ಯುವಕನಂತಾಗಲು ನಿತ್ಯ 16 ಕೋಟಿ ರೂ. ಖರ್ಚು! – ಹೇಗಿದೆ ಗೊತ್ತಾ ಈತನ ದಿನಚರಿ?
ಯೌವನ ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರು ತಾವು ಚಿರಯುವಕ ಯುವತಿಯರಂತೆ ಕಾಣಿಸಿಕೊಳ್ಳಬೇಕೆಂದು ಬಯಸುತ್ತಾರೆ. ಕೆಲವರಂತೂ ತಮ್ಮ ವಯಸ್ಸನ್ನು ಮರೆಮಾಚಲು ಸಾಕಷ್ಟು ಸರ್ಕಸ್ ಮಾಡುತ್ತಾರೆ. ತಾವು ಅಂದವಾಗಿ ಕಾಣಿಸಬೇಕೆಂದು ಶಸ್ತ್ರಚಿಕಿತ್ಸೆಗೂ ಒಳಗಾಗುತ್ತಾರೆ. ಇದರ ಹಿಂದೆ ಅಲೆಕ್ಸಾಂಡರ್ನಂತಹ ಮಹಾನ್ ದಂಡನಾಯಕನೂ ಬಿದ್ದಿದ್ದ. ಆದರೆ ತಮ್ಮ ವಯಸ್ಸನ್ನೇ ಇಳಿಸಬಹುದು ಅಂತ ಎಲ್ಲಿಯಾದರೂ ಕೇಳಿದ್ದೀರಾ? ಇಲ್ಲೊಬ್ಬ ವ್ಯಕ್ತಿ ತನ್ನ ವಯಸ್ಸನ್ನೇ ಕಡಿಮೆಗೊಳಿಸುತ್ತಿದ್ದಾನಂತೆ!
ಹೌದು, ಬಯೊಟೆಕ್ ಕಂಪೆನಿಯ ಸಿಇಒ ಜಾನ್ಸನ್ ಎಂಬಾತನಿಗೆ ಈಗ 45 ವರ್ಷ ವಯಸ್ಸು. ಈಗ ಈತನಿಗೆ 18 ವರ್ಷದವನಂತೆ ಕಾಣುವ ಬಯಕೆಯಾಗಿದ್ಯಂತೆ. ಹಾಗಾಗಿ ಆತ ಚಿರ ಯೌವನದ ಹಿಂದೆ ಬಿದ್ದಿದ್ದಾನೆ. ಅದಕ್ಕಾಗಿ ಆತ ಪ್ರತಿನಿತ್ಯ ಬರೋಬ್ಬರಿ 16 ಕೋಟಿ ರೂ. ಖರ್ಚು ಮಾಡುತ್ತಾನಂತೆ! ಈಗಾಗಲೇ ಜಾನ್ಸನ್ “ಪ್ರಾಜೆಕ್ಟ್ ಬ್ಲೂಪ್ರಿಂಟ್” ಮೂಲಕ ತನ್ನ ಎಪಿಜೆನೆಟಿಕ್ ವಯಸ್ಸನ್ನು 5.1 ವರ್ಷಗಳಷ್ಟು ಕಡಿಮೆಗೊಳಿಸಿರುವುದಾಗಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾನೆ.
ಇದನ್ನೂ ಓದಿ: ಮಂಗಳನ ಅಂಗಳ ಮುಟ್ಟಲು 7 ತಿಂಗಳಲ್ಲ 45 ದಿನ ಸಾಕು – ಇತಿಹಾಸ ಬರೆಯುತ್ತಾ ಹೊಸ ಯೋಜನೆ..!?
ಇದಕ್ಕಾಗಿ ಜಾನ್ಸನ್ 30 ವೈದ್ಯಕೀಯ ತಜ್ಞರ ತಂಡವನ್ನು ಹೊಂದಿದ್ದಾನೆ. ಅವರು ಈತನ ಯೌವನವನ್ನು ಕಾಪಾಡಲು ಸಹಾಯ ಮಾಡುತ್ತಿದ್ದಾರಂತೆ. ಇತ್ತೀಚಿನ ವರದಿಯ ಪ್ರಕಾರ ಜಾನ್ಸನ್ನ ಪ್ರತಿಯೊಂದು ಅಂಗಗಳಲ್ಲಿ ವಯಸ್ಸಾಗುವ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಲು ವೈದ್ಯರು ಅವಿರತವಾಗಿ ಕೆಲಸ ಮಾಡುತ್ತಿದ್ದಾರಂತೆ. ಈ ವರ್ಷ ಆತ ಅದಕ್ಕಾಗಿ ಬರೋಬ್ಬರಿ 2 ಮಿಲಿಯನ್ ಡಾಲರ್ ಗಳನ್ನು ಖರ್ಚು ಮಾಡಲಿದ್ದಾನಂತೆ!
ಪ್ರಾಜೆಕ್ಟ್ ಬ್ಲೂಪ್ರಿಂಟ್ ಅಡಿಯಲ್ಲಿ ಜಾನ್ಸನ್ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುತ್ತಾನಂತೆ. ದಿನಕ್ಕೆ 1,977 ಕ್ಯಾಲೊರಿಗಳಷ್ಟು ಸಸ್ಯಾಹಾರಿ ಆಹಾರವನ್ನು ಮಾತ್ರ ಸೇವಿಸುತ್ತಾನಂತೆ. ಅಲ್ಲದೇ ನಿತ್ಯ ಒಂದು ಗಂಟೆ ವ್ಯಾಯಾಮ ಮಾಡುತ್ತಾನೆ. ಪ್ರತಿ ರಾತ್ರಿ ಒಂದೇ ಸಮಯಕ್ಕೆ ಮಲಗುತ್ತಾನೆ. ಹಾಗೇ ನಿತ್ಯ ಬೆಳಗ್ಗೆ 5 ಗಂಟೆಗೆ ಏಳುತ್ತಾನಂತೆ. ಬೆಳಿಗ್ಗೆ ಎರಡು ಡಜನ್ಗಳಷ್ಟು ಸಪ್ಲಿಮೆಂಟ್ ಗಳನ್ನು ಮತ್ತು ಕ್ರಿಯೇಟೈನ್ ಮತ್ತು ಕಾಲಜನ್ ಪೆಪ್ರೈಡ್ಗಳ ಜೊತೆಗೆ ಹಸಿರು ತರಕಾರಿ ಅಥವಾ ಸೊಪ್ಪಿನ ರಸವನ್ನು ಕುಡಿಯುತ್ತಾನಂತೆ.
ಜಾನ್ಸನ್ ತನ್ನ ಶರೀರದ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದಾನಂತೆ. ನಿತ್ಯ ಆತನ ಶರೀರದ ಪ್ರಮುಖ ಅಂಶಗಳನ್ನು ಅಳೆದು ಮೇಲ್ವಿಚಾರಣೆ ಮಾಡಲಾಗುತ್ತದೆ. ಅಲ್ಟಾಸೌಂಡ್ಗಳು, ಎಂಆರ್ಐಗಳು, ಕೊಲೊನೋಸ್ಕೋಪಿಗಳು ಮತ್ತು ರಕ್ತ ಪರೀಕ್ಷೆಗಳನ್ನೂ ಮಾಡಿಸಿಕೊಳ್ಳುತ್ತಿದ್ದಾನಂತೆ. ಆತನ ದೇಹದ ತೂಕ, ದೇಹದ ಕೊಬ್ಬು, ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳು ಮತ್ತು ಹೃದಯ ಬಡಿತದ ವ್ಯತ್ಯಾಸಗಳನ್ನು ಪ್ರತಿದಿನ ಅಳೆಯಲಾಗುತ್ತದಂತೆ. ಅಷ್ಟೇ ಅಲ್ಲದೇ ರಾತ್ರಿ ನಿದ್ದೆಯಲ್ಲಿ ಈತ ಎಷ್ಟು ಬಾರಿ ಕನಸಿನಲ್ಲಿ ಲೈಂಗಿಕ ಆಸಕ್ತಿಗೆ ಒಳಗಾಗುತ್ತಾನೆ ಎಂಬುದನ್ನೂ ಒಂದು ಯಂತ್ರ ಟ್ರ್ಯಾಕ್ ಮಾಡುತ್ತದೆ. ಅದು ಹದಿಹರೆಯದವರಂತೆಯೇ ಇರುತ್ತದೆ ಎಂದು ವರದಿಗಳು ಹೇಳಿವೆ. ಒಟ್ಟಿನಲ್ಲಿ ಚಿರಯೌವನದ ಹುಚ್ಚು ಇರುವ ತನಕವೂ ಜಗತ್ತಿನಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ.
2 yrs of Blueprint:
.5.1 yrs epigenetic age reversal (world record)
.slowed my pace of aging by 24%
.perfect muscle & fat (MRI)
.50+ perfect biomarkers
.100+ markers < chronological age
.fitness tests = 18yr old
.Body runs 3F° coolerAvailable to all: https://t.co/Ye5mQPH9NH
— Bryan Johnson (@bryan_johnson) January 18, 2023