‌LPG ಬಳಕೆದಾರರಿಗೆ ಬಿಗ್‌ ಶಾಕ್!‌ – ಮೇ 1 ರಿಂದ ಹೊಸ ರೂಲ್ಸ್‌ ಜಾರಿ!

‌LPG ಬಳಕೆದಾರರಿಗೆ ಬಿಗ್‌ ಶಾಕ್!‌ – ಮೇ 1 ರಿಂದ ಹೊಸ ರೂಲ್ಸ್‌ ಜಾರಿ!

ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ದದ ಎಫೆಕ್ಟ್‌ ಹಲವು ದೇಶಗಳಿಗೆ ತಟ್ಟಿದೆ. ಭಾರದಲ್ಲೂ ಸಿಲಿಂಡರ್ ಸಿಗ್ತಿಲ್ಲ ಎಂಬ ಚಿಂತೆ ಜನರನ್ನ ಕಾಡ್ತಿದೆ. ಇದೀಗ ಎಲ್​ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಮೇ 1 ರಿಂದ ಹೊಸ ನಿಯಮ ಜಾರಿಯಾಗಲಿದೆ.

ಇದನ್ನೂ ಓದಿ: ಇರಾನ್ ಸರ್ಕಾರದ ಮಹತ್ವದ ಹೆಜ್ಜೆ – ಹಾರ್ಮುಜ್ ಜಲಸಂಧಿ ಪುನಃ ತೆರೆಯುವುದ್ದಕ್ಕೆ ಒಪ್ಪಂದ

ಹೆಚ್ಚುತ್ತಿರುವ ಯುದ್ಧದ ಭೀತಿ ಮತ್ತು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಭಾರತದಲ್ಲಿ ಅಡುಗೆ ಅನಿಲ ಬಳಕೆಯ ನಿಯಮಗಳಲ್ಲಿ ದೊಡ್ಡ ಬದಲಾವಣೆಗಳಾಗುತ್ತಿವೆ. ಪೆಟ್ರೋಲಿಯಂ ಕಂಪನಿಗಳಾದ ಇಂಡೇನ್, ಭಾರತ್ ಗ್ಯಾಸ್ ಮತ್ತು ಹೆಚ್‌ಪಿ ಗ್ಯಾಸ್‌ ಮೇ 1, 2026 ರಿಂದ ಜಾರಿಗೆ ಬರುವಂತೆ ಹೊಸ ಮಾರ್ಗಸೂಚಿ ಸಿದ್ಧಪಡಿಸಿವೆ.

ಸಿಲಿಂಡರ್ ಬುಕಿಂಗ್ ನಡುವೆ ಇರಬೇಕು ಗ್ಯಾಪ್

ಇನ್ನು ಮುಂದೆ ನಿಮಗೆ ಇಷ್ಟ ಬಂದಾಗ ಗ್ಯಾಸ್ ಬುಕ್ ಮಾಡಲು ಸಾಧ್ಯವಿಲ್ಲ. ಬುಕಿಂಗ್ ಅವಧಿಯ ಮೇಲೆ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರುತ್ತಿದೆ:

ನಗರ ಪ್ರದೇಶಗಳಲ್ಲಿ: ಎರಡು ಸಿಲಿಂಡ‌ರ್ ಬುಕಿಂಗ್ ನಡುವೆ ಕನಿಷ್ಠ 25 ದಿನಗಳ ಅಂತರವಿರಬೇಕು.

ಗ್ರಾಮೀಣ ಪ್ರದೇಶಗಳಲ್ಲಿ: ಎರಡು ರೀಫಿಲ್ ಬುಕಿಂಗ್ ನಡುವೆ 45 ದಿನಗಳ ಅಂತರವಿರಬೇಕು.

ದೊಡ್ಡ ಕುಟುಂಬಗಳಿಗೆ ಈ ನಿಯಮ ತುಸು ಸಂಕಷ್ಟ ತರಬಹುದು, ಹೀಗಾಗಿ ಗ್ಯಾಸ್ ಮಿತವಾಗಿ ಬಳಸುವಂತೆ ಸೂಚಿಸಲಾಗಿದೆ.

ಹೊಸ ಗ್ಯಾಸ್ ಕನೆಕ್ಷನ್ ಪಡೆಯುವಂತಿಲ್ಲ!

ದೇಶದಲ್ಲಿ ಎಲ್‌ಪಿಜಿ ಬೇಡಿಕೆ ಹೆಚ್ಚುತ್ತಿರುವುದರಿಂದ, ಪ್ರಸ್ತುತ ಇರುವ ಗ್ರಾಹಕರಿಗೆ ಸಮರ್ಪಕವಾಗಿ ಗ್ಯಾಸ್ ಪೂರೈಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಗ್ಯಾಸ್ ಕನೆಕ್ಷನ್ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕನಿಷ್ಠ ಒಂದು ತಿಂಗಳ ಕಾಲ ಯಾರಿಗೂ ಹೊಸ ಸಂಪರ್ಕ ಸಿಗಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ಒಟಿಪಿ ನೀಡಿದ್ರೆ ಮಾತ್ರ ಸಿಲಿಂಡರ್!

ಗ್ಯಾಸ್ ವಿತರಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಅಕ್ರಮಗಳನ್ನು ತಡೆಯಲು ಒಟಿಪಿ ಆಧಾರಿತ ವಿತರಣೆಯನ್ನು (DAC) ಕಡ್ಡಾಯಗೊಳಿಸಲಾಗಿದೆ. ಸಿಲಿಂಡರ್ ಮನೆಗೆ ಬಂದಾಗ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಕೋಡ್ ಅನ್ನು ವಿತರಣಾ ಸಿಬ್ಬಂದಿಗೆ ನೀಡಿದರೆ ಮಾತ್ರ ಸಿಲಿಂಡರ್ ಹಸ್ತಾಂತರಿಸಲಾಗುತ್ತದೆ.

ಬೆಲೆ ಏರಿಕೆ ಸಾಧ್ಯತೆ

ಪ್ರತಿ ತಿಂಗಳ ಮೊದಲ ದಿನದಂತೆ ಮೇ 1 ರಂದು ಕೂಡ ತೈಲ ಕಂಪನಿಗಳು ಗ್ಯಾಸ್ ದರವನ್ನು ಪರಿಷ್ಕರಿಸಲಿವೆ. ಚುನಾವಣೆಗಳು ಮುಗಿದ ಬೆನ್ನಲ್ಲೇ ಗ್ಯಾಸ್ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಕಳ್ಳಸಂತೆ ಮೇಲೆ ಹದ್ದಿನ ಕಣ್ಣು

Domestic ಸಿಲಿಂಡರ್‌ಗಳನ್ನು ಹೋಟೆಲ್ ಅಥವಾ ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಹೈದರಾಬಾದ್, ವಿಶಾಖಪಟ್ಟಣಂ ಸೇರಿದಂತೆ ಪ್ರಮುಖ ನಗರಗಳಲ್ಲಿ ಈಗಾಗಲೇ ದಾಳಿಗಳು ನಡೆಯುತ್ತಿದ್ದು, ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ಗ್ಯಾಸ್ ಸಿಲಿಂಡರ್ ಕೊರತೆ ಮತ್ತು ಬೆಲೆ ಏರಿಕೆಯಿಂದ ಪಾರಾಗಲು ಗ್ರಾಹಕರು ಪೈಪ್ ನ್ಯಾಚುರಲ್ ಗ್ಯಾಸ್ (PNG) ಅಥವಾ ವಿದ್ಯುತ್ ಒಲೆಗಳಂತಹ ಪರ್ಯಾಯ ಮಾರ್ಗಗಳನ್ನು ಬಳಸಲು ಯೋಚಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

Shwetha M