ಮುಂಬೈಗೆ ಗಾಯದ ಮೇಲೆ ಬರೆ – ಮಿಚೆಲ್ ಸ್ಯಾಂಟ್ನರ್ ಔಟ್, ಕೇಶವ್ ಮಹಾರಾಜ್ ಎಂಟ್ರಿ

ಐಪಿಎಲ್ 2026 ಮುಂಬೈ ಇಂಡಿಯನ್ಸ್ ಗೆ ಸೋಲಿನ ಮೇಲೆ ಸೋಲಿನ ಆಘಾತಕೊಟ್ಟ ಸೀಸನ್ ಆಗುತ್ತಿದೆ. ಈಗಾಗಲೇ ಮುಂಬೈ ಪಾಯಿಂಟ್ಸ್ ಟೇಬಲ್ನಲ್ಲಿ 9ನೇ ಸ್ಥಾನದಲ್ಲಿದೆ. ಇದರ ಮಧ್ಯೆ ಮತ್ತೊಂದು ಶಾಕ್ ಎದುರಾಗಿದೆ. ಮುಂಬೈ ತಂಡದಲ್ಲಿ ಪ್ರಮುಖ ಬೌಲರ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಇದನ್ನೂ ಓದಿ:ಡೆಲ್ಲಿನ ಗಿಲ್ಲಿ ತರ ಹೊಡೆದ ಆರ್ಸಿಬಿ ಬಾಯ್ಸ್ – ಬೌಲಿಂಗ್ನಲ್ಲಿ ಮಿಂಚಿದ ರಾಯಲ್ ಚಾಲೆಂಜರ್ಸ್
ಸತತ ಸೋಲುಗಳ ಸುಳಿಯಿಂದ ಹೊರಬರಲಾರದೇ ಮುಂಬೈ ಇಂಡಿಯನ್ಸ್ ತಂಡ ಒದ್ದಾಡುತ್ತಿದೆ. ಬಲಿಷ್ಠ ತಂಡವೊಂದು ಈ ಬಾರಿ ಗೆಲುವು ಕಾಣಲು ಪರದಾಡುತ್ತಿರುವುದು ಅಭಿಮಾನಿಗಳಿಗೂ ಕೂಡಾ ಬೇಸರ ತಂದಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕೆಂದರೆ ಮುಂಬೈ ತಂಡ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಇದರ ಮಧ್ಯೆ ಮತ್ತೊಂದು ಆಘಾತ ಎದುರಾಗಿದೆ. ಎಡ ಭುಜದ ಗಾಯದಿಂದಾಗಿ ನ್ಯೂಜಿಲೆಂಡ್ ಸ್ಪಿನ್ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಇಡೀ ಐಪಿಎಲ್ ಟೂರ್ನಿಯಿಂದಲೇ ಹೊರಗೆ ಹೋಗಿದ್ದಾರೆ. ಮಿಚೆಲ್ ಸ್ಯಾಂಟ್ನರ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಬೌಂಡರಿಯ ಬಳಿ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಗಾಯಗೊಂಡಿದ್ದರು. ಇದೀಗ ಸ್ಯಾಂಟ್ನರ್ ಇಂಜುರಿಯಿಂದ ಬಳಲುತ್ತಿದ್ದು, ವಾಪಸ್ ಟೀಮ್ಗೆ ಎಂಟ್ರಿ ಕೊಡುವುದು ಅನುಮಾನ. ಹೀಗಾಗಿ ಮುಂಬೈ ಫ್ರಾಂಚೈಸಿ ಸ್ಯಾಂಟ್ನರ್ ಬದಲಿಯಾಗಿ ದಕ್ಷಿಣ ಆಫ್ರಿಕಾದ ಅನುಭವಿ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮಿಚೆಲ್ ಸ್ಯಾಂಟ್ನರ್ ಮುಂಬೈ ಇಂಡಿಯನ್ಸ್ನ ಸ್ಪಿನ್ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದರು.
ಮುಂಬೈ ತಂಡ ಸೇರಿಕೊಂಡ ಕೇಶವ್ ಮಹಾರಾಜ್ ದಕ್ಷಿಣ ಆಫ್ರಿಕಾದ ಅನುಭವಿ ಎಡಗೈ ಸ್ಪಿನ್ನ. ರ್ ಕೇಶವ್ ಮಹಾರಾಜ್ ಅವರನ್ನು 75 ಲಕ್ಷ ರೂಪಾಯಿಗೆ ಮುಂಬೈ ಖರೀದಿಸಿತ್ತು. ಕೇಶವ್ ಮಹಾರಾಜ್ 2024 ರಲ್ಲಿ ರಾಜಸ್ಥಾನ್ ಪರ ಗೆ ಕೇವಲ ಎರಡು ಪಂದ್ಯಗಳನ್ನು ಆಡಿದ್ದರು. ಈ ಬಾರಿಯ ಹರಾಜಿನಲ್ಲಿ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಇದೀಗ ಸ್ಯಾಂಟ್ನರ್ ಗಾಯದಿಂದಾಗಿ ಮಹಾರಾಜ್ಗೆ ಮುಂಬೈ ಪರ ಆಡುವ ಅವಕಾಶ ಸಿಕ್ಕಿದೆ.

ನೋಡಿರಿ

