IPLನಲ್ಲಿ 200+ ರನ್ಸ್ ಲೆಕ್ಕಕ್ಕಿಲ್ಲ – ಬೌಲರ್ಸ್ ಕೊಲ್ಲುತ್ತಿದ್ಯಾ FLAT ಪಿಚ್?
ವಿದೇಶಗಳಲ್ಲಿ ಬ್ಯಾಕ್ ಫೈರ್ ಆಗುತ್ತಾ?

ಮೊದ್ಲೆಲ್ಲಾ ಐಪಿಎಲ್ನಲ್ಲಿ 180+ ರನ್ಸ್ ಇತ್ತು ಅಂದ್ರೆ ಚೇಸಿಂಗ್ ತಂಡಕ್ಕೆ ಮೋಸ್ಟ್ ಡಿಫಿಕಲ್ಟ್ ಟಾರ್ಗೆಟ್ ಅನ್ನಿಸ್ತಿತ್ತು. ಆದ್ರೆ ಈಗ 200+ ಟಾರ್ಗೆಟ್ ಲೆಕ್ಕಕ್ಕೇ ಇಲ್ಲ. 200 ಬಿಡಿ 250 ಕೊಟ್ರೂ ಚೇಸ್ ಮಾಡ್ತಾರೆ. ಹಾಗಾದ್ರೆ ಇದನ್ನ ಬ್ಯಾಟರ್ಗಳ ಆರ್ಭಟ ಅನ್ಬೇಕಾ ಅಥವಾ ಬೌಲರ್ಗಳ ಫೇಲ್ಯೂರ್ ಅನ್ಬೇಕಾ. ಅಥವಾ ಫ್ಲ್ಯಾಟ್ ಪಿಚ್ಗಳ ಎಫೆಕ್ಟ್ ಅನ್ಬೇಕಾ.. ಮಿಡಲ್ ಆಫ್ ದಿ ಟೂರ್ನಮೆಂಟ್ನಲ್ಲೇ ಈ ಆವೃತ್ತಿ ದಾಖಲೆ ಬರೆದಿದೆ. ಬ್ಯಾಟರ್ಗಳು ಧೂಳೆಬ್ಬಿಸ್ತಿರೋದು ಒಂದ್ಕಡೆ ವ್ಹಾವ್ ಅನ್ನಿಸ್ತಿದ್ರೂ ಭಾರತ ತಂಡಕ್ಕೆ ವಿದೇಶಗಳಲ್ಲಿ ಬ್ಯಾಕ್ ಫೈರ್ ಆಗೋ ಭಯವೂ ಇದೆ.
ಇದನ್ನೂ ಓದಿ : RCB ಪಂದ್ಯದಂದು ಚಿನ್ನಸ್ವಾಮಿಯಲ್ಲಿ 240ಕ್ಕೂ ಹೆಚ್ಚು ಸಿಸಿಟಿವಿ ಕೇಬಲ್ ಕಟ್! –ಮ್ಯಾಚ್ ವೇಳೆ ಆಗಿದ್ದೇನು?
19ನೇ ಸೀಸನ್ ಐಪಿಎಲ್ ಸದ್ಯ ರಣರೋಚಕ ಘಟ್ಟದಲ್ಲಿದ್ದೇವೆ. ರಿವೇಂಜ್ ಮ್ಯಾಚ್ಗಳು ಸ್ಟಾರ್ಟ್ ಆಗಿದ್ದು ಇನ್ನೇನಿದ್ರೂ ಪ್ಲೇಆಫ್ ಟಾರ್ಗೆಟ್ ಇಟ್ಕೊಂಡೇ ಪಂದ್ಯಗಳನ್ನ ಆಡ್ತಾರೆ. ಪ್ರತೀ ದಿನ ಪಾಯಿಂಟ್ಸ್ ಟೇಬಲ್ನಲ್ಲಿ ವೇರಿಯೇಷನ್ಸ್ ಆಗ್ತಾನೇ ಇರುತ್ತೆ. ಆದ್ರೆ ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಈ ಸೀಸನ್ ಒಂಥರಾ ಬ್ಯಾಟರ್ ಫ್ರೆಂಡ್ಲಿ ಸೀಸನ್ ಆಗ್ಬಿಟ್ಟಿದೆ. ಪಂದ್ಯದಿಂದ ಪಂದ್ಯಕ್ಕೆ ರನ್ ಸುನಾಮಿ ಎಬ್ಬಿಸ್ತಿದ್ದಾರೆ. ಸಿಕ್ಸ್ ಫೋರ್ ಗಳ ಸುರಿಮಳೆಯಾಗ್ತಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ 150, 160 ರನ್ಸ್ ಬಂತೂ ಅಂದ್ರೆ ಬೋರಿಂಗ್ ಅನ್ಸೋ ಥರ ಫೀಲ್ ಆಗ್ತಿದೆ. ಅದಕ್ಕೆ ಕಾರಣ ಕೆಲವರ ಅಗ್ರೆಸ್ಸಿವ್ ಬ್ಯಾಟಿಂಗ್ ಕೂಡ ಇರ್ಬೋದು. ಬಟ್ ಟಾರ್ಗೆಟ್, ಚೇಸೀಂಗ್ ಅಂತಾ ಬಂದಾಗ ಐಪಿಎಲ್ ಅನ್ನೋ ಲೀಗ್ ಬೇರೆಯದ್ದೇ ಸ್ವರೂಪ ಪಡ್ಕೊಳ್ತಿದೆ.
38 ಮ್ಯಾಚ್.. 18 ಸಲ 200+ ಟಾರ್ಗೆಟ್.. 8 ತಂಡಗಳ ಚೇಸಿಂಗ್!
ಏಪ್ರಿಲ್ 26ರ ವೇಳೆಗೆ ಐಪಿಎಲ್ನಲ್ಲಿ 38 ಪಂದ್ಯಗಳು ಕಂಪ್ಲೀಟ್ ಆಗಿವೆ. ಬಟ್ ವಿಷ್ಯ ಅಂದ್ರೆ ಈ 38 ಪಂದ್ಯಗಳಲ್ಲಿ 200+ ರನ್ಗಳ ಟಾರ್ಗೆಟ್ಟೇ ಹೈಯೆಸ್ಟ್ ಇದೆ. ಅಂದ್ರೆ ಪಸ್ಟ್ ಬ್ಯಾಟಿಂಗ್ ಮಾಡಿದ ತಂಡಗಳು 200+ ರನ್ಸ್ಗಳನ್ನ ಸ್ಕೋರ್ ಮಾಡಿಯೇ ಇದ್ದಾರೆ. ಌಂಡ್ 18 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 200+ ರನ್ಸ್ ಸ್ಕೋರ್ ಮಾಡಿದೆ. ಅದಕ್ಕಿಂತಲೂ ಇಂಟ್ರೆಸ್ಟಿಂಗ್ ಅಂದ್ರೆ 8 ತಂಡಗಳು ಅದನ್ನ ಯಶಸ್ವಿಯಾಗಿ ಚೇಸ್ ಕೂಡ ಮಾಡಿದ್ದಾರೆ. ನೀವು 200ಕ್ಕಿಂತ ಜಾಸ್ತಿ ಹೊಡೆದ್ರೂ ಅದನ್ನ ನಾವು ಬೀಟ್ ಮಾಡ್ತೇವೆ ಅಂತಾ ಗೆದ್ದು ತೋರಿಸಿದ್ದಾರೆ. ಸೋ ಈ ಹೈಸ್ಕೋರ್ ಚೇಸಿಂಗ್ ನಲ್ಲಿ ಆರ್ಸಿಬಿ ಕೂಡ 3 ಸಲ ಚೇಸ್ ಮಾಡಿದೆ. ಌಂಡ್ ಇದೇ ಸೀಸನ್ನಲ್ಲಿ ಆಲ್ರೆಡಿ ಹೈಯೆಸ್ಟ್ ಎವರ್ ಚೇಸ್ ಕೂಡ ನೋಡಿದ್ದೇವೆ. ಕಳೆದ ಶನಿವಾರ ಪಂಜಾಬ್ ವರ್ಸಸ್ ಡೆಲ್ಲಿ ಮ್ಯಾಚಲ್ಲಿ. ಫಸ್ಟ್ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಟೀಂ 20 ಓವರ್ಗಳಲ್ಲಿ ಕೆಎಲ್ ರಾಹುಲ್ ಅವ್ರ 152 ರನ್ಗಳ ನೆರವಿನಿಂದ 264 ರನ್ಸ್ ಸ್ಕೋರ್ ಮಾಡಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡ 18.5 ಓವರ್ಗಳಲ್ಲೇ 4 ವಿಕೆಟ್ ನಷ್ಟಕ್ಕೆ 265 ರನ್ ಗಳಿಸೋ ಮೂಲಕ ಇನ್ನೂ 7 ಎಸೆತಗಳು ಬಾಕಿ ಇದ್ದಾಗ್ಲೇ ಪಂದ್ಯ ಗೆದ್ದು ಬೀಗಿದ್ರು. ಸೋ ಅಲ್ಲಿಗೆ ಇನ್ನೂ 20 ಎಕ್ಸ್ಟ್ರಾ ರನ್ಸ್ ಇದ್ರೂ ಹೊಡೀತಿವಿ ಅನ್ನೋ ಮೈಂಡ್ಸೆಟ್ನಲ್ಲಿ ಆಡಿದ್ರು. ಅಷ್ಟಕ್ಕೂ ಐಪಿಎಲ್ ಆರಂಭವಾದ ಮೊದಲ 15 ಸೀಸನ್ಗಳದ್ದೇ ಬೇರೆ ಲೆಕ್ಕ ಈ ಸೀಸನ್ದೇ ಮತ್ತೊಂದು ಲೆಕ್ಕ ಆಗಿದೆ.
ಹೈ ಸ್ಕೋರ್ ಲೆಕ್ಕಕ್ಕಿಲ್ಲ!
ವರ್ಷ 200+ ಯಶಸ್ವೀ ಚೇಸ್
2008-2022 15 ಬಾರಿ
2023 8 ಬಾರಿ
2024 6 ಬಾರಿ
2025 9 ಬಾರಿ
2026 8 ಬಾರಿ
ಈ ಸೀಸನ್ನಲ್ಲಿ ನಾವಿನ್ನೂ ಮಿಡಲ್ ಆಫ್ ದಿ ಟೂರ್ನಮೆಂಟ್ನಲ್ಲಿದ್ದೇವೆ. ಆಲ್ರೆಡಿ 8 ಬಾರಿ ಯಶಸ್ವಿಯಾಗಿ 200ಪ್ಲಸ್ ಸ್ಕೋರ್ ಚೇಸ್ ಮಾಡಿದ್ದಾರೆ. ಇನ್ನೂ ಅರ್ಧಕ್ಕರ್ಧ ಪಂದ್ಯಗಳಿದ್ದು ನೆಕ್ಸ್ಟ್ ಇನ್ನೂ ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಮಾಡ್ತಾರೆ. ಹೀಗಾಗಿ ಈ ಸಲ ಎಷ್ಟೇ ಬಿಗ್ ಟಾರ್ಗೆಟ್ ಅನ್ಕೊಂಡ್ರೂ ಅದನ್ನ ಡಿಫೆಂಡ್ ಮಾಡಿಕೊಳ್ಳೋದು ಅಷ್ಟು ಈಸಿ ಇಲ್ಲ. ಹೌದು ಈ ಹೈಸ್ಕೋರ್ ಮ್ಯಾಚ್ ನೋಡಿ ಅಭಿಮಾನಿಗಳೇನೋ ಎಂಜಾಯ್ ಮಾಡ್ತಿದ್ದಾರೆ. ಆದ್ರೆ ಇದ್ರ ಎಫೆಕ್ಟ್ ಬರೀ ಪಾಸಿಟಿವ್ ಅಷ್ಟೇ ಅಲ್ಲ ನೆಗೆಟಿವ್ ಕೂಡ ಇದೆ. ಇದೇ ಕಾರಣಕ್ಕೆ ಆರ್ಸಿಬಿಯ ಮೆಂಟರ್ ದಿನೇಶ್ ಕಾರ್ತಿಕ್ ಇನ್ ಹ್ಯೂಮನ್ ಬ್ಯಾಟಿಂಗ್ ಅಂದ್ರೆ ಅಮಾನವೀಯ ಬ್ಯಾಟಿಂಗ್ ಶೈಲಿ ಎಂದಿದ್ದಾರೆ. ಹಾಗೇ ಈಗಿನ ದಿನಗಳಲ್ಲಿ 220 ರನ್ಗಳನ್ನ ಕಲೆ ಹಾಕಿದ್ರೆ 180 ರನ್ಗಳಿಗೆ ಸಮ ಅನ್ನೋ ಮೂಲಕ ಬ್ಯಾಟಿಂಗ್ ಸ್ಟೈಲ್ ಬಗ್ಗೆ ಮಾತನಾಡಿದ್ದಾರೆ.
ಬ್ಯಾಟರ್ಸ್ ಮುಂದೆ ಬೌಲರ್ಸ್ ಡಮ್ಮಿ!
ಐಪಿಎಲ್ ನಲ್ಲಿ ಫ್ಲಾಟ್ ಪಿಚ್ ಗಳಿಂದ ಬ್ಯಾಟರ್ಸ್ ಗೆ ಅಡ್ವಾಂಟೇಜ್
ಸಿಕ್ಸ್, ಫೋರ್ ಗಳೇ ಹೆಚ್ಚಿರೋದ್ರಿಂದ ಬೌಲರ್ಸ್ ಕಾನ್ಫಿಡೆನ್ಸ್ ಗೆ ಎಫೆಕ್ಟ್
ಬ್ಯಾಟರ್ಸ್ ಆರ್ಭಟದ ಮುಂದೆ ಬೌಲರ್ ಗಳ ಪಾತ್ರ ಮರೆಯಾಗುತ್ತೆ
ಬ್ಯಾಟಿಂಗ್, ಬೌಲಿಂಗ್ ಈಕ್ವೆಲ್ ಇದ್ದಾಗ ಮಾತ್ರ ಕ್ರಿಕೆಟ್ ನೋಡಲು ಚೆಂದ
ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದ ಬ್ಯಾಟರ್ ಗಳ ಸಂಖ್ಯೆಯೂ ಜಾಸ್ತಿ
ವಿದೇಶಿ ಪಿಚ್ ಗಳಲ್ಲಿ ಬ್ಯಾಟಿಂಗ್ ಮಾಡುವಾಗ ಸಂಕಷ್ಟ ಎದುರಾಗಬಹುದು
ಸದ್ಯಕ್ಕೇನೋ 200+ ಸ್ಕೋರ್, ಬ್ಯಾಟರ್ಗಳ ಸೆಂಚುರಿ ಅಂತಾ ಎಂಜಾಯ್ ಮಾಡ್ತಿದ್ದೇವೆ ಹೌದು. ಬಟ್ ಅದ್ರಿಂದ ಮುಂದಿನ ದಿನಗಳಲ್ಲಿ ಎಫೆಕ್ಟ್ ಆಗೋದನ್ನೂ ಮರೆಯೋಕಾಗಲ್ಲ. ಬೌಲರ್ಗಳ ಡಾಮಿನೇಷನ್ ಕೂಡ ಬೇಕಾಗುತ್ತೆ. ಈ ಸೀಸನ್ನಲ್ಲೂ 150, 160, 170 ಪ್ಲಸ್ ಟಾರ್ಗೆಟ್ ಕೊಟ್ಟೂ ಡಿಫೆಂಡ್ ಮಾಡಿಕೊಂಡವ್ರು ಇದ್ದಾರೆ.

ನೋಡಿರಿ

