ಸಾಯಿ ಸುದರ್ಶನ್ ಆರ್ಭಟಕ್ಕೆ ಚೆನ್ನೈ ಧೂಳೀಪಟ! – ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ GT!

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ನಡೆದ ಪಂದ್ಯದಲ್ಲಿ CSK ಸೋತಿದೆ. ಗುಜರಾತ್ 8 ವಿಕೆಟ್ಗಳ ಜಯ ಗಳಿಸಿದೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ನ್ಯೂಸ್! – ಇನ್ಮುಂದೆ 300 ರೂ.ಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್ ಸುಲಭವಾಗಿ ಪಡೆಯಬಹುದು!
ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 158 ರನ್ ಗಳಿಸಿತು. ತಂಡದ ಪರ ರುತುರಾಜ್ ಗಾಯಕ್ವಾಡ್ ಬಹಳ ನಿಧಾನವಾಗಿ ಬ್ಯಾಟಿಂಗ್ ಮಾಡಿ, 60 ಎಸೆತಗಳಲ್ಲಿ 74 ರನ್ ಗಳಿಸಿದರು. ಶಿವಂ ದುಬೆ 17 ಎಸೆತಗಳಲ್ಲಿ 1 ಸಿಕ್ಸರ್ 3 ಬೌಂಡರಿ ಸಿಡಿಸಿ 22 ರನ್ ಕಲೆ ಹಾಕಿದರು. ಜೇಮೀ ಓವರ್ಟನ್ 6 ಎಸೆತಗಳಲ್ಲಿ 1 ಸಿಕ್ಸರ್ 3 ಬೌಂಡರಿ ಸಿಡಿಸಿ 18 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಕಾರ್ತಿಕ್ ಶರ್ಮಾ 9 ಎಸೆತಗಳಲ್ಲಿ 15 ರನ್ಗಳನ್ನು ಕಲೆಹಾಕಿ ಔಟಾದರು.
ಗುಜರಾತ್ ಪರ ಮೊಹಮ್ಮದ್ ಸಿರಾಜ್, ಮಾನವ್ ಸುತಾರ್ ತಲಾ ಒಂದೊಂದು, ಕಗಿಸೊ ರಬಾಡ 3 ಹಾಗೂ ಅರ್ಷದ್ ಖಾನ್ 2 ವಿಕೆಟ್ ಉರುಳಿಸಿದರು. ಚೆನ್ನೈ ತಂಡ ನೀಡಿದ ಗುರಿಯನ್ನು ಬೆನ್ನಟ್ಟಿದ ಗುಜರಾತ್ 16.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 162 ರನ್ ಗಳಿಸುವ ಮೂಲಕ ಜಯಗಳಿಸಿತು. ತಂಡದ ಪರ ಸಾಯಿ ಸುದರ್ಶನ್ 46 ಎಸೆತಗಳಲ್ಲಿ 7 ಸಿಕ್ಸರ್ 4 ಬೌಂಡರಿ ಸಿಡಿಸಿ 87 ರನ್ ಗಳಿಸಿ ಔಟಾದರು. ಶುಭಮನ್ ಗಿಲ್ 23 ಎಸೆತಗಳಲ್ಲಿ 33 ರನ್ ಕಲೆ ಹಾಕಿ ಪೆವಿಲಿಯನ್ಗೆ ಮರಳಿದರು. ಜೋಸ್ ಬಟ್ಲರ್ 30 ಎಸೆತಗಳಲ್ಲಿ 39 ರನ್ ಗಳಿಸಿ ಔಟಾಗದೆ ಉಳಿದರು.

ನೋಡಿರಿ

