ಒಂದೇ ಸ್ಕೂಟರ್‌ನಲ್ಲಿ ಆರು ಅಪ್ರಾಪ್ತರ ರೈಡ್!‌ – ಆಮೇಲೆ ಏನಾಯ್ತು?

ಒಂದೇ ಸ್ಕೂಟರ್‌ನಲ್ಲಿ ಆರು ಅಪ್ರಾಪ್ತರ ರೈಡ್!‌ – ಆಮೇಲೆ ಏನಾಯ್ತು?

ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿದೆ. ಇದೀಗ ಮಕ್ಕಳನ್ನ ನೋಡಿಕೊಳ್ಳುವುದೇ ಪೋಷಕರಿಗೆ ದೊಡ್ಡ ಸವಾಲಾಗಿದೆ. ಇನ್ನು ಬೆಂಗಳೂರಿನಲ್ಲಂತೂ ತಂದೆ – ತಾಯಿ ಇಬ್ಬರು ಕೆಲಸಕ್ಕೆ ಹೋಗುತ್ತಾರೆ. ಮಕ್ಕಳು ಆಡಿದ್ದೇ ಆಟ ಅನ್ನುವಂತಾಗಿದೆ. ಇದೀಗ ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತರು ಸವಾರಿ ಮಾಡಿದ್ದು, ಇದ್ರ ಫೋಟೋ, ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಇದನ್ನೂ ಓದಿ: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಕಾಲೇಜಿಗೆ ಶಾಕ್‌! – ಸರ್ಕಾರಿ ಪರೀಕ್ಷೆಗಳಿಂದ ಬ್ಲ್ಯಾಕ್‌ ಲಿಸ್ಟ್‌ಗೆ!

ಬೆಂಗಳೂರಿನ ಪಾದರಾಯನಪುರ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತರು ಸ್ಕೂಟರ್‌ನಲ್ಲಿ ಸವಾರಿ ಮಾಡುವುದನ್ನು ಬೈಕ್‌ ಸವಾರರೊಬ್ಬರು ಫೋಟೋ ಕ್ಲಿಕ್ಕಿಸಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಸ್ಕೂಟರ್‌ ನೀಡಿ ನಿರ್ಲಕ್ಷ್ಯ ಮೆರೆದ ಪೋಷಕರ ವಿರುದ್ಧ ಈಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಪ್ರಾಪ್ತರ ಕೈಗೆ ಬೈಕ್‌ ನೀಡಿ ನಿರ್ಲಕ್ಷ್ಯ ತೋರಿರುವ ಪೋಷಕರ ವಿರುದ್ಧ ಕ್ರಮಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಏ.26 ರಂದು ಬೆಳಿಗ್ಗೆ 10:45 ಕ್ಕೆ KA05-JZ-9065 ನೋಂದಣಿ ಸಂಖ್ಯೆಯ ಸ್ಕೂಟರ್‌ನಲ್ಲಿ ಪಾದರಾಯನಪುರ ಮುಖ್ಯ ರಸ್ತೆಯ ಗೌರಿಪಾಳ್ಯ ಬಳಿ ಇರುವ ಆಟೋ ಗ್ಯಾಸ್ ಎದುರು ಮಕ್ಕಳು ಸವಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Shwetha M