ಬೆಂಗಳೂರಿಗೆ ಗೆಲುವಿನ ವಿದಾಯ – GTಗೆ ಗುಮ್ಮಿದ ಪಡಿಕ್ಕಲ್, ಕೊಹ್ಲಿ
RCB ಪ್ಲೇಆಫ್ ಪಕ್ಕಾ ಆಯ್ತಾ?

ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಮನಸ್ಸು ಮಾಡಿದ್ರೆ ಎದುರಾಳಿಗಳು ಎಷ್ಟೇ ಟಾರ್ಗೆಟ್ ನೀಡಿದ್ರು ಉಡೀಸ್ ಆಗೋದು ಪಕ್ಕಾ.. ಆರ್‌ಸಿಬಿ VS GT ಮ್ಯಾಚ್‌ನಲ್ಲಿ ಅದನ್ನ ನಮ್ಮ ಕಿಂಗ್ ಸಾಬೀತು ಮಾಡಿದ್ದಾರೆ. ಕಿಂಗ್ ಕೊಹ್ಲಿ ಮತ್ತೊಮ್ಮ ನಾನು ಚೇಸ್ ಮಾಸ್ಟರ್ ಅನ್ನೋದ್ದನ್ನ ಇಡೀ ಪ್ರಪಂಚಕ್ಕೆ ಚಿನ್ನಸ್ವಾಮಿಯಲ್ಲಿ ಸಾರಿ ಸಾರಿ ಹೇಳಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ಕನ್ನಡಿಗ ದೇವದತ್ ಪಡಿಕ್ಕಲ್ ಆವರೊಂದಿಗೆ ಶತಕದ ಜೊತೆಯಾಟ ಆಡಿದ ವಿರಾಟ್ ಆರ್‌ಸಿಬಿ 5 ವಿಕೆಟ್ ಗೆಲುವು ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಮೂಲಕ ಆಡಿರುವ 7 ಪಂದ್ಯಗಳಲ್ಲಿ 5ನ್ನು ಗೆದ್ದು 10 ಅಂಕ ಸಂಪಾದಿಸಿರುವ ರಜತ್ ಪಾಟೀದಾರ್ ಬಳಗ ಇದೀಗ ಐಪಿಎಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿ ಕುಳಿತಿದೆ. ರಣಬೇಟೆಗಾರರ ತರ GT ನೀಡಿದ 205 ರನ್‌ಗಳ ಟಾರ್ಗೆಟ್‌ನ್ನ ಆರ್‌ಸಿಬಿ ತುಂಬಾ ಈಸಿಯಾಗಿ ಚೇಸ್ ಮಾಡಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಆರ್‌ಸಿಬಿಗೆ 50ನೇ ಗೆಲುವು – ಸುದರ್ಶನ್ ಶತಕ ವ್ಯರ್ಥ, ಸೋತು ಶರಣಾದ ಗಿಲ್ ಪಡೆ
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ನಂತ್ರ ಅಖಾಡಕ್ಕೆ ಆರ್‌ಸಿಬಿ ಪಡೆ ಚೇಸ್ ಮಾಡೋಕೆ ಇಳಿತು. ಫಿಲ್ ಸಾಲ್ಟ್ ಗಾಯಾಳುವಾಗಿರುವ ಕಾರಣ ಈ ಸೀಸನ್ ನಲ್ಲಿ ಮೊದಲ ಬಾರಿ ಕಣಕ್ಕಿಳಿದ ಬೆಥೆಲ್ 10 ಎಸೆತದಲ್ಲಿ 14 ರನ್ ಗಳಿಸಿ ಬೇಗನೇ ಪೆವಿಲಿಯನ್ ಸೇರಿಕೊಂಡು ನಿರಾಸೆ ಮೂಡಿಸಿದರು. ಆದರೆ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಮಹತ್ವದ ಶತಕದ ಜೊತೆಯಾಟ ಪಂದ್ಯವನ್ನು ಸಂಪೂರ್ಣವಾಗಿ ಗುಜರಾತ್ ಟೈಟಾನ್ಸ್ ಕೈಯಿಂದ ಕಿತ್ತುಕೊಂಡಿತು.
ಕೇವಲ 47 ಎಸೆತಗಳಲ್ಲಿ 100 ರನ್ ಗಳನ್ನು ಬಾಚಿದ ಇವರಿಬ್ಬರು ಎರಡನೇ ವಿಕೆಟ್ ಗೆ 115ರನ್ ಗಳ ಮಹತ್ವದ ಜೊತೆಯಾಟವಾಡಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ದೇವದತ್ ಪಡಿಕ್ಕಲ್ ಅವರು ಔಟಾಗುವ ಮುನ್ನ 27 ಎಸೆತಗಳಲ್ಲಿ 55 ರನ್ ಚಚ್ಚಿದರು. ಅದರಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದವು. ಇನ್ನು 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ ಅವರು ಔಟಾಗುವ ಮುನ್ನ 8 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನು ಒಳಗೊಂಡ 81 ರನ್ ಗಳಿಸಿದ್ದರು. 8ನೇ ಓವರ್ ನಲ್ಲಿ ರಶೀದ್ ಖಾನ್ ಅವರ ಎಸೆತವನ್ನು ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್ ನಲ್ಲಿ 300 ಸಿಕ್ಸರ್ ಗಳ ಮೈಲಿಗಲ್ಲು ದಾಟಿದ 3ನೇ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾದರು. ಅಂತಿಮವಾಗಿ ಆರ್‌ಸಿಬಿGT ನೀಡಿದ ರನ್ ಚೇಸ್ ಮಾಡಿ ಭರ್ಜರಿ ಗೆಲುವು ದಾಖಲಿಸಿತ್ತು. ಇದು ಚಿನ್ನಸ್ವಾಮಿಯಲ್ಲಿ ಈ ಸೀಸನ್‌ನ ಕೊನೆ ಪಂದ್ಯ ಆಗಿದ್ರಿಂದ ಫ್ಯಾನ್ಸ್ ಕೂಡ ಈ ಪಂದ್ಯದ ಮೇಲೆ ಸಾಕಷ್ಟು ಹೋಪ್ ಇಟ್ಕೊಂಡಿದ್ರು. ಆರ್‌ಸಿಬಿ ಕೂಡ ತನ್ನ ಫ್ಯಾನ್ಸ್ ಗೆ ಭರ್ಜರಿ ಮಜಾ ನೀಡಿದೆ.
ವಿರಾಟ್ ಕೊಹ್ಲಿ ಕ್ಯಾಚ್ ಬಿಟ್ಟು ಕೆಟ್ಟ GT
ಇನ್ನೂ GT ಸೋಲಿಗೆ ಪ್ರಮುಖ ಕಾರಣ ಅಂದ್ರೆ ವಿರಾಟ್ ಕೊಹ್ಲಿ ಕ್ಯಾಚ್ ಬಿಟ್ಟಿದ್ದು ಅಂತಾನೇ ಹೇಳಬಹುದು. ಮೊಹಮ್ಮದ್ ಸಿರಾಜ್ ಓವರ್‌ನಲ್ಲಿ ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದರು. ಆದರೆ ವಾಷಿಂಗ್ಟನ್ ಸುಂದರ್ ಸುಲಭವಾದ ಕ್ಯಾಚ್ ಪಡೆಯಲು ವಿಫಲರಾಗಿ ಕೊಹ್ಲಿಗೆ ಜೀವದಾನ ನೀಡಿದರು. ಇದರ ಸಂಪೂರ್ಣ ಲಾಭ ಪಡೆದ ಚೇಸ್ ಮಾಸ್ಟರ್ 81 ರನ್ ಬಾರಿಸಿದರು.
300 ಸಿಕ್ಸರ್‌ಗಳನ್ನು ಸಿಡಿಸಿದ KING
ಇನ್ನು ಕೊಹ್ಲಿ ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳನ್ನು ಸಿಡಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಕೊಹ್ಲಿಗೆ 300 ಸಿಕ್ಸರ್ ಪೂರ್ಣಗೊಳಿಸಲು ಒಂದು ಸಿಕ್ಸರ್‌ನ ಅಗತ್ಯವಿತ್ತು. ಗುಜರಾತ್ ವಿರುದ್ಧ ಇವರು 4 ಸಿಕ್ಸರ್ ಬಾರಿಸಿ ದಾಖಲೆಯನ್ನು ನಿರ್ಮಿಸಿದರು. ಈ ಮೂಲಕ, ಕೊಹ್ಲಿ ಕ್ರಿಸ್ ಗೇಲ್ ಮತ್ತು ರೋಹಿತ್ ಶರ್ಮಾ ಒಳಗೊಂಡ ವಿಶೇಷ ಕ್ಲಬ್‌ಗೆ ಸೇರಿದರು.
ಆರೆಂಜ್ ಕ್ಯಾಪ್ ಪಡೆದ ಚೇಸ್ ಮಾಸ್ಟರ್
ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಪ್ರಗತಿ ಸಾಧಿಸಿದ್ದು ಅಗ್ರಸ್ಥಾನಕ್ಕೇರಿದ್ದಾರೆ. ಗುಜರಾತ್ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ಒಟ್ಟು 328 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಅಗ್ರಸ್ಥಾನಿಯಾಗಿದ್ದ ಅಭಿಷೇಕ್ ಶರ್ಮಾ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ಪಾಯಿಂಟ್ಸ್ ಟೇಬಲ್‌ನಲ್ಲಿ ಏರಿದ RCB
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಅಂತರದ ಗೆಲುವು ಸಾಧಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಪಂದ್ಯಕ್ಕೂ ಮುನ್ನ ಮೂರನೇ ಸ್ಥಾನದಲ್ಲಿತ್ತು. ಸದ್ಯ ಆರ್‌ಸಿಬಿ ಆಡಿದ 7 ಪಂದ್ಯಗಳಲ್ಲಿ 5 ಗೆಲುವು 2 ಸೋಲಿನೊಂದಿಗೆ 10 ಅಂಕ ಗಳಿಸಿದೆ. ತಂಡದ ರನ್‌ರೇಟ್ ಕೂಡ ಉತ್ತಮವಾಗಿದ್ದು +1.101 ಇದೆ. ಆರ್‌ಸಿಬಿ ಪ್ಲೇ ಆಫ್ ಹಾದಿ ಸುಲಭವಾಗಿದೆ. ಇನ್ನೂಳಿದ ಪಂದ್ಯದಲ್ಲಿ ಆರ್‌ಸಿಬಿ 3 ಪಂದ್ಯ ಗೆದ್ದರೂ ಕೂಡ ಪ್ಲೇ ಆಫ್‌ಗೆ ಹೊಗಲಿದೆ.

ನೋಡಿರಿ

