ಕ್ಯಾಪ್ಟನ್ಸಿ ನಂ.1.. ಫೀಲ್ಡಿಂಗ್‌ನಲ್ಲಿ BEST – ಶ್ರೇಯಸ್ ಹೋರಾಟಕ್ಕೆ ಬೆಲೆ ಯಾಕಿಲ್ಲ?
ಟೀಂ IND ಸೆಲೆಕ್ಟರ್ಸ್ಗೆ ಇನ್ನೇನ್ ಬೇಕು?

ಕ್ಯಾಪ್ಟನ್ಸಿ ನಂ.1.. ಫೀಲ್ಡಿಂಗ್‌ನಲ್ಲಿ  BEST –  ಶ್ರೇಯಸ್ ಹೋರಾಟಕ್ಕೆ ಬೆಲೆ ಯಾಕಿಲ್ಲ?ಟೀಂ IND ಸೆಲೆಕ್ಟರ್ಸ್ಗೆ ಇನ್ನೇನ್ ಬೇಕು?

ಶ್ರೇಯಸ್ ಅಯ್ಯರ್‌.. ಐಪಿಎಲ್‌ನಲ್ಲಿ ಹುಲಿಯಂತೆ ಮಿಂಚುತ್ತಿದ್ದಾರೆ. 2024ರ  ಐಪಿಎಲ್‌ನಲ್ಲಿ ಕೆಕೆಆರ್‌ನ ಗೆಲ್ಲಿಸಿದ ಶ್ರೇಯಸ್‌, 2025ಕ್ಕೆ ಸೇರಿದ್ದು ಪಂಜಾಬ್ ಕಿಂಗ್ಸ್‌ಗೆ.. ಅಲ್ಲೂ ಕೂಡ ಶ್ರೇಯಸ್ ಅಬ್ಬರ ನಿಂತಿರಲಿಲ್ಲ.. ಫೈನಲ್ ತನಕ ಕರೆದುಕೊಂಡು ಹೋಗಿ ಆರ್‌ಸಿಬಿ ಜೊತೆಯ ಸೆಣಸಾಟದಲ್ಲಿ ಸೋಲ್ತು. ಈ ಸಲದ ಐಪಿಎಲ್‌ನಲ್ಲೂ ಕೂಡ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಪಂಜಾಬ್ ಕಿಂಗ್ಸ್ ಭರ್ಜರಿ ಪ್ರದರ್ಶನ ನೀಡುತ್ತಿದೆ. ಇದೆಲ್ಲರದ ನಡುವೆ  ಕ್ಯಾಪ್ಟನ್ಸಿಯಲ್ಲಿ, ಬ್ಯಾಟಿಂಗ್‌ನಲ್ಲಿ.. ಫೀಲ್ಡಿಂಗ್‌ನಲ್ಲಿ ನಂ1 ಆಟಗಾರ ಆಗಿರೋ ಶ್ರೇಯಸ್ ಅಯ್ಯರ್‌ಗೆ ಯಾಕೆ ಟೀಂ ಇಂಡಿಯಾದಲ್ಲಿ ಯಾಕೆ ಚಾನ್ಸ್ ಸಿಗುತ್ತಿಲ್ಲ ಅನ್ನೋ ಪ್ರಶ್ನೆ ಕಾಡುತ್ತಿದೆ..

ಗ್ರೌಂಡ್‌ನಲ್ಲಿ ಚಿರತೆಯಂತೆ ಓಡಿ ಕ್ಯಾಚ್‌ ಹಿಡಿಯುವುದರಲ್ಲಿ, ಬ್ಯಾಟಿಂಗ್‌ನಲ್ಲಿ ಅಬ್ಬರಿಸುವುದ್ದರಲ್ಲಿ. ಕಷ್ಟದ ಸಮಯದಲ್ಲಿ ತಂಡಕ್ಕೆ ಆಸರೆಯಾಗೋದ್ರಲ್ಲಿ, ಕ್ಯಾಪ್ಟನ್ಸಿಯಲ್ಲಿ ಅಯ್ಯರ್ ನಂ.1. ಇಷ್ಟೆಲ್ಲಾ ಸಾಧಿಸಿದರೂ ಸೆಲೆಕ್ಟರ್‌ಗಳ ಕಣ್ಣಿಗೆ ಮಾತ್ರ ಇವರು ಕಾಣುತ್ತಿಲ್ಲ ಯಾಕೆ? ಇದು ಈಗ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯನ್ನು ಕಾಡುತ್ತಿರುವ ಪ್ರಶ್ನೆ.

ಇದನ್ನೂ ಓದಿ: ಪ್ಲೇ ಆಫ್ ರೇಸ್ ಸ್ಟಾರ್ಟ್ – KKR, LSG, MIಗಿಲ್ವಾ ಚಾನ್ಸ್?

2024ರಲ್ಲಿ ಕೆಕೆಆರ್‌ಗೆ ಐಪಿಎಲ್ ಟ್ರೋಫಿ ಕೊಡಿಸಿ, ಕಳೆದ ಬಾರಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ ವರೆಗೆ ಮುನ್ನಡೆಸಿದ್ದು ಸಾಮಾನ್ಯ ವಿಷಯವಲ್ಲ. ಸೋತು ಸುಣ್ಣವಾಗಿದ್ದ ತಂಡಕ್ಕೆ ಹೊಸ ಚೈತನ್ಯ ತುಂಬಿ, ಅಂತಿಮ ಹಂತದವರೆಗೆ ತಂದವರು ಇದೇ ಅಯ್ಯರ್. ಒಬ್ಬ ನಾಯಕನಾಗಿ ತಾನೇನು ಅಂತಾ ಸಾಬೀತುಪಡಿಸಿದ್ದಾರೆ. ಫೀಲ್ಡಿಂಗ್‌ನಲ್ಲಿ ಮೈ ಮರೆತು ಕ್ಯಾಚ್ ಹಿಡಿಯುವಾಗ ಇವರ ಬದ್ಧತೆ ಎದ್ದು ಕಾಣುತ್ತೆ. ಆದರೂ ಟೀಂ ಇಂಡಿಯಾ ಸೆಲೆಕ್ಟರ್ಸ್ ಯಾಕೆ ಇವರ ಕಡೆ ಕಣ್ಣೆತ್ತಿ ನೋಡುತ್ತಿಲ್ಲ ಅನ್ನೋದೇ ಯಕ್ಷ ಪ್ರಶ್ನೆ.  ಗಾಯದ ಸಮಸ್ಯೆಯಿಂದ ಹೊರಬಂದು, ಫಿಟ್ನೆಸ್ ಸಾಬೀತುಪಡಿಸಿ, ಮೈದಾನದಲ್ಲಿ ರನ್ ಮಳೆ ಹರಿಸಿದರೂ ಕೂಡ ಟೀಮ್ ಇಂಡಿಯಾದ ಬಾಗಿಲು ಇವರಿಗೆ ಮಾತ್ರ ಯಾಕೆ ತೆರೆಯುತ್ತಿಲ್ಲ? ಅನ್ನೋದೇ ಗೊತ್ತಿಲ್ಲ. ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಅಯ್ಯರ್ ಬರ್ತಾರೆ, ಟೀಂ ಇಂಡಿಯಾ ಕ್ಯಾಪ್ಟನ್ ಆಗ್ತಾರೆ ಅನ್ನೋ ಎಷ್ಟೇ ಸುದ್ದಿಗಳು ಬಂದ್ರೂ ಕೂಡ ಅದು ನಿಜವಾಗುವುದು ಅಷ್ಟು ಸುಲಭವಲ್ಲ..

ಇದು ಕೇವಲ ಒಬ್ಬ ಆಟಗಾರನ ಪ್ರಶ್ನೆಯಲ್ಲ, ಪ್ರತಿಭೆಗೆ ಬೆಲೆ ಸಿಗಲಿ ಎಂದು ಬಯಸುವ ಕೋಟ್ಯಂತರ ಕನ್ನಡಿಗರ ಮತ್ತು ಕ್ರಿಕೆಟ್ ಪ್ರೇಮಿಗಳ ಪ್ರಶ್ನೆ.  ಜನ ಏನೇ ಆಡಿಕೊಳ್ಳಲಿ, ಸೆಲೆಕ್ಟರ್ಸ್ ಎಷ್ಟೇ ನಿರ್ಲಕ್ಷ್ಯ ಮಾಡಲಿ… ಮೈದಾನಕ್ಕೆ ಇಳಿದ್ರೆ ಶ್ರೇಯಸ್ ಅಯ್ಯರ್ ಆಡೋ ರೀತಿನೇ ಅಲ್ಟಿ..  ಹೈ ಕ್ಲಾಸ್ ಪರ್ಫಾರ್ಮೆನ್ಸ್ ನೀಡಿ ತಂಡದ ಗೆಲುವಿಗೆ ತನ್ನದೇ ಆದ ಕೊಡುಗೆ ನೀಡುತ್ತಾರೆ..

ಗಾಳಿಯಲ್ಲಿ ಜಿಗಿದು ಕ್ಯಾಚ್

ಮುಂಬೈ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಹತ್ತಿರ ಹದ್ದಿನ ಕಣ್ಣಿಟ್ಟು, ಗಾಳಿಯಲ್ಲಿ ಜಿಗಿದು ಹಿಡಿದ ಕ್ಯಾಚ್ ರೀತಿ ನೋಡಿದ್ರೆ ಯಾರಿಗಾದ್ರೂ ಮೈ ಜುಂ ಎನ್ನೋದು ಗ್ಯಾರಂಟಿ. ಫೀಲ್ಡಿಂಗ್‌ನಲ್ಲಿ ಅಯ್ಯರ್ ಅಂದ್ರೆ ಯಾವಾಗಲೂ ಒಂದು ಹೆಜ್ಜೆ ಮುಂದೆ. ಆ ಒಂದು ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿಬಿಡ್ತು.. ಈ ಕ್ಯಾಚ್‌ ನೋಡಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಕೂಡ ಶಾಕ್ ಆಗಿದ್ರು..

ಬ್ಯಾಟಿಂಗ್‌ನಲ್ಲಿ ರಣಬೇಟೆಗಾರ  

ಟೀಕೆ ಮಾಡುವವರ ಬಾಯಿ ಮುಚ್ಚಿಸೋದು ಅಂದ್ರೆ ಬ್ಯಾಟ್‌ನಲ್ಲೇ ಉತ್ತರ ಕೊಡೋದು.  ಪಂದ್ಯ ಯಾವುದೇ ಆಗಿರಲಿ ಬೌಲರ್‌ಗಳನ್ನು ಸಲೀಸಾಗಿ ಎದುರಿಸಿ, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ರೀತಿ ಸಖತ್ ಆಗಿತ್ತು. ಪರಿಸ್ಥಿತಿಗೆ ತಕ್ಕಂತೆ ಜವಾಬ್ದಾರಿಯುತವಾಗಿ ಆಡಿ ತಂಡಕ್ಕೆ ಆಸರೆಯಾದ ರೀತಿ ರಿಯಲ್ ಹೀರೋ ಇವರೇ ಅಂತಾ ಸಾಬೀತುಪಡಿಸುತ್ತಿದ್ದಾರೆ.

ಇಷ್ಟೆಲ್ಲಾ ಟ್ಯಾಲೆಂಟ್ ಇರೋ ಆಟಗಾರನನ್ನ ಟೀಂ ಇಂಡಿಯಾ ಸೆಲೆಕ್ಟರ್  ಪದೇ ಪದೇ ಹೊರಗಿಡಬಹುದು, ಆದ್ರೆ ಅವರಲ್ಲಿರೋ ಕ್ರಿಕೆಟ್ ಕಿಚ್ಚನ್ನ ಆರಿಸೋಕೆ ಸಾಧ್ಯವಿಲ್ಲ.  ಅಯ್ಯರ್  ಕ್ಯಾಪ್ಟನ್ಸಿ, ಬ್ಯಾಟಿಂಗ್‌, ಫೀಲ್ಡಿಂಗ್‌ ನೋಡಿದ ಮೇಲಾದ್ರೂ ಅವರಿಗೆ ಅರ್ಹ ಗೌರವ ಸಿಗಲಿ.

Kishor KV