ಸೂರ್ಯವಂಶಿ V/s ಅಭಿಷೇಕ್ ಶರ್ಮಾ! – ವೈಭವ್‌ನ ಮತ್ತೆ ಕೆಡವ್ತಾರಾ ಹಿಂಗೆ?
RR V/s SRHನಲ್ಲಿ ಯಾರು ಗೆಲ್ಲೋದು?

SRH ವಿರುದ್ಧದ ಕಳೆದ ಪಂದ್ಯದಲ್ಲಿ ಯಂಗ್ ಗನ್ ಸೂರ್ಯವಂಶಿ ಗೋಲ್ಡನ್ ಡಕೌಟ್ ಆಗಿದ್ದ.. ಎಸ್‌ಆರ್‌ಹೆಚ್‌ನ ಹಿಂಗೆ ಬೌಲಿಂಗ್‌ನಲ್ಲಿ. ಆದರೆ ನಂತರ ಕೇವಲ ಒಂದು ಮ್ಯಾಚ್ ಮಾತ್ರ ಪ್ರಫುಲ್ ಹಿಂಗೆ ಆಡಿದ್ದು, ಮೂರನೇ ಪಂದ್ಯದಿಂದ ಪ್ಲೇಯಿಂಗ್ 11ನಲ್ಲಿ ಸ್ಥಾನ ಕಳ್ಕೊಂಡಿದ್ದರು. ಇವತ್ತು ಮತ್ತೆ ಸೂರ್ಯವಂಶಿ ಕೆಡವಲು ಹಿಂಗೆಗೆ ಅವಕಾಶ ಸಿಗುತ್ತಾ? ಹಿಂಗೆಗೆ ಮತ್ತೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಕ್ಕರೆ, ಸೂರ್ಯವಂಶಿ ಇವತ್ತು ರಿವೇಂಜ್ ತೀರಿಸಿಕೊಳ್ತಾರಾ? ಸಿಕ್ಸರ್ ಮೂಲಕವೇ ಇನ್ನಿಂಗ್ಸ್ ಆರಂಭಿಸುವ ಸೂರ್ಯವಂಶಿ ಮತ್ತು ಜೈಸ್ವಾಲ್ ಮೇಲೆಯೇ ದೊಡ್ಡ ನಿರೀಕ್ಷೆಯಿದೆ.
ಆರ್‌ಆರ್ ಬ್ಯಾಟ್ಸ್‌ಮನ್‌ಗಳು ವರ್ಸಸ್ ಎಸ್‌ಆರ್‌ಹೆಚ್ ಬೌಲರ್ಸ್ ನಡುವೆ ಬಿಗ್ ಫೈಟ್ ನಿರೀಕ್ಷೆಯಿದೆ. ಎಸ್‌ಆರ್‌ಹೆಚ್ ವಿರುದ್ಧ ಸೋತ ನಂತರ ಆರ್‌ಆರ್ ಬ್ಯಾಟ್ಸ್‌ಮನ್‌ಗಳು ಜೋರಾಗಿ ಸಿಡಿದಿಲ್ಲ. ಬೌಲರ್ಸ್‌ಗಳ ನೆರವಿನಿಂದ ಕಳೆದ ಪಂದ್ಯವನ್ನು ಎಲ್‌ಎಸ್‌ಜಿ ವಿರುದ್ಧ ಗೆದ್ದಿದ್ದಾರೆ. ಇಂದು ಮತ್ತೆ ಬಿಗ್‌ಬ್ಯಾಟಲ್ ನಡೀತಿದ್ದು, ಎಸ್‌ಆರ್‌ಹೆಚ್ ಬ್ಯಾಟ್ಸ್‌ಮನ್‌ಗಳು ಕೂಡ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ.. ಅಭಿಶೇಕ್ ಶರ್ಮಾ ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಐಪಿಎಲ್‌ನಲ್ಲಿ ಅಭಿಶೇಕ್ ವರ್ಸಸ್ ಸೂರ್ಯವಂಶಿ ಯುದ್ಧವೂ ನಡೀತಿದೆ. ಅಭಿಶೇಕ್ ಸ್ಥಾನಕ್ಕೆ ಸೂರ್ಯವಂಶಿ ಕಣ್ಣಿದ್ದು, ಭರ್ಜರಿಯಾಗಿ ಆಡ್ತಿದ್ದಾರೆ. ಆದರೆ ಕಳೆದ ಮೂರು ಪಂದ್ಯಗಳಲ್ಲಿ ಸೂರ್ಯವಂಶಿ ಬ್ಯಾಟ್‌ನಿಂದ ಜಾಸ್ತಿ ರನ್ ಬಂದಿಲ್ಲ.. ಸೂರ್ಯವಂಶಿ ವಿರುದ್ಧ ಭರ್ಜರಿ ತಂತ್ರಗಾರಿಕೆಯನ್ನು ಬೌಲರ್‌ಗಳು ರೂಪಿಸುತ್ತಿದ್ದಾರೆ.. ಈ ಪಂದ್ಯದಲ್ಲಿ ಮತ್ತೊಮ್ಮೆ ಸೂರ್ಯವಂಶಿ ವರ್ಸಸ್ ಶರ್ಮಾ ನೇರ ಫೈಟ್ ನಡೆಯಲಿದೆ.
ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಗ್ ಶಾಕ್! – ಮುಖಕ್ಕೆ ಚೆಂಡು ಬಡಿದು ಯುವ ಆಟಗಾರನಿಗೆ ಗಂಭೀರ ಗಾಯ!
ರಾಜಸ್ಥಾನ ರಾಯಲ್ಸ್ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದ್ದು, ತವರಿನಲ್ಲಿ ಪ್ರಾಬಲ್ಯ ಮುಂದುವರಿಸುವ ವಿಶ್ವಾಸದಲ್ಲಿದೆ. ಮಾತ್ರವಲ್ಲ, ಕೆಲದಿನಗಳ ಹಿಂದೆ ಅನುಭವಿಸಿದ ಮುಖಭಂಗಕ್ಕೆ ಸೇಡು ತೀರಿಸಿಕೊಳ್ಳುವುದ್ದಕ್ಕೆ ಕಾಯುತ್ತಿದೆ. ಹೀಗಾಗಿ ಈ ಮಹತ್ವದ ಪಂದ್ಯ ಗೆದ್ದು ನಿರ್ಣಾಯಕ ಪಾಯಿಂಟ್ಸ್ ಗಳಿಸಲು ಎರಡೂ ತಂಡಗಳು ಹೋರಾಟ ನಡೆಸಲಿವೆ.
ಇದೇ ಸೀಸನ್‌ನಲ್ಲಿ ಏಪ್ರಿಲ್ 13 ರಂದು ಈ ಎರಡು ತಂಡಗಳು ಮುಖಾಮುಖಿಯಾಗಿ ರೋಚಕ ಕಾದಟ ನಡೆಸಿದ್ವು. ಪದಾರ್ಪಣೆ ಪಂದ್ಯದಲ್ಲಿ ಹಿಂಗೆ ಮತ್ತು ಸಾಕಿಬ್ ಹುಸೇನ್ ತಲಾ ನಾಲ್ಕು ವಿಕೆಟ್ ಪಡೆದಿದ್ದರೂ.. ರನ್ ಮಳೆ ಹರಿಸುತ್ತಿದ್ದ ವೈಭವ್ ಸೂರ್ಯವಂಶಿಯನ್ನ ಡಕೌಟ್ ಮಾಡಿ ಚಮತ್ಕಾರ ಮಾಡಿದ್ರು. ಹಾಗಂತ ಸನ್‌ರೈಸರ್ಸ್ ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಅನುಭವಿ ಆಟಗಾರರು ಅಲ್ಲ, ಅನುಭವಿ ಪ್ಯಾಟ್ ಕಮಿನ್ಸ್ ಗೈರಿನಲ್ಲೂ ಸುಧಾರಣೆ ಕಾಣುತ್ತಿದೆ. ಕಳೆದ ಪಂದ್ಯದಲ್ಲಿ ಹೊಸ ಬೌಲರ್‌ರಗಳನ್ನ ಆರ್‌ಆರ್ ವಿರುದ್ಧ ಕಣಕ್ಕಿಳಿಸಿ ಹೈದಾರಾಬಾದ್ ಮ್ಯಾಜೀಕ್ ಮಾಡಿತ್ತು. ಈ ಸಲ ಕೂಡ ಹೊಸ ರೀತಿಯಲ್ಲಿ ತನ್ನ ಬೌಲಿಂಗ್ ಪಡೆಯನ್ನ ಆರ್‌ಆರ್ ವಿರುದ್ಧ ಬಳಸಿಕೊಳ್ಳುವುದ್ದಕ್ಕೆ ಪ್ಲ್ಯಾನ್ ಮಾಡ್ತಿದೆ SRH. ಹಿಂಗೆಯನ್ನ ಕೇವಲ RR ವಿರುದ್ಧ ಮಾತ್ರ SRH ಕಣಕ್ಕಿಳಿಸಿತ್ತು. ನಂತ್ರ ಯಾವುದೇ ಪಂದ್ಯದಲ್ಲಿಚಾನ್ಸ್ ಕೊಟ್ಟಿರಲಿಲ್ಲ. ಇವತ್ತಿನ ಪಂದ್ಯದಲ್ಲಿ ಪ್ಲೇಯಿಂಗ್11ನಲ್ಲಿ ಪ್ರಫುಲ್ ಹಿಂಗೆಗೆ ಚಾನ್ಸ್ ಸಿಗುತ್ತಾ ಅನ್ನೋ ಪ್ರಶ್ನೆ ಕ್ರಿಕಟ್ ಫ್ಯಾನ್ಸ್‌ನ ಕಾಡುತ್ತಿದೆ.
ರಾಜಸ್ಥಾನ ರಾಯಲ್ಸ್ ತಂಡ ಏಳು ಪಂದ್ಯಗಳಲ್ಲಿ ಐದು ಗೆದ್ದು ಉತ್ತಮ ಆರಂಭ ಮಾಡಿದೆ. ಎದುರಾಳಿ ತಂಡದ ಕ್ರೌರ್ಯ ಕುಸಿಯುವಂತೆ ಆಡಬಲ್ಲ ವೈಭವ ಸೂರ್ಯವಂಶಿ, ಭಾರತ ತಂಡದ ಆಟಗಾರ ಯಶಸ್ವಿ ಜೈಸ್ವಾಲ್, ಧ್ರುವ್ ಜುರೇಲ್ ಅಂಥ ಬ್ಯಾಟರ್‌ಗಳಿದ್ದಾರೆ. ನಾಯಕ ರಿಯಾನ್ ಪರಾಗ್ ಮಾತ್ರ ರನ್‌ಗಳಿಸೋಕೆ ಪರದಾಡುತ್ತಿದ್ದಾರೆ
ಹಿಂಗೆ ಬೌಲಿಂಗ್‌ಗೆ ಹೆದರಿದ್ರಾ ಸೂರ್ಯವಂಶಿ
ಕಳೆದ ಪಂದ್ಯದಲ್ಲಿ ಹೈದಾರಾಬಾದ್‌್ನ ಹಿಂಗೆ ಬೌಲಿಂಗ್‌ನಲ್ಲಿ ವಿರುದ್ಧ ಸೂರ್ಯವಂಶಿ ಡೌಕ್‌ಔಟ್ ಆಗಿದ್ದು, ಆರ್‌ಆರ್‌ನಲ್ಲಿ ಭಯ ಹುಟ್ಟಿಸಿದೆ. ಯಾಕಂದ್ರೆ SRH ವಿರುದ್ಧದ ಪಂದ್ಯದ ನಂತ್ರ ವೈಭವ್ ಹೊಡಿಬಡಿ ಆಟಕ್ಕೆ ಬ್ರೇಕ್ ಬಿದ್ದಂತೆ ಆಗಿದೆ. ಇವರ ಬ್ಯಾಟ್‌ನಿಂದ ಹೆಚ್ಚು ರನ್‌ಗಳು ಬರ್ತಿಲ್ಲ. ಎಸ್‌ಆರ್‌ಹೆಚ್ ನಂತ್ರದ ಪಂದ್ಯದಲ್ಲಿ ವೈಭವ್ 3 ಪಂದ್ಯಆಡಿದ್ದಾರೆ ಆದ್ರೆ,ಹೇಳಿಕೊಳ್ಳುವಂತಹ ಸ್ಕೋರ್‌ನ ವೈಭವ್ ಮಾಡಿಲ್ಲ. ಆದ್ರೆ ಇವರು ಯಾವಾಗ ಹೇಗೆ ಆಡ್ತಾರೆ ಅಂತ ಜಡ್ಜ್ ಮಾಡೋದು ಕಷ್ಟ ಅಂತಾನೇ ಹೇಳಬಹುದು..
ನ್ನು ಯಶಸ್ವಿ ಜೈಸ್ವಾಲ್ ಅವರು ಆರಂಭದಲ್ಲಿ ಸ್ಥಿರತೆಯ ಜೊತೆ ಆಕ್ರಮಣದ ಆಟ ಆಡಬಲ್ಲರು. 49ರ ಸರಾಸರಿಯಲ್ಲಿ 245 ರನ್ ಕಲೆಹಾಕಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜೋಫ್ರಾ ಅರ್ಚರ್ 7 ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದಾರೆ. ಭಾರತ ತಂಡದ ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಲಖನೌ ವಿರುದ್ದ ಅಜೇಯ 43 ರನ್ ಹೊಡೆದು ತಂಡ ಹೋರಾಟದ ಮೊತ್ತ ಗಳಿಸಲು ನೆರವಾಗಿದ್ದರು. ಇದು ತಂಡದ ವಿಶ್ವಾಸ ಹೆಚ್ಚಿಸಿದೆ.
ಈ ಹಿಂದಿನ ಮುಖಾಮುಖಿ ವೇಳೆ ಸನ್‌ರೈಸರ್ಸ್ ನಾಯಕ ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಮಿಂಚಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೋದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಬ್ಬರಿಸಿದ್ದರು. ಇವತ್ತು ಕೂಡ ಆರ್‌ಆರ್ ವಿರುದ್ಧ ಗೆಲ್ಲೋಕೆ SRH ಬ್ಯಾಟರ್ಸ್ ಪಣ ತೊಟ್ಟಿದ್ದಾರೆ..
ಏಪ್ರಿಲ್ 13ರಂದು ನಡೆದ ಪಂದ್ಯವನ್ನು ಹೈದರಾಬಾದ್ ತಂಡ 57 ರನ್‌ಗಳಿಂದ ಗೆದ್ದು ಸನ್‌ರೈಸರ್ಸ್ ನಾಗಾಲೋಟಕ್ಕೆ ತಡೆಹಾಕಿತ್ತು. ಆ ಸೇಡನ್ನ ಇವತ್ತು ಆರ್‌ಆರ್ ತನ್ನ ತವರು ಮೈದಾನದಲ್ಲಿ ತಿರಿಸಿಕೊಳ್ಳುವುದ್ದಕ್ಕೆ ಕಾಯುತ್ತಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಆರ್‌ಆರ್ 3ನೇ ಸ್ಥಾನದಲ್ಲಿದ್ರೆ, SRH 4ನೇ ಸ್ಥಾನದಲ್ಲಿದೆ. ಹೀಗಾಗಿ ಇವತ್ತಿನ ಗೆಲುವು ಎರಡೂ ತಂಡಕ್ಕೂ ಮುಖ್ಯ ಅಂತಾನೇ ಹೇಳಬಹುದು. ಎರಡೂ ತಂಡಗಳಲ್ಲಿ ಆರಂಭದಲ್ಲೇ ಬೀಸಾಟವಾಡುವ ಬ್ಯಾಟರ್‌ಗಳಿದ್ದಾರೆ, ಹಾಗೇ ಮ್ಯಾಜೀಕ್ ಮಾಡೋ ಹೊಸ ಹೊಸ ಬೌಲರ್‌ಗಳಿದ್ದಾರೆ.

ನೋಡಿರಿ

