ಲೆನ್ಸ್‌ಕಾರ್ಟ್ ಆಯ್ತು.. ಈಗ ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲೂ ಸಿಬ್ಬಂದಿಗಳಿಗೆ ಬಿಂದಿ, ತಿಲಕ ನಿರ್ಬಂಧ!

ಇತ್ತೀಚೆಗೆ ಖಾಸಗಿ ಸಂಸ್ಥೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ನಿಯಮಗಳನ್ನು ತರುತ್ತಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗಷ್ಟೇ ಕನ್ನಡಕ ಮಾರಾಟ ಸಂಸ್ಥೆ ಲೆನ್ಸ್‌ಕಾರ್ಟ್ ತನ್ನ ಉದ್ಯೋಗಿಗಳಿಗೆ ಬಿಂದಿ, ಕುಂಕುಮ ಧರಿಸುವುದನ್ನು ನಿಷೇಧಿಸಿ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಇಂಡಿಗೊ ಏರ್ ಲೈನ್ಸ್ ಕೂಡ ಇದೇ ರೀತಿಯ ನಿಯಮವನ್ನು ಹೊರಡಿಸಿ ವಿವಾದಕ್ಕೆ ಒಳಗಾಗಿದೆ.
ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಗ್ ಶಾಕ್! – ಮುಖಕ್ಕೆ ಚೆಂಡು ಬಡಿದು ಯುವ ಆಟಗಾರನಿಗೆ ಗಂಭೀರ ಗಾಯ!
ಇಂಡಿಗೋ ವಿಮಾನಯಾನ ಸಂಸ್ಥೆ ಸಿಬ್ಬಂದಿಗಳಿಗೆ ತಿಲಕ್, ಸಿಂಧೂರ್, ಮಂಗಳಸೂತ್ರ, ಕೈಗೆ ಕಟ್ಟುವ ದಾರ ಮುಂತಾದ ವಸ್ತುಗಳನ್ನು ನಿಷೇಧಿಸಲಾಗಿದೆ. ಇದೀಗ ಇಂಡಿಗೋದ ಕಂಪನಿ ವಿಧಿಸಿರುವ ರೂಲ್ಸ್ ಕಾಪಿಯ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗುತ್ತಿದೆ. ಇದ್ರಲ್ಲಿ ಸಿಬ್ಬಂದಿಗಳಿಗೆ ತಿಲಕ್, ಸಿಂಧೂರ್, ಮಂಗಳಸೂತ್ರ, ಕೈಗೆ ಕಟ್ಟುವ ದಾರ ಮುಂತಾದ ವಸ್ತುಗಳನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ. ಬಳಕೆದಾರರು ವಿಮಾನ ಯಾನ ಸಂಸ್ಥೆಯನ್ನು “ಸಂಪೂರ್ಣ ಬಹಿಷ್ಕರಿಸಲು ನಿರ್ಧಾರಿಸಿದ್ದಾರೆ. ಹಿಂದುಗಳ ಧಾರ್ಮಿಕ ಮನೋಭಾವನೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅನೇಕರು ಟೀಕೆಯನ್ನು ವ್ಯಕ್ತ ಪಡಿಸಿದ್ದಾರೆ.
X ಬಳಕೆದಾರ @AnuDagar ಈ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು ಈ ವಿವಾದ ತಾರಕಕ್ಕೆ ಹೋಗಿದೆ. ಇಂಡಿಗೋದ ಸಿಬ್ಬಂದಿಗಳು ತಿಲಕ್, ಸಿಂಧೂರ್, ಮಂಗಳಸೂತ್ರ ಮತ್ತು ಕಲವಾ ಮುಂತಾದ ವಸ್ತು ಗಳನ್ನು ಧರಿಸಲು ಸ್ಪಷ್ಟವಾಗಿ ನಿಷೇಧಿಸಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಬೇರೆ ಧಾರ್ಮಿಕ ಗುರುತು ಗಳಿಗೆ ಹಿಜಾಬ್ ಹಾಗೂ ಪೇಟ ಧರಿಸಲು ರಿಯಾಯಿತಿ ನೀಡಿ, ಹಿಂದೂ ಸಂಪ್ರದಾಯದ ವಸ್ತುಗಳನ್ನು ನಿಷೇಧಿಸಿರುವುದು ತಪ್ಪು ಎಂದು ಅನೇಕರು ಕಿಡಿಕಾರಿದ್ದಾರೆ. ಖಾಸಗಿ ಕಂಪನಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ಸರ್ಕಾರವು ನಿರ್ದಿಷ್ಟ ಮಾರ್ಗಸೂಚಿ ನಿಯಮವನ್ನು ಜಾರಿಗೆ ತರಬೇಕು ಎಂದು ಅನೇಕರು ವಿನಂತಿಸಿದ್ದಾರೆ. ಇತ್ತೀಚೆಗೆ ಲೆನ್ಸ್ ಕಾರ್ಡ್ ವಿವಾದಕ್ಕೆ ಒಳಗಾಗುತ್ತಿದ್ದಂತೆ ಸಿಇಒ ಪಿಯೂಷ್ ಬನ್ಸಾಲ್ ಇದು ಹಳೆಯ ಮಾರ್ಗಸೂಚಿ ಎಂದು ತಿಳಿಸಿ ಕ್ಷಮೆಯಾಚಿಸಿದರು. ಆದರೆ ಈ ವಿವಾದದ ಬಗ್ಗೆ ಇಂಡಿಗೋ ಸಂಸ್ಥೆಯು ಯಾವುದೇ ಹೇಳಿಕೆ ನೀಡಿಲ್ಲ. ಜನರು ಮಾತ್ರ ಈ ಸ್ಕ್ರೀನ್ ಶಾಟ್ ದಾಖಲೆಯ ಬಗ್ಗೆ ಗರಂ ಆಗಿದ್ದಾರೆ.

ನೋಡಿರಿ

