ರಸ್ತೆ ಬದಿ ಪಾನಿಪುರಿ ತಿಂದ ಬಾಲಕ ಸಾವು! – 18ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು!

ಪಾನಿಪುರಿ ಎಂದರೆ ಬಹಳಷ್ಟು ಜನರಿಗೆ ಇಷ್ಟ. ಅದರಲ್ಲೂ ರಸ್ತೆ ಬದಿಯಲ್ಲಿ ಸಿಗುವ ಪಾನಿಪುರಿ ರುಚಿ ಬೇರೆಯೇ ಇರುತ್ತದೆ. ಅದನ್ನೇ ಬಹುತೇಕರು ಇಷ್ಟಪಟ್ಟು ತಿನ್ನುತ್ತಾರೆ. ಇನ್ಮುಂದೆ ರಸ್ತೆ ಬದಿಯಲ್ಲಿ ಪಾನಿಪುರಿ ತಿನ್ನೋ ಮುನ್ನ ಎಚ್ಚರ.. ಇದೀಗ ಇಲ್ಲೊಂದು ಕಡೆ ಪಾನಿಪುರಿ ತಿಂದ ಬಳಿಕ ಬಾಲಕ ಸಾವನ್ನಪ್ಪಿದ್ದಾನೆ. 18ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಒಂದೇ ಸ್ಕೂಟರ್‌ನಲ್ಲಿ ಆರು ಅಪ್ರಾಪ್ತರ ರೈಡ್! – ಆಮೇಲೆ ಏನಾಯ್ತು?
ಈ ಘಟನೆ ಜಾರ್ಖಂಡ್‌ನ ಗಿರಿಧನ್ನಲ್ಲಿ ನಡೆದಿದೆ. ರಸ್ತೆ ಬದಿ ಮಾರಾಟ ಮಾಡುವ ಪಾನಿಪುರಿ ತಿಂದ ಪರಿಣಾಮ ಆರು ವರ್ಷದ ಹುಡುಗನೊಬ್ಬ ಸಾವನ್ನಪ್ಪಿದ್ದು, 18ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಾಹಿತಿ ಪ್ರಕಾರ, ಆಸ್ಪತ್ರೆಗೆ ದಾಖಲಾಗಿರುವ ಬಹುತೇಕರು ಶನಿವಾರ (ಏ.25) ರಾತ್ರಿ ಒಂದೇ ಅಂಗಡಿಯಲ್ಲಿ ಪಾನಿಪುರಿ ತಿಂದಿದ್ದಾರೆ. ನಂತರ ಇವರೆಲ್ಲರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಪಾನಿಪುರಿ ತಿಂದ ಜನರಲ್ಲಿ ಹೊಟ್ಟೆ ನೋವು, ಜಲಬಾಧೆ, ಡೈರಿಯಾ, ವಾಂತಿ-ಬೇಧಿ ಮೊದಲಾದ ಕಾಯಿಲೆಗಳು ಕಾಣಿಸಿಕೊಂಡಿದೆ. ಹೀಗಾಗಿ ಹತ್ತಿರದ ಸದಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ (ಏ.26) ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎನ್ನಲಾಗ್ತಿದೆ. ಹೀಗೆ ದಾಖಲಾದವರಲ್ಲಿ 6 ವರ್ಷದ ಹುಡುಗನೊಬ್ಬ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಬಾಲಕನ ಕುಟುಂಬಸ್ಥರ ಅಳಲು ಮುಗಿಲು ಮುಟ್ಟಿದೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸದಾರ್ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಬಚಾಚಾ ಪ್ರಸಾದ್ ಸಿಂಗ್, ನಿನ್ನೆ (ಭಾನುವಾರ) ದಾಖಲಾದವರಲ್ಲಿ ಒಬ್ಬ ಹುಡುಗ ಮೃತ ಪಟ್ಟಿದ್ದಾನೆ. ಉಳಿದವರು ಚೇತರಿಸಿ ಕೊಳ್ಳುತ್ತಿದ್ದು, ಇವರೆಲ್ಲರು ಫುಡ್ ಪಾಯಿಸನ್ನಿಂದ ಬಳಲುತ್ತಿರುವುದು ಮೆಲ್ನೋಟಕ್ಕೆ ಕಂಡು ಬರುತ್ತಿದೆ. ನಾನು ಪ್ರತಿಯೊಬ್ಬ ರೋಗಿಯ ಮೇಲೆ ನಿಗಾವಹಿಸಿದ್ದೆವೆ ಎಂದು ಸಿಂಗ್ ತಿಳಿಸಿದ್ದಾರೆ.
ಬಾಲಕನ ಸಾವಿನ ನಂತರ ಪ್ರಕರಣ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ತರುವಾಯ, ಪೊಲೀಸರು ಸ್ವಯಂ ದೂರನ್ನು ದಾಖಲಿಸಿಕೊಂಡಿದ್ದಾರೆ. ಇನ್ನು ಪಾನಿಪುರಿ ಅಂಗಡಿ ಮಾಲೀಕ ಪಾಲ್ಮೊ ಎಂಬಾತ ಎಸ್ಕೇಪ್ ಆಗಿದ್ದು, ಆತನಿಗಾಗಿ ಹುಡುಕಾಟ ಮುಂದುವರೆದಿದೆ. ಕೆಲವೇ ದಿನಗಳಲ್ಲಿ ಅವನನ್ನು ಹುಡುಕಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ.

ನೋಡಿರಿ

