ಬಾಯಿ ಮುಚ್ಚಿಸಿದ KL – ರಾಹುಲ್ ವಿರಾಟ ರೂಪ

ಬ್ಯಾಟ್ ಎತ್ತಿದ್ರೆ ಸಿಕ್ಸ್, ಫೋರ್.. ಕಣ್ಣು ಮುಚ್ಚಿ ಬಿಡುವುದರಲ್ಲಿ ಸ್ಕೋರ್ ಕಾರ್ಡ್‌ನಲ್ಲಿ ರನ್‌ಗಳು ಡಬಲ್.. ಕೆಎಲ್ ರಾಹುಲ್ ಅಬ್ಬರಕ್ಕೆ ಪಂಜಾಬ್ ಕಿಂಗ್ಸ್ ಪಂಚರ್ ಆಗಿ ಹೋಗಿದೆ. ಈ ಸೀಸನ್‌ನಲ್ಲಿ ಇದುವರೆಗೂ ಒಂದು ಪಂದ್ಯವನ್ನು ಸೋಲದ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಓಪನರ್, ಕನ್ನಡಿಗ KL ರಾಹುಲ್ 150 ರನ್ ಬಾರಿಸಿದ್ದಾರೆ. ಆರಂಭದಿಂದಲೇ ಬ್ಯಾಟಿಂಗ್‌ನಲ್ಲಿ ರನ್‌ಗಳ ಕೊಳ್ಳೆ ಹೊಡೆದ ಕೆ.ಎಲ್ ರಾಹುಲ್ ಪಂಜಾಬ್ ಬೌಲರ್‌ಗಳಿಗೆ ನೀರೀಳಿಸಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿದರು. ಕೆ.ಎಲ್ ರಾಹುಲ್ ಈ ಮೂಲಕ ಐಪಿಎನ್‌ಲ್ಲಿ 6ನೇ ಶತಕ ಬಾರಿಸಿದ್ರು.
ಜೇಟ್ಲಿ ಕ್ರೀಡಾಂಗಣದಲ್ಲಿ ಬ್ಯಾಟಿಂಗ್‌ನಲ್ಲಿ ಅಕ್ಷರಶಃ ಅಬ್ಬರಿಸಿದ ಕೆ.ಎಲ್ ರಾಹುಲ್ ಅವರು ಪಂಜಾಬ್ ಬೌಲರ್‌ಗಳಿಗೆ ಬೆಂಡೆತ್ತಿದರು. ಪ್ರತಿ ಬಾಲ್ ಅನ್ನು ಸೂಕ್ಷ್ಮವಾಗಿ ಎದುರಿಸಿದ ರಾಹುಲ್ ಅವರು ತಂಡಕ್ಕೆ ದೊಡ್ಡ ಅಡಿಪಾಯವನ್ನು ಹಾಕಿದರು. ಟೀಕೆ ಮಾಡೋರಿಗೆ ತಮ್ಮ ತಾಕತ್ತು ತೋರಿಸಿದ್ರು..
ಕೆಎಲ್ ರಾಹುಲ್ ರಣರ್ಭಟ
ಎದುರಿಸಿದ ಬಾಲ್ –- 67
ರನ್ –- 152
ಸಿಕ್ಸ್ – 9
ಫೋರ್ – 16
ಸ್ಟೈಕ್ ರೇಟ್ – 226.87
ಓವರ್ –- 11.1
ಡಿಸಿ ಪರ ಆರಂಭಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಪಂಜಾಬ್ ಬೌಲರ್‌ಗಳನ್ನ ಬಗ್ಗು ಬಡಿದ್ರು. ಬೌಲರ್‌ಗಳು ಹೇಗ್ ಬೌಲಿಂಗ್ ಮಾಡಿದ್ರು ಅದ್ದನ್ನ ಕೆಎಲ್ ಬೌಂಡರಿಲೈನ್‌ನತ್ತ ಎತ್ತುತಿದ್ದರು.. ಕೆಎಲ್ ಪಂಜಾಬ್ ವಿರುದ್ಧ 62 ಬಾಲ್‌ಗಳನ್ನ ಎದುರಿಸಿ 152ರನ್‌ಗಳನ್ನ ಗಳಿಸಿದ್ದಾರೆ. ಇದರಲ್ಲಿ 9 ಸಿಕ್ಸ್ ಇದ್ರೆ, 16 ಫೋರ್‌ಗಳಿವೆ.. ಕೆಎಲ್ ರಾಹುಲ್ 226.87 ಸ್ಟೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಒಂದನೇ ಓವರ್‌ನಿಂದ 20ನೇ ಓವರ್ ತನಕ ಮೈದಾನದಲ್ಲಿದ್ದ ಕೆಎಲ್ 11.1 ಓವರ್ ಬ್ಯಾಟಿಂಗ್ ಮಾಡಿದ್ದಾರೆ. ಕ್ರಿಕೆಟ್ ಜಗತ್ತು ಓಮ್ಮೆ ತನ್ನ ಕಡೆ ತಿರುಗಿ ನೋಡುವಂತೆ ಅಬ್ಬರಿಸಿದ್ದಾರೆ. )
ಜೀವದಾನದ ಲಾಭ ಪಡೆದ ರಾಹುಲ್ ಕೆಎಲ್
ರಾಹುಲ್ ಅವರಿಗೆ ಪಂಜಾಬ್ ಕಿಂಗ್ಸ್ ಒಂದು ಜೀವದಾನ ನೀಡಿತು. ಅರ್ಷದೀಪ್ ಸಿಂಗ್ ಎಸೆತದಲ್ಲಿ ರಾಹುಲ್ ಡೀಪ್ ಸ್ಕ್ವೇರ್ ಲೆಗ್ ಬೌಂಡರಿ ಮೇಲೆ ಸಿಕ್ಸರ್ ಬಾರಿಸಲು ಮುಂದಾದರು. ಆದರೆ ಇದೇ ಕ್ಷೇತ್ರದಲ್ಲಿ ಫೀಲ್ಡ್ ಮಾಡುತ್ತಿದ್ದ ಶಶಾಂಕ್ ಸಿಂಗ್ ಸುಲಭವಾದ ಕ್ಯಾಚ್ ಕೈ ಚೆಲ್ಲಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ಮೊದಲ ಜೀವದಾನ ನೀಡಿತು. ಇನ್ನು ವಿಜಯ್‌ಕುಮಾರ್ ವೈಶಾಖ್ ಸಹ ತಮ್ಮದೇ ಬೌಲಿಂಗ್‌ನಲ್ಲಿ ಕಾಟ್ ಆಂಡ್ ಬೋಲ್ಡ್ ಅವಕಾಶವನ್ನು ಕೈ ಚೆಲ್ಲಿದರು. ಈ ಎರಡೂ ಅವಕಾಶವನ್ನು ಬಳಸಿಕೊಂಡ ರಾಹುಲ್ ಅಬ್ಬರಿಸಿದರು.
ರಾಹುಲ್ಗೆ ಆರೆಂಜ್ ಕ್ಯಾಪ್
ಈ ಶತಕದೊಂದಿಗೆ, ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಈ ಆವೃತ್ತಿಯ ಆರಂಭದಲ್ಲಿ ರಾಹುಲ್ ಎರಡು ಪಂದ್ಯಗಳಲ್ಲಿ ಕೇವಲ 1 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಆ ನಂತರ 92 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಫಾರ್ಮ್ ಕಂಡುಕೊಂಡಿದ್ದ ರಾಹುಲ್ ಈಗ ರನ್ ಸ್ಕೋರಿಂಗ್ ಪಟ್ಟಿಯಲ್ಲಿ ನಂ. 1 ಸ್ಥಾನಕ್ಕೇರಿದ್ದಾರೆ.
ಕ್ರಿಸ್ ಗೇಲ್‌ಗೆ ಸಮನಾದ ಕೆಎಲ್
ಅದ್ಭುತ ಬೌಂಡರಿ ಬಾರಿಸುವ ಮೂಲಕ ಕೆಎಲ್ ರಾಹುಲ್ ತಮ್ಮ ಶತಕ ಪೂರೈಸಿದರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸರಿಗಟ್ಟಿದರು. ಐಪಿಎಲ್‌ನಲ್ಲಿ ಕೆಎಲ್ ಅವರ ಬ್ಯಾಟ್‌ನಿಂದ ಇದು ಆರನೇ ಶತಕವಾಗಿದೆ. ಗೇಲ್ ಅವರ ಹೆಸರಿನಲ್ಲಿ ಅಷ್ಟೇ ಸಂಖ್ಯೆಯ ಐಪಿಎಲ್ ಶತಕಗಳಿವೆ. ಐಪಿಎಲ್‌ನಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ಶತಕ ಗಳಿಸಿದ ವಿರಾಟ್ ಕೊಹ್ಲಿ ದಾಖಲೆಯಿಂದ ಕೆಎಲ್ ಈಗ ಕೇವಲ 2 ಶತಕಗಳ ದೂರದಲ್ಲಿದ್ದಾರೆ.
150ಕ್ಕೂ ಹೆಚ್ಚು ರನ್‌ಗಳಿಸಿದ ಮೊದಲ ಭಾರತೀಯ ಆಟಗಾರ K.L
ಇನ್ನೂ ಇಲ್ಲಿ ತನಕ ಐಪಿಎಲ್‌ನಲ್ಲಿ ಯಾವುದೇ ಭಾರತೀಯ ಆಟಗಾರ 150ಕ್ಕೂ ಹೆಚ್ಚು ರನ್ ಭಾರಿಸಿರಲಿಲ್ಲ.. ಆದ್ರೆ ನಮ್ಮ ಕೆ ಎಲ್ ರಾಹುಲ್ ಈ ದಾಖಲೆ ಬರೆದಿದ್ದಾರೆ. ಅಭಿಷೇಕ್ ಶರ್ಮಾ 144 ರನ್‌ಗಳಿಸಿ ಮೊದಲ ಸ್ಥಾನದಲ್ಲಿದ್ದರು, ಆದ್ರೆ ಈ ದಾಖಲೆಯನ್ನ ಕೆಎಲ್ ಉಡೀಸ್ ಮಾಡಿದ್ದಾರೆ. ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಮತ್ತು ಬ್ರೆಂಡನ್ ಮೆಕಲಮ್ ನಂತ್ರ ಕೆಎಲ್ ರಾಹುಲ್ ಹೆಸರಿದೆ. ಐಪಿಎಲ್ 3ನೇ ಹೈಯೆಸ್ಟ್ ಸ್ಕೋರ್ ಇದು. ಇನ್ನೂ ಯಾರಾದ್ರೂ ಕೆಎಲ್ ರಾಹುಲ್ ಸ್ಲೋ ಅಂತ ಅಂದ್ಕೊಂಡಿದ್ರು, ಅದವರ ಹುಚ್ಚುತನ.. ಅವರಿಗೆ ಕ್ರಿಕೆಟ್ ಗೊತ್ತಿಲ್ಲ ಅಂತ ಅರ್ಥ.. ತಾನು ಏನು ಅನ್ನೋದ್ದನ್ನ ಕನ್ನಡಿಗ ಕೆಎಲ್ ರಾಹುಲ್ ಪ್ರೋವ್ ಮಾಡಿದ್ದಾರೆ.
ಇನ್ನೂ ತಮಾಷೆ ವಿಷ್ಯ ಅಂದ್ರೆ 2008ರಲ್ಲಿ ಐಪಿಎಲ್ ಶುರುವಿನ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ 158 ರನ್ ಹೊಡೆದಿದ್ರು. ಅದು ನಮ್ಮ ಚಿನ್ನಸ್ವಾಮಿ ಮೈದಾನದಲ್ಲಿ.. ಈ ಪಂದ್ಯವನ್ನ ನಮ್ಮ ಕೆಎಲ್ ರಾಹುಲ್ ಗ್ಯಾಲರಿಯಲ್ಲಿ ಕುಳಿತು ನೋಡುತ್ತಿದ್ದರು.. ಆ ಮ್ಯಾಚ್ ನೋಡಿದ ನಂತ್ರ ಅವರು ಸಿಕ್ಸ್ ಹೊಡೆಯುವುದ್ದಕ್ಕೆ ಕೆಎಲ್ ಪ್ರಾಕ್ಟೀಸ್ ಮಾಡಿದ್ರಂತೆ.. ಇವತ್ತು ಬ್ರೆಂಡನ್ ಮೆಕಲಮ್ ದಾಖಲೆಯ ಪಕ್ಕದಲ್ಲಿ ನಮ್ಮ ಕೆಎಲ್ ರಾಹುಲ್ ಹೆಸರಿದೆ.. ಇದು ನಮ್ಮ ಕನ್ನಡಿಗನ ತಾಕತ್ತು..

ನೋಡಿರಿ

