ಮಿಂಚಿದ ನರೈನ್- ರಿಂಕು.. ಸೂಪರ್ ಓವರ್‌ನಲ್ಲಿ KKR ಗೆಲುವಿನ ಕೇಕೆ! – ಅಂಕಪಟ್ಟಿಯಲ್ಲಿ LSGಗೆ ಕೊನೆ ಸ್ಥಾನ!

KKR ಹಾಗೂ LSG ನಡುವೆ ನಡೆದ ಪಂದ್ಯದಲ್ಲಿ KKR ರೋಚಕವಾಗಿ ಗೆದ್ದು ಬೀಗಿದೆ. ರಿಂಕು ಸಿಂಗ್ ಹಾಗೂ ಸುನೀಲ್ ನರೈನ್ ನೆರವಿನಿಂದ KKR ಸೂಪರ್ ಓವರ್‌ನಲ್ಲಿ ಗೆದ್ದು ಬೀಗಿದೆ. ಇದು ಲೀಗ್ನಲ್ಲಿ ಕೆಕೆಆರ್ಗೆ ಸಿಕ್ಕ 2ನೇ ಗೆಲುವಾಗಿದೆ. ಉಳಿದಿದೆ.
ಇದನ್ನೂ ಓದಿ: ಸಾಯಿ ಸುದರ್ಶನ್ ಕಮಾಲ್ ಆರ್ಭಟಕ್ಕೆ ಚೆನ್ನೈ ಧೂಳೀಪಟ! – ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ GT!
ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್‌ಗಳಿಸಿತ್ತು. 156 ರನ್ ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಲಖನೌ ತಂಡ ಕೂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್‌ಗಳಿಸಿ ಪಂದ್ಯವನ್ನ ಟೈ ಮಾಡಿಕೊಂಡಿರು. ಬಳಿಕ ಸೂಪರ್ ಓವರ್‌ನಲ್ಲಿ ನಿಕೊಲಸ್ ಪೂರನ್ ಮೊದಲ ಬಾಲ್‌ಗೆ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ರಿಷಬ್ ಪಂತ್ ಸಿಂಗಲ್ ತೆಗೆದುಕೊಂಡರು. ಐಡೆನ್ ಮಾರ್ಕ್ರಾಮ್ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿ ನಿರ್ಗಮಿಸಿದರು. ಸುನಿಲ್ ನರೈನ್ ಸೂಪರ್ ಓವರ್‌ನಲ್ಲೇ 2 ವಿಕೆಟ್ ಕಬಳಿಸಿ ಮಿಂಚಿದರು. ಲಕ್ನೋ ಕೇವಲ 1 ರನ್ ಅಷ್ಟೇ ಗಳಿಸಿತು. 2 ರನ್ ಟಾರ್ಗೆಟ್ ಪಡೆದು ಕಣಕ್ಕಿಳಿದ ಕೋಲ್ಕತ್ತಾ ಮೊದಲ ಬಾಲ್‌ನಲ್ಲೇ ರಿಂಕು ಸಿಂಗ್ ಫೋರ್‌ನಿಂದ ಗೆದ್ದು ಬೀಗಿತು.
ಗೆಲುವು ಅನಿವಾರ್ಯವಾಗಿದ್ದ ಪಂದ್ಯವನ್ನು ಲಕ್ನೋ ಕೈಚೆಲ್ಲಿದೆ. ಕೋಲ್ಕತ್ತಾ ನೀಡಿದ್ದ 155 ರನ್‌ಗಳ ಟಾರ್ಗೆಟ್ ಪೂರೈಸಲು ಕೂಡ ವಿಫಲವಾಗಿದೆ. ಐಡೆನ್ ಮಾರ್ಕ್ರಾಮ್ 31, ನಾಯಕ ರಿಷಬ್ ಪಂತ್ 42, ಆಯುಷ್ ಬದೋನಿ 24, ಹಿಮ್ಮತ್ ಸಿಂಗ್ 19 ಬಿಟ್ಟರೆ ಉಳಿದ ಆಟಗಾರರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಇದು ತಂಡದ ಸೋಲಿಗೆ ಕಾರಣವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಆರಂಭ ಚೆನ್ನಾಗಿರಲಿಲ್ಲ. ಸೂಪರ್ ಓವರ್ ವೇಳೆಗೆ 31 ರನ್ ಗಳಿಸುವಷ್ಟರಲ್ಲೇ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಟಿಮ್ ಶೆಫರ್ಡ್ ಶೂನ್ಯ ಸುತ್ತಿದರೆ, ಕ್ಯಾಪ್ಟನ್ ಅಜಿಂಕ್ಯ ರಹಾನೆ 10 ರನ್ ಗಳಿಸಿ ಔಟಾದರು. ಅಂಗ್‌ಕ್ರಿಷ್ ರಘುವಂಶಿ 9, ರೋಮನ್ ಪೋವೆಲ್ ಕೇವಲ 1 ರನ್ ಗಳಿಸಿ ಔಟಾದರು.
ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ಯಾಮರೂನ್ ಗ್ರೀನ್ ಮತ್ತು ರಿಂಗ್ ಸಿಂಗ್ ಉತ್ತಮ ಜೊತೆಯಾಟ ನೀಡಿದರು. 5ನೇ ವಿಕೆಟ್‌ಗೆ ಜೋಡಿ 42 ರನ್ ಗಳಿಸಿತು. ಗ್ರೀನ್ 34 ರನ್ ಗಳಿಸಿದರು. ರಿಂಕು ಸಿಂಗ್ 51 ಬಾಲ್‌ಗೆ 83 ರನ್ ಗಳಿಸಿ ತಂಡದ ಮೊತ್ತ 150 ರನ್ ಗಡಿ ದಾಟಲು ನೆರವಾದರು. ಈ ನಡುವೆ ಕೊನೆ ಓವರ್‌ನಲ್ಲಿ ರಿಂಕು ನಾಲ್ಕು ಸಿಕ್ಸರ್ ಸಿಡಿಸಿ ಗಮನ ಸೆಳೆದರು.
ಕೆಕೆಆರ್ ತಂಡವು ಸೂಪರ್ ಓವರ್ ಮೂಲಕ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಕೊನೆಯ ಸ್ಥಾನದಿಂದ 8ನೇ ಸ್ಥಾನಕ್ಕೇರಿತು. ಇನ್ನು ಸೋಲು ಕಂಡ ಲಕನೌ ತಂಡ ಎಂಟು ಪಂದ್ಯಗಳಿಂದ ಕೇವಲ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಕೆಕೆಆರ್ ಈಗ ಐದು ಅಂಕಗಳನ್ನು ಹೊಂದಿದ್ದು, ಎಂಟನೇ ಸ್ಥಾನಕ್ಕೆ ಏರಿದೆ.

ನೋಡಿರಿ

