ಡೆಲ್ಲಿನ ಗಿಲ್ಲಿ ತರ ಹೊಡೆದ ಆರ್ಸಿಬಿ ಬಾಯ್ಸ್ – ಬೌಲಿಂಗ್ನಲ್ಲಿ ಮಿಂಚಿದ ರಾಯಲ್ ಚಾಲೆಂಜರ್ಸ್

ಡೆಲ್ಲಿ ವಿರುದ್ಧ ತವರಿನಲ್ಲಿ ಆದ ಸೋಲಿನ ಸೇಡನ್ನ ಆರ್ಬಿಸಿ ಭರ್ಜರಿಯಾಗಿ ತೀರಿಸಿಕೊಂಡಿದೆ. ಭುವನೇಶ್ವರ್ ಕುಮಾರ್ ಹಾಗೂ ಜಾಶ್ ಹೇಝಲ್ವುಡ್ ಅವರ ಭರ್ಜರಿ ಬೌಲಿಂಗ್ ಡೆಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ವಿಕೆಟ್ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 6ನೇ ಗೆಲುವು ಪಡೆದ ರಜತ್ ಪಾಟಿದಾರ್ ನಾಯಕತ್ವದ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿ ಉಳಿದರೂ ತನ್ನ ರನ್ರೇಟ್ (+1.919) ಅನ್ನು ಇನ್ನಷ್ಟು ಉತ್ತಮಪಡಿಸಿಕೊಂಡಿದೆ. ಆದರೆ, ಪಂಜಾಬ್ ಕಿಂಗ್ಸ್ ಎದುರು ಕಳೆದ ಪಂದ್ಯದಲ್ಲಿ ರನ್ ಹೊಳೆ ಹರಿಸಿದ್ದ ಡಿಸಿ, ಈ ಪಂದ್ಯದಲ್ಲಿ ಅಚ್ಚರಿ ರೀತಿಯಲ್ಲಿ ಬ್ಯಾಟಿಂಗ್ ಕುಸಿತ ಅನುಭವಿಸಿ ಹೀನಾಯ ಸೋಲು ಅನುಭವಿಸಿತು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಆರ್ಸಿಬಿ ಮೊದಲ ಬಾರಿ ಕಾದಾಟದಲ್ಲಿ ಸೋಲು ಅನುಭವಿಸಿತ್ತು. ಹಾಗಾಗಿ ಸೋಮವಾರ ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿನ ಉಭಯ ತಂಡಗಳ ನಡುವಣ ಪಂದ್ಯ ಹೈವೋಲ್ಟೇಜ್ನಿಂದ ಕೂಡಿರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಡೆಲ್ಲಿ ಬ್ಯಾಟಿಂಗ್ನಲ್ಲಿ ಕೇವಲ 75 ರನ್ಗಳಿಗೆ ಸರ್ವಪತನ ಕಂಡಿತು. ಬಳಿಕ ಸುಲಭ ಗುರಿಯನ್ನು ಹಿಂಬಾಲಿಸಿದ ಆರ್ಸಿಬಿ ಪರ ಜಾಕೋಬ್ ಬೆಥೆಲ್ (20 ರನ್) ಅಬ್ಬರಿಸಿ ಬೇಗ ವಿಕೆಟ್ ಒಪ್ಪಿಸಿದರು. ಆದರೆ, ಎರಡನೇ ವಿಕೆಟ್ಗೆ ಸ್ಪೋಟಕ ಬ್ಯಾಟ್ ಮಾಡಿದ ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ 22 ಎಸೆತಗಳಲ್ಲಿ 51 ರನ್ ಚಚ್ಚಿದರು. ಆ ಮೂಲಕ ಆರ್ಸಿಬಿ ತಂಡವನ್ನು 6.3 ಓವರ್ಗಳಲ್ಲಿಯೇ 77 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು.
ಇದನ್ನೂ ಓದಿ: ಬಾಬಾ ವಂಗಾ ಭವಿಷ್ಯ – ಮುಂದಿನ 8 ತಿಂಗಳು ಈ ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ !
ಅಬ್ಬರಿಸಿದ ದೇವದತ್ ಪಡಿಕ್ಕಲ್ ಕೇವಲ 13 ಎಸೆತಗಳಲ್ಲಿ3 ಸಿಕ್ಸರ್ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 34 ರನ್ ಸಿಡಿಸಿದರೆ, ವಿರಾಟ್ ಕೊಹ್ಲಿ 15 ಎಸೆತಗಳಲ್ಲಿ ಅಜೇಯ 23 ರನ್ ಗಳಿಸಿದರು. ಇನ್ನು ಈ ಪಂದ್ಯದಲ್ಲಿ 3.3 ಓವರ್ಗಳಿಗೆ 4 ವಿಕೆಟ್ ಸಾಧನೆ ಮಾಡಿದ ಜಾಶ್ ಹೇಝಲ್ವುಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಭುವನೇಶ್ವರ್ ಕುಮಾರ್ ಹಾಗೂ ಜಾಶ್ ಹೇಝಲ್ವುಡ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. ಆ ಮೂಲಕ 16.3 ಓವರ್ಗಳಿಗೆ ಕೇವಲ 75 ರನ್ಗಳಿಗೆ ಆಲ್ಔಟ್ ಆಯಿತು. ಆ ಮೂಲಕ ಎದುರಾಳಿ ಆರ್ಸಿಬಿಗೆ 76 ರನ್ಗಳ ಸುಲಭ ಗುರಿಯನ್ನು ನೀಡಿತು. ಇದೇ ಅಂಗಣದಲ್ಲಿ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 264 ರನ್ಗಳನ್ನು ದಾಖಲಿಸಿದ್ದ ಡೆಲ್ಲಿ ತಂಡ, ಇದೀಗ ಅಚ್ಚರಿ ರೀತಿಯಲ್ಲಿ ಸರ್ವಪತನವಾಯಿತು.

ನೋಡಿರಿ

