ಪವರ್‌ಗಾಗಿ ಡಿಕೆ ಬ್ರದರ್ಸ್‌ ಬಿಗಿಪಟ್ಟು! – ಹೈಕಮಾಂಡ್‌ ಅಂಗಳಲ್ಲಿ 2 ಷರತ್ತು.. ಮೇ ತಿಂಗಳಲ್ಲಿ ಕ್ಲೈಮ್ಯಾಕ್ಸ್?

ಪವರ್‌ಗಾಗಿ ಡಿಕೆ ಬ್ರದರ್ಸ್‌ ಬಿಗಿಪಟ್ಟು! – ಹೈಕಮಾಂಡ್‌ ಅಂಗಳಲ್ಲಿ 2 ಷರತ್ತು.. ಮೇ ತಿಂಗಳಲ್ಲಿ ಕ್ಲೈಮ್ಯಾಕ್ಸ್?

ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ದಿನೇ ದಿನೆ ಹೆಚ್ಚಾಗುತ್ತಿದೆ. ಒಂದ್ಕಡೆ ನಾನೇ 5 ವರ್ಷವೂ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳ್ತಿದ್ರೆ, ಮತ್ತೊಂದ್ಕಡೆ ನಾನೇ ಮುಂದಿನ ಸಿಎಂ ಎಂದು ಡಿಕೆಶಿ ಹೇಳುತ್ತಿದ್ದಾರೆ. ಉಪಚುನಾವಣೆ ರಿಸಲ್ಟ್‌ಗೂ ಮುನ್ನವೇ ಪವರ್‌ ಶೇರಿಂಗ್‌ ವಿಚಾರ ಮುನ್ನಲೆಗೆ ಬಂದಿದೆ. ಡಿಕೆ ಬ್ರದರ್ಸ್‌ ಹೈಕಮಾಂಡ್‌ ಅಂಗಳಕ್ಕೆ ಹೋಗಿದ್ದು, ಪವರ್ ಶೇರಿಂಗ್ ವಿಚಾರದಲ್ಲಿ ಹೈಕಮಾಂಡ್‌ಗೆ 2 ಖಡಕ್‌ ಷರತ್ತು ವಿಧಿಸಿ ಡೆಡ್‌ಲೈನ್ ನೀಡಿದ್ದಾರೆ.

ಇದನ್ನೂ ಓದಿ: ಲೆನ್ಸ್‌ಕಾರ್ಟ್ ಆಯ್ತು.. ಈಗ ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲೂ ಸಿಬ್ಬಂದಿಗಳಿಗೆ ಬಿಂದಿ, ತಿಲಕ ನಿರ್ಬಂಧ!

ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಅವರ ಸಹೋದರ ಡಿಕೆ ಸುರೇಶ್‌ ದೆಹಲಿಗೆ ಹೋಗಿದ್ದಾರೆ. ಪವರ್‌ ಶೇರಿಂಗ್‌ ವಿಚಾರವಾಗಿ ಹೈಕಮಾಂಡ್‌ ಜೊತೆಗೆ ಚರ್ಚೆ ನಡೆಸುತ್ತಿದ್ದಾರೆ. ದೆಹಲಿಗೆ ಕಾಲಿಟ್ಟ ದಿನವೇ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದ ಡಿಕೆ ಸಹೋದರರು ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಗಂಟೆಗಳ ಕಾಲ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಬೆನ್ನಲ್ಲೇ ಹೈಕಮಾಂಡ್ ಮುಂದೆ ಡಿಕೆಶಿ ಎರಡು ಪ್ರಮುಖ ಷರತ್ತುಗಳನ್ನು ವಿಧಿಸಿದ್ದಾರೆ ಎನ್ನಲಾಗ್ತಿದೆ.

ಷರತ್ತು 1: ಬಫರ್ ಡೇಸ್ ಮತ್ತು ಬ್ರೀತಿಂಗ್ ಡೇಸ್ ಲೆಕ್ಕಾಚಾರ!

ಏಪ್ರಿಲ್ 29 ರಿಂದ ಮೇ 4: ಈ ಅವಧಿಯನ್ನು ‘ಬಫರ್ ಡೇಸ್’ ಎಂದು ಪರಿಗಣಿಸಿ ಸಿಎಂ ಅವರನ್ನು ದೆಹಲಿಗೆ ಕರೆಸಿ ಮಾತುಕತೆ ನಡೆಸಬೇಕು.

ಮೇ 4 ರಿಂದ ಮೇ 10: ಈ ‘ಬ್ರೀತಿಂಗ್ ಡೇಸ್’ ಒಳಗಾಗಿ ಎಲ್ಲ ಗೊಂದಲಗಳಿಗೂ ತೆರೆ ಎಳೆದು, ಹೈಕಮಾಂಡ್ ತನ್ನ ಅಂತಿಮ ನಿರ್ಧಾರವನ್ನು ಘೋಷಿಸಬೇಕು.

ಷರತ್ತು 2: ನನ್ನ ತಾಳ್ಮೆ ಪರೀಕ್ಷಿಸಬೇಡಿ

ಮೊದಲು ಹೇಳಿದ್ದು 2.5 ವರ್ಷ. ಈಗ 3 ವರ್ಷ ಆಗುತ್ತಿದೆ. ನಮ್ಮ ಪಕ್ಷನಿಷ್ಠೆಯನ್ನು ಇನ್ನು ಪರೀಕ್ಷೆ ಮಾಡುವುದಾದರೆ ಮಾಡಿ, ನಮ್ಮಿಂದ ಪಕ್ಷ ವಿರೋಧಿ ನಡೆಯಂತೂ ಖಂಡಿತ ಇಲ್ಲ. ಆದರೆ ಮೇ 10 ರೊಳಗೆ ಏನು ಎಂಬುದನ್ನು ನೀವೇ ಬಹಿರಂಗಪಡಿಸಿಬಿಡಿ ಎಂದು ಡಿಕೆಶಿ ಖಡಕ್ ಆಗಿ ನುಡಿದಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಈ ಗಡುವಿನೊಳಗೆ ನಿರ್ಧಾರ ಹೊರಬೀಳದೆ ಶಾಸಕರಲ್ಲಿ ಅಸಮಾಧಾನ ಸ್ಫೋಟಗೊಂಡರೆ ಅಥವಾ ಗೊಂದಲ ಉಂಟಾದರೆ ಅದಕ್ಕೆ ನನ್ನನ್ನು ಜವಾಬ್ದಾರಿಯನ್ನಾಗಿ ಮಾಡಬೇಡಿ ಎಂದು ಡಿಸಿಎಂ ಹೈಕಮಾಂಡ್ ನಾಯಕರಿಗೆ ನೇರವಾಗಿಯೇ ಎಚ್ಚರಿಸಿದ್ದಾರೆ. “ನಾನಂತೂ ಪಕ್ಷದ ವಿರುದ್ಧ ಹೋಗಲ್ಲ, ಆದರೆ ಶಾಸಕರ ನಡೆಗೆ ಗ್ಯಾರಂಟಿ ಇಲ್ಲ” ಎಂಬ ಅವರ ಮಾತು ಈಗ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.

ಇನ್ನು ಪವರ್‌  ಶೇರಿಂಗ್‌ ವಿಚಾರವಾಗಿ ಡಿಕೆ ಬದರ್ಸ್‌ಗೆ ರಿಯಾಕ್ಟ್‌ ಮಾಡಿದ್ದಾರೆ ಹೈಕಮಾಂಡ್‌ ನಾಯಕರು.  ಹೈಕಮಾಂಡ್ ಮನಸ್ಸಿನಲ್ಲೂ ಕೆಲವು ವಿಚಾರಗಳಿವೆ, ಖಂಡಿತವಾಗಿಯೂ ನಿಮ್ಮನ್ನು ಕರೆದು ಮಾತನಾಡುತ್ತೇವೆ ಎಂದು ನಾಯಕರು ಭರವಸೆ ನೀಡಿದ್ದಾರೆ. ಏಪ್ರಿಲ್ 28ರಂದು ರಾಹುಲ್ ಗಾಂಧಿ  ದೆಹಲಿಗೆ ಮರಳಲಿದ್ದು, ಏಪ್ರಿಲ್ 29ರಂದು ಕೊನೆಯ ಹಂತದ ಚುನಾವಣೆ ಮುಗಿಯುತ್ತಿದ್ದಂತೆಯೇ ಅವರೊಂದಿಗೆ ಚರ್ಚಿಸಿ ಸಮಯ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ. ಏಪ್ರಿಲ್ 29 ರಿಂದ ಮೇ 4 ರ ಅವಧಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ರಾಜ್ಯದ ನಾಯಕತ್ವ ಅಥವಾ ಇತರ ಪ್ರಮುಖ ವಿಚಾರಗಳ ಬಗ್ಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವುದಾಗಿ ಹೈಕಮಾಂಡ್ ಹೇಳಿದೆ.

ಮೇ 29 ರ ನಂತರ ದೆಹಲಿಗೆ ಬರುವಂತೆ ಡಿ.ಕೆ. ಬ್ರದರ್ಸ್‌ಗೆ ಸೂಚಿಸಲಾಗಿದೆ. ಅದೇ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಹ ದೆಹಲಿಗೆ ಕರೆಸುವ ಬಗ್ಗೆ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದು ನಾಯಕರು ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ದೆಹಲಿ ಅಂಗಳದಲ್ಲಿ ಡಿ.ಕೆ. ಬ್ರದರ್ಸ್ ನಡೆಸುತ್ತಿರುವ ಈ ಪವರ್ ಪ್ಲೇ ರಾಜ್ಯ ರಾಜಕಾರಣದಲ್ಲಿ ಯಾವ ತಿರುವು ಪಡೆಯಲಿದೆ ಎಂಬ ಈಗ ಕುತೂಹಲ ಹೆಚ್ಚಾಗಿದೆ.

Shwetha M