ಅನನ್ಯಾ Vs ಕಾವ್ಯ Vs ಪ್ರೀತಿ.. IPL ಸೀನಿಯರ್ಸ್‌ಗೆ RCB ಕ್ವೀನ್ ಟಕ್ಕರ್! – ಮೂವರು ಮಾಲೀಕರು.. ಇವರೇ ಬೆಸ್ಟ್!

IPL ಸೀಸನ್ 19 ಅದ್ದೂರಿಯಾಗಿ ನಡೆಯುತ್ತಿದೆ.. 1 ಟ್ರೋಫಿ ಮೇಲೆ 10 ಟೀಂಗಳು ಕಣ್ಣಿಟ್ಟಿವೆ. ಈ ಟೂರ್ನಿಯಲ್ಲಿ ಆಟಗಾರರ ಜೊತೆಗೆ ತಂಡದ ಮಾಲೀಕರು ಕೂಡ ಸಖತ್ ಸದ್ದು ಮಾಡ್ತಿದ್ದಾರೆ. ಬಿಡ್ ಟೈಮ್ ನಲ್ಲಿ ಆಟಗಾರರಿಗೆ ದುಡ್ಡು ಸುರಿದು ಮ್ಯಾಚ್ ವೇಳೆ ಟೆನ್ಷನ್ ಮಾಡಿಕೊಳ್ಳೋ ಮಾಲೀಕರನ್ನು ನೋಡ್ತಿದ್ದರೆ, ಕ್ರಿಕೆಟ್ ಅಭಿಮಾನಿಗಳಿಗೂ ಒಂದು ಥರಾ ಮಜಾ ಕೊಡ್ತಿರುತ್ತೆ.. ಇದೆಲ್ಲಾ ಇವರಿಗೆ ಬೇಕಿತ್ತಾ ಅಂತಾ ಫ್ಯಾನ್ಸ್ ಮಾತನಾಡಿಕೊಳ್ತಿರ್ತಾರೆ. ಈ ಸೀಸನ್‌ಗಳಲ್ಲಂತೂ ಲೇಡಿ ಮಾಲೀಕರದ್ದೇ ಹವಾ.. ಈ ಸೀಸನ್‌ನಿಂದ ಪ್ರೀತಿ, ಕಾವ್ಯಗೆ ಟಕ್ಕರ್ ಕೊಡೋದಿಕ್ಕೆ ಅನನ್ಯಾ ಬಿರ್ಲಾ ಕೂಡ ಎಂಟ್ರಿಕೊಟ್ಟಿದ್ದಾರೆ.
ಇದನ್ನೂ ಓದಿ: ಪವರ್‌ಗಾಗಿ ಡಿಕೆ ಬ್ರದರ್ಸ್ ಬಿಗಿಪಟ್ಟು! – ಹೈಕಮಾಂಡ್ ಅಂಗಳಲ್ಲಿ 2 ಷರತ್ತು.. ಮೇ ತಿಂಗಳಲ್ಲಿ ಕ್ಲೈಮ್ಯಾಕ್ಸ್?
ದಿನ ಕಳೆದಂತೆ ಐಪಿಎಲ್ ಫಿವರ್ ಜಾಸ್ತಿಯಾಗಿದೆ. ಈ ಹಿಂದೆ ಚಾಂಪಿಯನ್ಸ್ ಆಗಿದ್ದ ಟೀಂಗಳೆಲ್ಲಾ ಈ ಬಾರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ. ಮತ್ತೊಂದ್ಕಡೆ ಕಳಪೆ ಪ್ರದರ್ಶನ ನೀಡಿದ್ದ ತಂಡಗಳೆಲ್ಲಾ ಈಗ ಬ್ಯಾಕ್ ಟು ಬ್ಯಾಕ್ ಗೆಲುವು ಕಾಣ್ತಿವೆ. ಇವೆಲ್ಲದ್ರ ಮಧ್ಯೆ ತಂಡದ ಆಟಗಾರರ ಮಾಲೀಕರು ಕೂಡ ಸಖತ್ ಸೌಂಡ್ ಮಾಡ್ತಿದ್ದಾರೆ. ಒಂದ್ಕಡೆ ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಪ್ರತಿ ಮ್ಯಾಚ್‌ನಲ್ಲೂ ಕಾಣಿಸಿಕೊಳ್ತಿದ್ದಾರೆ. ಸೋತ್ರೂ, ಗೆದ್ರೂ ಮೈದಾನದಲ್ಲಿ ಆಟಗಾರರಿಗೆ ಸಪೋರ್ಟ್ ಮಾಡ್ತಿರ್ತಾರೆ. ಮತ್ತೊಂದ್ಕಡೆ ಇಷ್ಟು ದಿನ ತಂಡದ ಆಟಗಾರರ ಮೇಲೆ ಕೂಗಾಡ್ತಿದ್ದ ಸಂಜೀವ್ ಗೋಯೆಂಕಾ ಈಗ ಯಾಕೋ ಸೈಲೆಂಟ್ ಆಗಿದ್ದಾರೆ. RR ವಿರುದ್ದ ಮ್ಯಾಚ್‌ನಲ್ಲಿ LSG ಸೋತ್ರೂ ಗೊಯೆಂಕಾ ಕೂಲ್ ಆಗಿದ್ರು. ಪಂತ್‌ನ ಹಗ್ ಮಾಡಿ ಸಮಾಧಾನದಿಂದ ಮಾತನಾಡಿಸಿದ್ರು. ಇದೆಲ್ಲಾ ಒಂದ್ಕಡೆ ಆದ್ರೆ IPLನಲ್ಲಿ ಈ ಬ್ಯೂಟಿಗಳು ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ಅದು ಬೇರೆ ಯಾರೂ ಅಲ್ಲ.. SRH ತಂಡದ ಮಾಲಕಿ ಕಾವ್ಯ ಮಾರನ್, ಪ್ರೀತಿ ಜಿಂಟಾ ಹಾಗೂ ಅನನ್ಯಾ ಬಿರ್ಲಾ..
ಪ್ರೀತಿ ಝಿಂಟಾ ಮೊದಲ ಸೀಸನ್‌ನಿಂದಲೂ ಪಂಜಾಬ್ ತಂಡ ಮಾಲಕಿಯಾದ್ರೂ ಇದುವರೆಗೂ ಅವರ ತಂಡ ಕಪ್ ಗೆದ್ದಿಲ್ಲ.. ಕಾವ್ಯಾ ಮಾರನ್ ಎಸ್‌ಆರ್‌ಹೆಚ್ ತಂಡದ ಒಡೆತನ ಪಡೆದ್ಮೇಲೆ ತಂಡ ಫೈನಲ್‌ಗಳಿಗೆ ಹೋಗಿದ್ರೂ ಕಪ್ ಗೆಲ್ಲೋಕೆ ಆಗಿಲ್ಲ.. ಹಾಗಿದ್ದರೂ ಐಪಿಎಲ್ ಫ್ರಾಂಚೈಸಿ ಮಾಲೀಕರ ವಿಚಾರ ಬಂದಾಗ ಪಂಜಾಬ್ ಕಿಂಗ್ಸ್ ತಂಡದ ಮಾಲಕಿ ಪ್ರೀತಿ ಝಿಂಟಾ, ಹೈದ್ರಾಬಾದ್ ತಂಡ ಮಾಲಕಿ ಕಾವ್ಯಾ ಮಾರನ್ ಚರ್ಚೆಯಲ್ಲಿರ್ತಾರೆ. ಈ ಸೀಸನ್‌ನಿಂದ ಹಾಲಿ ಚಾಂಪಿಯನ್ RCB ತಂಡದ ಹೊಸ ಮಾಲಕಿ ಅನನ್ಯಾ ಬಿರ್ಲಾ ಕೂಡ ಚರ್ಚೆಯಲ್ಲಿದ್ದಾರೆ. RCB ಬಿರ್ಲಾ ಗ್ರೂಪ್‌ಗೆ ಸೇಲ್ ಆದ ಮೊದಲ ದಿನದಿಂದಲೇ ಅನನ್ಯಾರದ್ದೇ ಫುಲ್ ಹವಾ.. ಈಗ ಅನನ್ಯಾ ಎಂಟ್ರಿಯಿಂದ ಕಾವ್ಯ ಹಾಗೂ ಪ್ರೀತಿ ಸೈಡ್‌ಲೈನ್ ಆದ್ರಾ ಅನ್ನೋ ಚರ್ಚೆ ಕೂಡ ಹುಟ್ಟಿಕೊಂಡಿದೆ. ಈ ಮೂವರು ಬ್ಯೂಟಿಗಳಲ್ಲಿ ಯಾರು ಬೆಸ್ಟ್ ಅಂತಾ ಫ್ಯಾನ್ಸ್ ಚರ್ಚೆ ನಡೆಸ್ತಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ ಯಾವುದೇ ಮೈದಾನದಲ್ಲಿ ಆಡಲು ಇಳಿದ್ರೂ, ಆಟಗಾರರನ್ನು ಹುರಿದುಂಬಿಸಲು ಮಾಲೀಕಿ ಕಾವ್ಯಾ ಮಾರನ್ ಹಾಜರಿರುತ್ತಾರೆ. ಕಾವ್ಯ ಮೈದಾನದಲ್ಲಿ ಇದ್ದಾರೆ ಎಂದರೆ, ಕ್ಯಾಮೆರಾ ಕಣ್ಣುಗಳು ಅವರ ಮೇಲೆ ಪೋಕಸ್ ಆಗಿರುತ್ತವೆ. ಪಂದ್ಯ ಗೆಲ್ಲುತ್ತಿದೆ, ತಂಡ ಚೆನ್ನಾಗಿ ಆಡುತ್ತಿದೆ ಎಂದಾಗ ಕಾವ್ಯಾ ಮಾರನ್ ಅವರು ಖುಷಿಯಿಂದ ಇರುತ್ತಾರೆ.. ಆದರೆ, ಸೋಲುವಾಗ ಅವರ ಎಕ್ಸ್ಪ್ರೆಷನ್ ಬೇರೆಯೇ ಆಗಿರುತ್ತದೆ. ನಿರಾಸೆ, ಸಿಟ್ಟು. ಬೇಜಾರು ಎಲ್ಲಾನೂ ಇರುತ್ತೆ.. ಈ ಸೀಸನ್‌ನಲ್ಲಿ SRH ಟೀಂ ಉತ್ತಮ ಪ್ರದರ್ಶನ ನೀಡ್ತಾ ಬಂದಿದೆ. ಹೀಗಾಗಿ ಕಾವ್ಯ ಮಾರನ್ ಕೂಲ್ ಕೂಲ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಗೆಲುವಿನ ಖುಷಿಯಲ್ಲಿದ್ದಾರೆ.
ಇನ್ನು ಪಂಜಾಬ್ ಕಿಂಗ್ಸ್ ತಂಡದ ಮಾಲಕಿ ಪ್ರೀತಿ ಝಿಂಟಾ ಎಲ್ಲರಂತಲ್ಲ.. ಫುಲ್ ಡಿಫ್ರೆಂಟ್.. ತಂಡ ಸೋಲಲಿ.. ಗೆಲ್ಲಲಿ.. ಅವ್ರ ಮುಖದ ಎಕ್ಸ್ ಪ್ರೆಷನ್ ಜಾಸ್ತಿ ಚೇಂಜ್ ಆಗಲ್ಲ.. ಮುಂಚೆಯೆಲ್ಲಾ ಪಂದ್ಯ ಗೆದ್ದಾಗ ಕುಣಿದು ಕುಪ್ಪಳಿಸುತ್ತಿದ್ದ ಪ್ರೀತಿಗೆ ಈಗೀಗ ಐಪಿಎಲ್ ಅನುಭವ ಜಾಸ್ತಿಯಾಗುತ್ತಿದ್ದಂತೆ ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸ್ತಾರೆ. ಈ ಸೀಸನ್‌ನಲ್ಲಿ ಪಂಜಾಬ್ ಅತ್ಯದ್ಭುತ ಪ್ರದರ್ಶನ ನೀಡ್ತಾ ಇದ್ದು, ಸೋಲಿಲ್ಲದ ಸರದಾರ ಅಂತ ಅನ್ನಿಸಿಕೊಂಡಿದೆ. ಇದ್ರಿಂದಾಗಿ ಪ್ರೀತಿ ಫುಲ್ ಚಿಲ್ ಮೂಡ್‌ನಲ್ಲಿದ್ದಾರೆ. ಆಟಗಾರರ ಜೊತೆ ಖುಷಿಯಿಂದ ಮೈದಾನದಲ್ಲಿ ಕಾಣಿಸಿಕೊಳ್ತಿದ್ದಾರೆ. ಮೊನ್ನೆಯಂತೂ ಎಂಐ ವಿರುದ್ದದ ಪಂದ್ಯದಲ್ಲಿ ಅರ್ಷದೀಪ್ 3 ವಿಕೆಟ್ ಕಬಳಿಸಿ ಮಿಂಚಿದ್ರು.. ಪಂದ್ಯ ಮುಗಿತಾ ಇದ್ದಂತೆ ಪ್ರೀತಿ ಅರ್ಷದೀಪ್‌ನ ಪ ಪ್ರೀತಿಯಿಂದ ಅಪ್ಪಿಕೊಂಡಿದ್ರು. ಅರ್ಷದೀಪ್ ಕೂಡ ಕುಣಿದು ಕುಪ್ಪಳಿಸಿದ್ರು. ಆಟಗಾರರ ಜೊತೆ ಸೇರಿ ಗೆಲುವನ್ನ ಸಂಭ್ರಮಿಸಿದ್ರು. ಇದು ಪ್ರೀತಿ ಝಿಂಟಾ ಕ್ರಿಕೆಟ್ ಜೊತೆಗೆ ಮಾಗಿರುವುದನ್ನು ತೋರಿಸುತ್ತಿದೆ.. ಇದೇ ಕಾರಣಕ್ಕೆ ಪ್ರೀತಿ ಝಿಂಟಾ ಒಡೆತನದ ಪಂಜಾಬ್ ಕಿಂಗ್ಸ್, ಯಾವತ್ತೂ ಐಪಿಎಲ್‌ನಲ್ಲಿ ಕಪ್ ಗೆಲ್ಲದಿದ್ದರೂ ಅಭಿಮಾನಿಗಳ ಪಡೆಯನ್ನು ಉಳಿಸಿಕೊಳ್ಳೋದ್ರಲ್ಲಿ ಯಶಸ್ವಿಯಾಗಿದೆ.
ಇನ್ನುಇಷ್ಟು ವರ್ಷಗಳಲ್ಲಿ ಆರ್‌ಸಿಬಿ ಟೀಂ ಓನರ್‌ಗಳು ಮೈದಾನದಲ್ಲಿ ಒಂದು ಬಾರಿಯೂ ಕಾಣಿಸಿಕೊಂಡಿರ್ಲಿಲ್ಲ.. ಆದ್ರೀಗ ಆರ್‌ಸಿಬಿ ಟೀಂ ಸೇಲ್ ಆಗಿದೆ. ಮುಂದಿನ ಸೀಸನ್‌ನಿಂದ ಹೊಸ ಓನರ್ ತಂಡವನ್ನ ನಡೆಸಲಿದ್ದಾರೆ. ಟೀಂ ಸೇಲ್ ಆಗ್ತಿದ್ದಂತೆ ಹೊಸ ಓನರ್ ಅನನ್ಯಾ ಬಿರ್ಲಾರದ್ದೇ ಹವಾ.. ಅನನ್ಯಾ ಬಿರ್ಲಾ ಫುಲ್ ಟ್ರೆಂಡಿಂಗ್‌ನಲ್ಲಿದ್ದಾರೆ. ಮೊದಲ ದಿನದಿಂದಲೂ ಅನನ್ಯಾ ಮೈದಾನಕ್ಕೆ ಬರ್ತಾರಾ? ಬಂದ್ರೆ ಹೇಗಿರ್ತಾರೆ? ಸೆಲೆಬ್ರೇಷನ್ ಹೆಂಗಿರುತ್ತೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಿಗೂ ಇತ್ತು. ಫ್ಯಾನ್ಸ್ ಆಶಯದಂತೆ ಅನನ್ಯಾ ಮೈದಾನದಲ್ಲಿ ಕಾಣಿಸಿಕೊಳ್ತಿದ್ದಾರೆ.. ಅನನ್ಯಾ ತಂಡದ ಸೋಲು, ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಿದ್ದಾರೆ. ತಂಡ ಸೋತಾಗ ಬೇಜಾರು ಮಾಡಿಕೊಂಡಿಲ್ಲ.. ಆಟಗಾರರ ಮೇಲೆ ಸಿಟ್ಟು ಮಾಡಿಕೊಂಡಿಲ್ಲ.. ಆಟಗಾರರು ಉತ್ತಮ ಪ್ರದರ್ಶನ ನೀಡ್ತಿದ್ರೆ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ರು. ಟೀಂ ಗೆದ್ದಾಗಲೂ ಓವರ್ ಆಗಿ ಸೆಲಬ್ರೇಷನ್ ಮಾಡಿಲ್ಲ.. ಹೀಗಾಗಿ RCB ಕ್ವೀನ್ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದಾರೆ. ನಮ್ಮ RCB ಬ್ಯೂಟಿ ಎಲ್ಲರಂತಲ್ಲ.. ಸೋಲು ಗೆಲುವನ್ನ ಸಮಾನವಾಗಿ ಸ್ವೀಕರಿಸುತ್ತಾರೆ ಅಂತ ಫ್ಯಾನ್ಸ್ ಹೇಳ್ತಿದ್ದಾರೆ. ಒಟ್ಟಾರೆ ಐಪಿಎಲ್ ಅಂಗಳದಲ್ಲಿ ಈಗ ಆಟಗಾರರಷ್ಟೇ ತಂಡದ ಮಾಲೀಕರು ಕೂಡ ಚರ್ಚೆಯ ವಿಷಯವಾಗಿದ್ದಾರೆ.

ನೋಡಿರಿ

