DC ಬೌಲರ್ ಲುಂಗಿ ಎನ್‌ಗಿಡಿ ಗಂಭೀರ ಗಾಯ – ಸ್ಟೇಡಿಯಂ ಒಳಗೆ ಬಂದ ಆಂಬ್ಯುಲೆನ್ಸ್. ಆಸ್ಪತ್ರೆಗೆ ಶಿಫ್ಟ್
ಲೈವ್ ಮ್ಯಾಚ್‌ನಲ್ಲೇ ಹೃದಯವಿದ್ರಾವಕ ಘಟನೆ

DC ಬೌಲರ್ ಲುಂಗಿ ಎನ್‌ಗಿಡಿ ಗಂಭೀರ ಗಾಯ – ಸ್ಟೇಡಿಯಂ ಒಳಗೆ ಬಂದ ಆಂಬ್ಯುಲೆನ್ಸ್. ಆಸ್ಪತ್ರೆಗೆ ಶಿಫ್ಟ್ಲೈವ್ ಮ್ಯಾಚ್‌ನಲ್ಲೇ ಹೃದಯವಿದ್ರಾವಕ ಘಟನೆ

ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಕಾದಾಟ ನಡೆಯುತ್ತಿದೆ. ಕನ್ನಡಿಗ ಹೆಮ್ಮೆಯ ಕ್ರಿಕೆಟಲ್ ಕೆ.ಯಎಲ್ ರಾಹುಲ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ ಡಿಸಿ 264 ರನ್ ಗಳಿಸಿದ ಉತ್ಸಾಹದಲ್ಲಿತ್ತು. ಪಂಜಾಬ್ ಆರಂಭಿಕರು ಬ್ಯಾಟಿಂಗ್ ಆರಂಭ ಮಾಡಿದ್ದರು. ಮೂರನೇ ಓವರ್‌ನಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ ಲುಂಗಿ ಎನ್‌ಗಿಡಿ ತಲೆಕೆಳಗಾಗಿ ಬಿದ್ದರು. ಹಾಗೆ ಬಿದ್ದವರು ಗಂಭೀರವಾಗಿ ಗಾಯಗೊಂಡರು.

ಇದನ್ನೂ ಓದಿ:ಪಂಜಾಬ್‌ನ ಪಂಚರ್ ಮಾಡಿದ ಕೆಎಲ್‌ ರಾಹುಲ್- 150 ರನ್‌ಗಳಿಸಿ ಮಿಂಚಿದ ಕನ್ನಡಿಗ K. L

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ತಲೆಗೆ ಪೆಟ್ಟು ಮಾಡಿಕೊಂಡ ಲುಂಗಿ ಎನ್‌ಗಿಡಿ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮೂರನೇ ಓವರ್‌ನಲ್ಲಿ ಪ್ರಿಯಾಂಶ್ ಆರ್ಯ ಅವರು ಹೊಡೆದ ಚೆಂಡನ್ನು ಡಿಸಿ ಬೌಲರ್ ಲುಂಗಿ ಎನ್‌ಗಿಡಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದರು. ಆದರೆ ಅನುಭವಿ ಆಟಗಾರ ಹಿಂದಕ್ಕೆ ಚಾಚಿ ತಲೆಯ ಮೇಲೆ ಬಿದ್ದಿದ್ದರಿಂದ ಕ್ಯಾಚ್ ಕೈತಪ್ಪಿತು. ಆದರೆ, ಲುಂಗಿ ಗಂಭೀರವಾಗಿ ಗಾಯಗೊಂಡರು. ಫಿಸಿಯೋ ಮತ್ತು ಸ್ಟ್ರೆಚರ್ ಮೈದಾನಕ್ಕೆ ಪ್ರವೇಶಿಸಿತು ಮತ್ತು ಶೀಘ್ರದಲ್ಲೇ ಆಂಬ್ಯುಲೆನ್ಸ್ ಕೂಡಾ ಕ್ರೀಡಾಂಗಣಕ್ಕೆ ಬಂದು ನಿಂತಿತು.

Sulekha