿಗೆ ಸಾಲು ಸಾಲು ಬಲಿ – ರಾಯಚೂರಿನಲ್ಲಿ ಕಾರ್ಮಿಕ ಸಾ*ವು!
ಹೀಗೆ ಸೋದರಿಯ ಅಸ್ಥಿಪಂಜರವನ್ನೇ ಬ್ಯಾಂಕ್ಗೆ ತಂದಂತಹ ವ್ಯಕ್ತಿಯನ್ನು 50 ವರ್ಷದ ಜೀತು ಮುಂಡ ಎಂದು ಗುರುತಿಸಲಾಗಿದೆ. ಈತ ಡಿಯನಲಿ ಗ್ರಾಮದ ನಿವಾಸಿಯಾಗಿದ್ದಾರೆ. 2 ತಿಂಗಳ ಹಿಂದೆ ಇವರ ಅಕ್ಕ 56 ವರ್ಷದ ಕರ್ಲಾ ಮುಂಡಾ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅದಕ್ಕೂ ಮೊದಲು ಅವರು ಜಾನುವಾರುಗಳನ್ನು ಮಾರಾಟ ಮಾಡಿದ್ದು, ಅವರಿಗೆ ಸ್ವಲ್ಪ ಹಣ ಸಿಕ್ಕಿತ್ತು. ಆ ಹಣವನ್ನು ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿ ಇರಿಸಿದ್ದರು. ಅವರಿಗೆ ಬೇರೆ ಯಾರು ಕಾನೂನುಬದ್ಧ ಉತ್ತರಾಧಿಕಾರಿ ಇಲ್ಲದೇ ಇರುವುದರಿಂದ ಸೋದರ ಜೀತು ಮುಂಡಾ ಅವರು ಬ್ಯಾಂಕ್ಗೆ ಹೋಗಿ ತನ್ನ ಸೋದರಿ ಕರ್ಲಾ ಮುಂಡಾ ಖಾತೆಯಲ್ಲಿರುವ ಹಣ ನೀಡುವಂತೆ ಕೇಳಿದ್ದಾರೆ. ಆದರೆ ಈ ಸಮಯದಲ್ಲಿ ಬ್ಯಾಂಕ್ ಅಧಿಕಾರಿಗಳು ತಮ್ಮ ಸೋದರಿಯ ಮರಣಪತ್ರ ಹಾಗೂ ಇತರ ಅಗತ್ಯ ದಾಖಲೆಗಳನ್ನು ನೀಡುವಂತೆ ಕೇಳಿದ್ದಾರೆ.
ಆದರೆ ಮುಂಡಾ ಅವರಿಗೆ ಹಣ ಡ್ರಾ ಮಾಡುವುದಕ್ಕೆ ಬೇಕಾದ ಅಗತ್ಯವಾದ ದಾಖಲೆಗಳನ್ನು ಪಡೆಯುವುದಕ್ಕೆ ಸರಿಯಾದ ದಾಖಲೆಗಳನ್ನು ಒದಗಿಸುವುದಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಸಹೋದರಿ ಹೂತ್ತಿಟ್ಟ ಶವವನ್ನು ಮತ್ತೆ ಬಗೆದು ಮೇಲೆತ್ತಿ ಅಸ್ಥಿಪಂಜರವನ್ನು ತೆಗೆದುಕೊಂಡು ಹೆಗಲಮೇಲೆ ಹೊತ್ತುಕೊಂಡು ಬ್ಯಾಂಕ್ಗೆ ಬಂದಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಅವರ ಬಳಿ ಪ್ರಶ್ನಿಸಿದಾಗ ಅವರು ಪ್ರತಿಕ್ರಿಯಿಸಿದ್ದು ಹೀಗೆ, ನಾನು ಸೋದರಿಯ ಖಾತೆಯಲ್ಲಿದ್ದ ಹಣ ಪಡೆಯುವುದಕ್ಕಾಗಿ ಹಲವು ಬಾರಿ ನಾನು ಬ್ಯಾಂಕ್ಗೆ ಭೇಟಿ ನೀಡಿದ್ದೆ. ಆದರೆ ಅಲ್ಲಿದ್ದ ಜನರು ಯಾರ ಹೆಸರಿನಲ್ಲಿ ಬ್ಯಾಂಕ್ ಖಾತೆ ಇದೆಯೋ ಹಣ ಡ್ರಾ ಮಾಡುವುದಕ್ಕೆ ಅವರನ್ನೇ ಕರೆದುಕೊಂಡು ಬರುವಂತೆ ಹೇಳಿದರು. ನಾನು ಆಕೆ ಸಾವನ್ನಪ್ಪಿದ್ದಾರೆ ಎಂದು ಹೇಳಿದರೂ ಅವರು ನನ್ನ ಮಾತು ಕೇಳುವುದಕ್ಕೆ ಸಿದ್ಧರಿರಲಿಲ್ಲ. ಹೀಗಾಗಿ ನಾನು ಹತಾಶೆಯಿಂದ ಆಕೆಯ ಸಮಾಧಿಯಿಂದ ಶವವನ್ನು ಹೊರ ತೆಗೆದು ಆಕೆ ಸತ್ತಿದ್ದಾಳೆ ಎಂದು ತೋರಿಸುವುದಕ್ಕೆ ಆಕೆಯ ಅಸ್ಥಿಪಂಜರನವನ್ನು ತೆಗೆದುಕೊಂಡು ಬಂದಿದ್ದೇನೆ ಇದೇ ಆಕೆ ಸಾವಿಗೀಡಾಗಿದ್ದಾಳೆ ಎಂಬುದಕ್ಕೆ ಇರುವ ಸಾಕ್ಷಿ ಎಂದು ಅನಕ್ಷರಸ್ಥನೂ ಆಗಿರುವ ಜಿತು ಮುಂಡಾ ಹೇಳಿದ್ದಾರೆ.

ನೋಡಿರಿ

