ಬೆಂಕಿ ಬಿಸಿಲಿಗೆ ರಾಜ್ಯದ ಜನ ಸುಸ್ತು – ಹೀಟ್ ವೇವ್ ಅಪಾಯದಿಂದ ಪಾರಾಗಲು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

ರಾಜ್ಯದಲ್ಲಿ ದಿನೇ ದಿನೇ ಬೆಂಕಿ ಬಿಸಿಲು ಮೈ ಸುಡುತ್ತಿದೆ. ಬಿಸಿಲಿಗೆ ಹೋದರೆ ಸಾಕು ದೇಹ ನಿತ್ರಾಣವಾಗುತ್ತಿದೆ. ಜನ ಸುಸ್ತಾಗಿ ಹೋಗಿದ್ದಾರೆ. ಇದೀಗ ಈ ಹೀಟ್ ವೇವ್ ಅಬ್ಬರ ತಡೆಯಲು ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ವೇಳೆ ಪ್ರವಾಸಿಗರ ಮೇಲೆ ಕಾಡಾನೆ ಅಟ್ಯಾಕ್! – ಆಮೇಲೆ ಏನಾಯ್ತು?
ಹೀಟ್ ವೇವ್ ಅಪಾಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಆರೋಗ್ಯ ಇಲಾಖೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದೆ. ಜನರ ಆರೋಗ್ಯ ಕಾಪಾಡಲು ಹಾಗೂ ತುರ್ತು ಪರಿಸ್ಥಿತಿಯನ್ನು ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ಆರೋಗ್ಯ ಇಲಾಖೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಆರೋಗ್ಯ ಅಧಿಕಾರಿಗಳಿಗೆ ವಿಶೇಷ ಮಾರ್ಗಸೂಚಿ ಕಳುಹಿಸಲಾಗಿದ್ದು, ಅವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ತಿಳಿಸಲಾಗಿದೆ.
ಆರೋಗ್ಯ ಇಲಾಖೆಯ ನಿರ್ದೇಶನದ ಪ್ರಕಾರ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ Heat Stroke Management Room ಸ್ಥಾಪನೆ ಕಡ್ಡಾಯವಾಗಿದೆ. ಈ ವಿಶೇಷ ಕೊಠಡಿಗಳು 1 ಏಪ್ರಿಲ್ 2026 ರಿಂದ 31 ಮೇ 2026 ರವರೆಗೆ ಸಕ್ರಿಯವಾಗಿರಬೇಕು. ಈ ಅವಧಿಯಲ್ಲಿ ಹೀಟ್ ಸ್ಟ್ರೋಕ್ ಸಂಬಂಧಿತ ಎಲ್ಲಾ ತುರ್ತು ಪ್ರಕರಣಗಳಿಗೆ ಇಲ್ಲಿಯೇ ತಕ್ಷಣ ಚಿಕಿತ್ಸೆ ನೀಡುವ ವ್ಯವಸ್ಥೆ ಇರಬೇಕು ಎಂದು ತಿಳಿಸಲಾಗಿದೆ.
ಪ್ರತಿಯೊಂದು ಕೇಂದ್ರದ ಈ ಕೊಠಡಿಯಲ್ಲಿ ಕನಿಷ್ಠ 2 ಹಾಸಿಗೆಗಳು ಇರಬೇಕು. ಜೊತೆಗೆ ಹೀಟ್ ಸ್ಟ್ರೋಕ್ ಚಿಕಿತ್ಸೆಗಾಗಿ ಅಗತ್ಯವಾದ ಔಷಧಿಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಬೇಕು. ಈ ಕೊಠಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹೀಟ್ ಸ್ಟ್ರೋಕ್ ಗುರುತಿಸುವುದು, ಮೊದಲ ನೆರವು ನೀಡುವುದು ಹಾಗೂ ಮುಂದಿನ ಚಿಕಿತ್ಸಾ ಕ್ರಮಗಳ ಬಗ್ಗೆ ವಿಶೇಷ ತರಬೇತಿ ನೀಡುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಈ ಕೊಠಡಿಯಲ್ಲಿ Fan, Ice cubes, Thermometers ಮುಂತಾದ ಅಗತ್ಯ ವಸ್ತುಗಳನ್ನು ಒದಗಿಸಬೇಕಾಗಿದೆ. ರೋಗಿಗೆ ತಕ್ಷಣ ಶರೀರದ ಉಷ್ಣತೆಯನ್ನು ಕಡಿಮೆ ಮಾಡುವ ವ್ಯವಸ್ಥೆ, ತಂಪು ನೀರು, ತಣ್ಣನೆಯ ಕಾಂಪ್ರೆಸ್ ಇತ್ಯಾದಿ ಸಿದ್ಧವಾಗಿರಬೇಕು. ಹೀಟ್ ಸ್ಟ್ರೋಕ್ ರೋಗಿಗಳು ಬಂದ ತಕ್ಷಣ ವಿಳಂಬವಿಲ್ಲದೆ ಚಿಕಿತ್ಸೆ ಆರಂಭಿಸಲು ಆಸ್ಪತ್ರೆಗಳು ಸಜ್ಜಾಗಿರಬೇಕು. ಜನರಿಗೆ ದೇಹದಲ್ಲಿ ನೀರಿನ ಅಲಕ್ಷಣ ಉಂಟಾಗದಂತೆ ಮಾಡಲು ORS (Oral Rehydration Solution) ಕೌಂಟರ್‌ಗಳನ್ನು ಸ್ಥಾಪಿಸುವುದು ಮತ್ತೊಂದು ಪ್ರಮುಖ ಕ್ರಮ. ಆಸ್ಪತ್ರೆಗೆ ಬರುವ ಜನರಿಗೆ ಉಚಿತವಾಗಿ ಅಥವಾ ಸುಲಭವಾಗಿ ORS ದೊರೆಯುವಂತೆ ನೋಡಿಕೊಳ್ಳಬೇಕು.
ಹೆಚ್ಚು ಬಿಸಿಲಿನ ಸಮಯದಲ್ಲಿ, ವಿಶೇಷವಾಗಿ ಮಧ್ಯಾಹ್ನ ಸಮಯದಲ್ಲಿ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಿಕೊಳ್ಳಬೇಕು. ಹೊರಗೆ ಹೋಗಬೇಕಾದರೆ ತಲೆಯನ್ನು ಮುಚ್ಚಿಕೊಳ್ಳುವುದು, ಛತ್ರಿ ಬಳಸುವುದು, ನೆರಳಿನಲ್ಲಿ ಸಾಗುವುದು ಮುಂತಾದ ಕ್ರಮಗಳನ್ನು ಪಾಲಿಸಬೇಕು. ದಿನಪೂರ್ತಿ ಸಾಕಷ್ಟು ನೀರು ಕುಡಿಯಬೇಕು, ದೇಹದಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಜನರಿಗೂ ನಿರ್ದೇಶನ ನೀಡಿದೆ.

ನೋಡಿರಿ

