ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್! – ಇನ್ಮುಂದೆ 300 ರೂ.ಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್ ಸುಲಭವಾಗಿ ಪಡೆಯಬಹುದು!

ವಿಶ್ವಪ್ರಸಿದ್ಧ ತಿರುಪತಿ ಏಳುಕೊಂಡಲ ಶ್ರೀವಾರಿ ದೇವಸ್ಥಾನಕ್ಕೆ ಪ್ರತಿದಿನವೂ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ದೇವರ ದರ್ಶನ ಪಡೆಯಲು ಭಕ್ತರು ಹಲವು ಗಂಟೆಗಳ ಕಾಲ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಹೀಗಾಗಿ ಅನೇಕರು 300 ರೂ.ಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಇದೀಗ ಟಿಟಿಡಿ ಭಕ್ತರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಇನ್ಮುಂದೆ 300 ರೂ.ಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಸುಲಭವಾಗಿ ಪಡೆಯಬಹದು.
ಇದನ್ನೂ ಓದಿ: 1 ಇಡ್ಲಿಗೆ 200 ರೂ. ವಡಾ ಸಾಂಬರ್ಗೆ 240 ರೂ! – ರಾಮೇಶ್ವರಂ ಕೆಫೆಯ ಈ ಬಿಲ್ ನೋಡಿದ್ರೆ ತಲೆ ತಿರುಗುವುದು ಗ್ಯಾರೆಂಟಿ!
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಬಯಸುವ ಭಕ್ತರಿಗೆ 300 ರೂ.ಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಪಡೆಯುವುದು ದೊಡ್ಡ ಸವಾಲಾಗಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಅವು ಖಾಲಿಯಾಗುವುದರಿಂದ ಲಕ್ಷಾಂತರ ಭಕ್ತರು ದರ್ಶನ ಭಾಗ್ಯದಿಂದ ವಂಚಿತರಾಗುತ್ತಿದ್ದರು. ಇಂತಹ ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ ಈಗ ‘ಶ್ರೀನಿವಾಸ ದಿವ್ಯಾನುಗ್ರಹ ವಿಶೇಷ ಹೋಮ’ ಎಂಬ ಹೊಸ ಪರ್ಯಾಯ ಮಾರ್ಗವನ್ನು ಪರಿಚಯಿಸಿದೆ. ಈ ಹೋಮದಲ್ಲಿ ಪಾಲ್ಗೊಳ್ಳುವ ಮೂಲಕ ಭಕ್ತರು ಸುಲಭವಾಗಿ ದೇವರ ದರ್ಶನ ಪಡೆಯಬಹುದಾಗಿದೆ.
ಈ ವಿಶೇಷ ಸೌಲಭ್ಯದ ಅಡಿಯಲ್ಲಿ, ದಿವ್ಯಾನುಗ್ರಹ ಹೋಮದ ಟಿಕೆಟ್ ಪಡೆದವರಿಗೆ ಟಿಟಿಡಿ ನೇರವಾಗಿ 300 ರೂ. ಮೌಲ್ಯದ ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತದೆ. ಒಂದು ಹೋಮದ ಟಿಕೆಟ್ ದರ 1600 ರೂ. ಆಗಿದ್ದು, ಇದರಲ್ಲಿ ಇಬ್ಬರು ಭಕ್ತರು ಭಾಗವಹಿಸಬಹುದು. ಹೋಮವು ಅಲಿಪಿರಿಯ ಸಪ್ತಗೋಪ್ರದಕ್ಷಿಣ ಶಾಲೆಯಲ್ಲಿ ಪ್ರತಿದಿನ ನಡೆಯಲಿದ್ದು, ಹೋಮ ಪೂರ್ಣಗೊಂಡ ನಂತರ ಅಂದೇ ಮಧ್ಯಾಹ್ನ 3 ಗಂಟೆಗೆ ಭಕ್ತರಿಗೆ ಶ್ರೀವಾರಿಯ ದರ್ಶನಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ಮೂಲಕ ದರ್ಶನ ಟಿಕೆಟ್ ಸಿಗದವರು ಈ ಹೋಮದ ಮೂಲಕ ಪವಿತ್ರ ಕಾರ್ಯದಲ್ಲಿ ಭಾಗಿಯಾಗಿ ಸ್ವಾಮಿಯ ಕೃಪೆಗೆ ಪಾತ್ರರಾಗಬಹುದು.
ಮೇ ತಿಂಗಳ ಕೋಟಾಕ್ಕೆ ಸಂಬಂಧಿಸಿದ ದಿವ್ಯಾನುಗ್ರಹ ಹೋಮದ ಟಿಕೆಟ್‌ಗಳನ್ನು ಟಿಟಿಡಿ ಏಪ್ರಿಲ್ 25 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದೆ. ಭಕ್ತರು ಟಿಟಿಡಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ. ಸಾಮಾನ್ಯ ದರ್ಶನ ಟಿಕೆಟ್‌ಗಳಿಗಾಗಿ ತಿಂಗಳುಗಟ್ಟಲೆ ಕಾಯುವ ಬದಲು, ಈ ಅವಕಾಶವನ್ನು ಬಳಸಿಕೊಳ್ಳುವುದು ಭಕ್ತರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ದರ್ಶನದ ಜೊತೆಗೆ ತಿರುಮಲದಲ್ಲಿ ಈಗ ಉತ್ಸವಗಳ ಸಂಭ್ರಮವೂ ಮನೆಮಾಡಿದೆ. ಏಪ್ರಿಲ್ 25 ರಿಂದ ಮೂರು ದಿನಗಳ ಕಾಲ ಶ್ರೀ ಪದ್ಮಾವತಿ ಮತ್ತು ಶ್ರೀನಿವಾಸರ ‘ಪರಿಣಯೋತ್ಸವ’ ವೈಭವದಿಂದ ಜರುಗಲಿದೆ. ಮೊದಲ ದಿನ ಗಜ ವಾಹನ, ಎರಡನೇ ದಿನ ಅಶ್ವ ವಾಹನ ಮತ್ತು ಮೂರನೇ ದಿನ ಗರುಡ ವಾಹನದ ಮೇಲೆ ಮಲಯಪ್ಪ ಸ್ವಾಮಿಯ ಮೆರವಣಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ, ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ಟಿಟಿಡಿ ವತಿಯಿಂದ ವ್ಯಾಪಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

ನೋಡಿರಿ

