ಫೀಲ್ಡಿಂಗ್ಗೆ ಅಡ್ಡಿಪಡಿಸಿದ್ದಕ್ಕೆ ಅಂಗ್ಕ್ರಿಶ್ ರಘುವಂಶಿ ಔಟ್- ಕೆಕೆಆರ್ ಆಟಗಾರನಿಗೆ ದಂಡದ ಜೊತೆಗೆ ಡಿಮೆರಿಟ್ ಪಾಯಿಂಟ್

ಲಕ್ನೋ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಡುವಿನ ಪಂದ್ಯ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದೆ. ಕೆಕೆಆರ್ ತಂಡದ ಯಂಗ್ ಬ್ಯಾಟರ್ ಅಂಗ್ಕ್ರಿಶ್ ರಘುವಂಶಿ ಎದುರಾಳಿ ತಂಡದಿಂದ ಔಟಾಗದೇ, ಅಂಪೈರ್ ಮೂಲಕ ಔಟಾದ ಘಟನೆ ನಡೆದಿದೆ . ಅಂಗ್ಕ್ರಿಶ್ ರಘುವಂಶಿ ಅವರು ಫೀಲ್ಡಿಂಗ್ಗೆ ಅಡ್ಡಿಪಡಿಸಿದ ಕಾರಣಕ್ಕಾಗಿ ಅಂಪೈರ್ ತೀರ್ಮಾನದಂತೆ ಔಟ್ ಎಂದು ಘೋಷಿಸಲಾಗಿದೆ..
ಇದನ್ನೂ ಓದಿ:SUPER OVER ಅಲ್ಲ ಕಾಮಿಡಿ ಓವರ್ – ಸೋಲೋಕಂತಲೇ ಆಡ್ತಿದ್ದಾರಾ ಲಕ್ನೋ?
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟರ್ ಅಂಗ್ಕ್ರಿಶ್ ರಘುವಂಶಿ ಅವರು ಲಕ್ನೋ ವಿರುದ್ಧದ ಪಂದ್ಯದಲ್ಲಿ ವಿವಾದಾತ್ಮಕ ಔಟ್ಗೆ ಬಲಿಯಾಗಿದ್ದಾರೆ. ಪಂದ್ಯದ 5ನೇ ಓವರ್ನಲ್ಲಿ ರನ್ ಓಡುವಾಗ ರಘುವಂಶಿ ಅವರು ತಮ್ಮ ದಿಕ್ಕನ್ನು ಬದಲಿಸಿ ಫೀಲ್ಡರ್ ಎಸೆದ ಚೆಂಡಿಗೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಲಕ್ನೋ ತಂಡ ಅಪೀಲ್ ಮಾಡಿತ್ತು. ಮೂರನೇ ಅಂಪೈರ್ ಇದನ್ನು ಪರಿಶೀಲಿಸಿ ಔಟ್ ಎಂದು ತೀರ್ಪು ನೀಡಿದ್ದರು. ಐಪಿಎಲ್ ಇತಿಹಾಸದಲ್ಲಿ ‘ಫೀಲ್ಡಿಂಗ್ಗೆ ಅಡ್ಡಿಪಡಿಸಿದ’ ಕಾರಣಕ್ಕೆ ಔಟ್ ಆದ ನಾಲ್ಕನೇ ಆಟಗಾರ ಎಂಬ ಕುಖ್ಯಾತಿಗೆ ರಘುವಂಶಿ ಪಾತ್ರರಾದರು. ಅಂಪೈರ್ ತೀರ್ಪಿನಿಂದ ತೀವ್ರ ಅಸಮಾಧಾನಗೊಂಡ ರಘುವಂಶಿ, ಮೈದಾನದಿಂದ ಹೊರಹೋಗುವಾಗ ಬೌಂಡರಿ ಲೈನ್ನಲ್ಲಿದ್ದ ಕುಶನ್ಗಳನ್ನು ಬ್ಯಾಟ್ನಿಂದ ಜೋರಾಗಿ ಹೊಡೆದರು. ಅಷ್ಟೇ ಅಲ್ಲದೆ, ಡಗೌಟ್ ತಲುಪಿದ ನಂತರ ಸಿಟ್ಟಿನಿಂದ ತಮ್ಮ ಹೆಲ್ಮೆಟ್ ಅನ್ನು ಎಸೆದಿದ್ದರು. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ (ಕ್ರಿಕೆಟ್ ಉಪಕರಣಗಳು ಅಥವಾ ಮೈದಾನದ ವಸ್ತುಗಳ ದುರ್ಬಳಕೆ) ರಘುವಂಶಿ ಅವರ ಈ ವರ್ತನೆಯನ್ನು ‘ಲೆವೆಲ್ 1’ ಅಪರಾಧ ಎಂದು ಪರಿಗಣಿಸಲಾಗಿದೆ. ರಘುವಂಶಿ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಅಂಗೀಕರಿಸಿದ್ದಾರೆ.
ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಸಂಭಾವನೆಯಲ್ಲಿ ಶೇ. 20 ರಷ್ಟು ದಂಡ ವಿಧಿಸಲಾಗಿದೆ. ಇದರೊಂದಿಗೆ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ. ಅಂಗ್ಕ್ರಿಶ್ ರಘುವಂಶಿ ಅವರಿಗೆ ಕೆಕೆಆರ್ 3 ಕೋಟಿ ರೂ. ಸಂಭಾವನೆ ನೀಡುತ್ತಿದೆ. ಅದರಂತೆ ಲೀಗ್ ಹಂತದ ಪ್ರತಿ ಪಂದ್ಯಕ್ಕೆ ಅವರ ಪಡೆಯುತ್ತಿರುವ ಶುಲ್ಕ 21,42857. ಈ ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ಕಟ್ಟಬೇಕಾಗುತ್ತದೆ. ಅದರಂತೆ ಅಂಗ್ಕ್ರಿಶ್ ರಘುವಂಶಿ 4.28 ಲಕ್ಷ ರೂ. ದಂಡ ಪಾವತಿಸಬೇಕು.

ನೋಡಿರಿ

